"ಭಾರತದೆಡೆಗೆ ವಿಶ್ವ ತಿರುಗಿ ನೋಡಲು ಕಾರಣ ನಮ್ಮ ಯುವಶಕ್ತಿ"- ಪ್ರಧಾನಿ ಮೋದಿ
"ಭಾರತದೆಡೆಗೆ ವಿಶ್ವ ತಿರುಗಿ ನೋಡಲು ಕಾರಣ ನಮ್ಮ ಯುವಶಕ್ತಿ"- ಪ್ರಧಾನಿ ಮೋದಿ

ಭಾರತದೆಡೆಗೆ ಇಡೀ ವಿಶ್ವ ತಿರುಗಿ ನೋಡುವಂತಾಗಲು ಕಾರಣ ಇಲ್ಲಿನ ಯುವಶಕ್ತಿ. ಭಾರತದ ಭವಿಷ್ಯದ ಪಯಣದ ಚಾಲಕಶಕ್ತಿಯೂ ಯುವಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ 26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರಾಡಿದ ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಉದ್ಘೋಷವು ಯುವಕರ ಪಾಲಿನ ಅಮೃತ ಮಂತ್ರ. ಕೆಲಸಗಳಿಗೆ ಒತ್ತು ನೀಡಿ, ಅವುಗಳನ್ನು ಅರಿತು ದೇಶವನ್ನು ಮುನ್ನಡೆಸುವುದು ಈ ಹೊತ್ತಿನ ಅವಶ್ಯಕತೆಯಾಗಿದೆ. ಭಾರತದ ಯುವಕರ ಸಾಮರ್ಥ್ಯಕ್ಕೆ ಇಡೀ ವಿಶ್ವವೇ ಬೆರಗಾಗಿದೆ. ಆ ತಾಕತ್ತನ್ನು ಸದಾ ಕಾಲ ಉಳಿಸಿ ಬೆಳೆಸಿಕೊಂಡು ಹೋಗಲು ಶ್ರಮಿಸಬೇಕು. ಯುವಶಕ್ತಿ ಬಳಕೆಯಾದಾಗ ದೇಶವನ್ನು ಸಮರ್ಥವಾಗಿ ನಿರ್ಮಾಣ ಮಾಡುವುದು ಸುಲಭ ಎಂದರು.

ಕರ್ನಾಟಕದೊಂದಿಗೆ ಸ್ವಾಮೀಜಿಯವರಿಗೆ ಉತ್ತಮ ಸಂಬಂಧವಿತ್ತು. ಶಿಕಾಗೊ ಯಾತ್ರೆಗೆ ಸ್ವಾಮೀಜಿಯವರನ್ನು ಕಳುಹಿಸಲು ಮೈಸೂರು ಮಹಾರಾಜರ ಸಹಾಯವಿದೆ. ಏಕಭಾರತ ಶ್ರೇಷ್ಠ ಭಾರತಕ್ಕೆ ಎಂಬುದಕ್ಕೆ ಇದೇ ಉದಾಹರಣೆ ಎಂದು ತಿಳಿಸಿದರು.

ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ನಾರಾಯಣ ಮಹಾದೇವ ದೋನಿ ಸೇರಿದಂತೆ ಕರ್ನಾಟಕದ ಮಣ್ಣು ಅನೇಕ ಮಹಾನ್ ಮಾನವರನ್ನು ಸೃಷ್ಟಿಸಿದೆ. ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ಅವರು ಯುವಕರ ಶೌರ್ಯ ಎಂತಹುದು ಎಂಬುದನ್ನು ತೋರಿಸಿಕೊಟ್ಟರು. ನಮ್ಮ ಎಂಜಿನಿಯರ್‌ಗಳ ಸಾಮರ್ಥ್ಯವನ್ನು ಸರ್‍ ಎಂ. ವಿಶ್ವೇಶ್ವರಯ್ಯನವರು ತೋರಿಸಿಕೊಟ್ಟರು. ವಿಶ್ವವನ್ನೇ ಚಕಿತಗೊಳಿಸುವ ಸಾಮರ್ಥ್ಯ ಎಲ್ಲಾ ರಂಗಗಳಲ್ಲಿ ಭಾರತೀಯರು ಮೈಗೂಡಿಸಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!