ಭಾರತದ ಬಳಿಕ ಚಂದ್ರನೆಡೆಗೆ ನೌಕೆ ಕಳುಹಿಸಿದ ರಷ್ಯಾ.!
ಭಾರತದ ಚಂದ್ರಯಾನ-3 ಉಡಾವಣೆ ಬೆನ್ನಲ್ಲೇ ಚಂದ್ರನೆಡೆಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ ರಷ್ಯಾ

ಭಾರತವು ಕಳೆದ ತಿಂಗಳು ಚಂದ್ರಯಾನ-3 ಉಡಾವಣೆ ಮಾಡಿದ್ದು, ಇದರ ಬೆನ್ನಲ್ಲೇ ಇದೀಗ ರಷ್ಯಾ ಸುಮಾರು 50 ವರ್ಷಗಳ ಬಳಿಕ ಮೊದಲ ಬಾರಿ ಚಂದ್ರನೆಡೆಗೆ ತನ್ನ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ್ದು, ಮೊದಲು ಯಾವುದು ಲ್ಯಾಂಡ್ ಆಗಲಿದೆ ಎಂಬ ಕೂತುಹಲ ಹೆಚ್ಚಿದೆ.

ಲೂನಾ-25 ಪ್ರೋಬ್ ಎಂಬ ನೌಕೆ ಅನ್ನು ಹೊತ್ತ ರಾಕೆಟ್ ಗುರುವಾರ ಸ್ಥಳೀಯ ಕಾಲಮಾನ 02:10 ವೇಳೆಗೆ ವೊಸ್ಟೊಚ್ನಿ ಕಾಸ್ಮೊಡ್ರೋಮ್‌ನಿಂದ ಉಡಾವಣೆಯಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ತಿಳಿಸಿದೆ. ಇನ್ನು ಈ ಉಪಗ್ರಹ ಆಗಸ್ಟ್ 21ರ ವೇಳಗೆ ಚಂದ್ರನ ಮೇಲೆ ಇಳಿಯುವ ಸಾಧ್ಯತೆಯಿದ್ದು, ಕೇವಲ 5 ದಿನಗಳಲ್ಲಿ ಚಂದ್ರನ ಕಕ್ಷೆ ಮುಟ್ಟಿ, 7 ದಿನಗಳಲ್ಲಿ ಲೂನಾ ಲ್ಯಾಂಡ್ ಆಗಲಿದೆ.

ಇಸ್ರೋದ ನೌಕೆಗಿಂತ ಕೆಲವು ನಿಮಿಷಗಳ ಮೊದಲೇ ದಕ್ಷಿಣ ಧ್ರುವದಲ್ಲಿ ರಷ್ಯಾದ ಲೂನಾ-25 ನೌಕೆ ಇಳಿಯುವ ಮೂಲಕ ರಷ್ಯಾ ಚೊಚ್ಚಲ ಇತಿಹಾಸವನ್ನು ತನ್ನ ಹೆಸರಿಗೆ ಬರೆಯುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಲೂನಾ-25 ಇಳಿಯಲಿದ್ದು, ಇಲ್ಲಿಯವರೆಗೆ ಚಂದ್ರನ ಮೇಲೆ ನಡೆಸಲಾಗಿರುವ ಎಲ್ಲಾ ಕಾರ್ಯಾಚರಣೆಗಳು ಸಮಭಾಜಕ ವಲಯದಲ್ಲಿ ಇಳಿದಿವೆ ಎಂದು ಹಿರಿಯ ರೋಸ್ಕೊಸ್ಮಾಸ್ ಅಧಿಕಾರಿ ಅಲೆಕ್ಸಾಂಡರ್ ಬ್ಲೋಖಿನ್ ಹೇಳಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!