ಹುಲಿವೇಷದಾರಿ ಅಶೋಕ್ ರಾಜ್ ಆರೋಗ್ಯದಲ್ಲಿ ಏರುಪೇರು
ಈ ಸಮಾಜಸೇವಕನ ಕಷ್ಟಕ್ಕೆ ನೆರವಾಗುವಿರ.?

ಸಂಪ್ರಾದಾಯಕ ಹುಲಿವೇಷದಾರಿ, ಹುಲಿಕುಣಿತದಲ್ಲಿ ತನ್ನದೇ ಆದ ಚಾಪು ಮೂಡಿಸಿದ ಕಾಡುಬೆಟ್ಟು ಅಶೋಕ್ ರಾಜ್ ಅನಾರೋಗ್ಯಕ್ಕೆ ಒಳಗಾಗಿದ್ದು ಬೆಂಗಳೂರಿನ ಆಸ್ವತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದ್ದು ಇವರ ಕುಟುಂಬ ಇದೀಗ ಸಹೃದಯ ದಾನಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ. 

ಹುಲಿವೇಷದ ಮೂಲಕವೇ ಹೆಸರುವಾಸಿಯಾಗಿರುವ ಅಶೋಕ್ ರಾಜ್ ಇವರದ್ದು ದೊಡ್ಡ ಇತಿಹಾಸವೇ ಇದೆ. ಇವರು ಸಂಗ್ರಹಿಸಿದ ಹಣದಲ್ಲಿ ಸಮಾಜ ಸೇವೆ ಮಾಡಿದ್ದಾರೆ ಹೊರತು ಸ್ವಂತಕ್ಕಾಗಿ ಬಳಸಿಕೊಂಡವರಲ್ಲ. ಇವರ ನಾಯಕತ್ವದಲ್ಲಿ ಉಡುಪಿಯಲ್ಲಿ ಹಲವಾರು ಹುಲಿವೇಷ ಧಾರಿಗಳಿಗೆ ತರಬೇತಿ ನೀಡಿದವರು. ಎಷ್ಟೋ ಜನರಿಗೆ ಗುರುಸ್ಥಾನದಲ್ಲಿರುವವರು.  ಕಳೆದ ವರುಷ ಮಣಿಪಾಲದ ಮಾಹೆಯಲ್ಲಿ  ಜಾನಪದ ಕಲೆಯಲ್ಲಿ ಹುಲಿವೇಷ ಕುಣಿತ ಹೆಜ್ಜೆ ಹಾಗೂ ನಲಿಕೆಯ ಅಧ್ಯಯನದ ದಾಖಲೆಯು ಇವರದ್ದೇ ತಂಡವಾಗಿತ್ತು. ಅದೇರೀತೀ ಇಪ್ಪತ್ತೈದು ವರುಷ ಹಿಂದೆ ಅಂತರಾಷ್ಟ್ರೀಯ ಮಟ್ಟದ ಬಿ.ಬಿ.ಸಿ ವಾಹಿನಿಯ ತಂಡಕ್ಕೆ ಪ್ರೊಫೆಸರ್ ಎಸ್ ಎ.  ಕೃಷ್ಣಯ್ಯರವರ ಮೂಲಕ ಉಡುಪಿಯಲ್ಲಿ ಹುಲಿಕುಣಿತದ ಚಿತ್ರಿಕರಣ ನಡೆದಾಗಲೂ ಅಶೋಕ್ ರಾಜ್ ಅವರ ತಂಡ ಆಯ್ಕೆಯಾಗಿತ್ತು. ಕಳೆದ 36ವರುಷದಿಂದ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಉಡುಪಿಯಲ್ಲಿ ಸಾಂಪ್ರದಾಯಿಕ ಹುಲಿವೇಷ ಧರಿಸಿದ್ದರು. 28ವರುಷ ಹುಲಿವೇಷ ತಂಡ ರಚಿಸಿ ಉಬಯ ಜಿಲ್ಲೆಗಳಲ್ಲಿ ತಂಡವವು ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಚೌತಿಯ ಪ್ರಯುಕ್ತ ಕಳೆದ ಹತ್ತು ದಿನಗಳಿಂದ, ಕೇರಳ, ಹುಬ್ಬಳ್ಳಿ, ತುಮಕೂರು, ಮತ್ತು ಬೆಂಗಳೂರಿನ ಆಯ್ದ ಕಡೆಗಳಲ್ಲಿ ನಿರಂತರವಾಗಿ ತಮ್ಮ ತಂಡದೊ0ದಿಗೆ ಹುಲಿವೇಷ ಧರಿಸಿ ಪ್ರದರ್ಶನ ವನ್ನ ನೀಡುತ್ತಿದ್ದರು. ಕೊನೆಯ ಕಾರ್ಯಕ್ರಮ ಶುಕ್ರವಾರ ನಡೆದಿದ್ದು ಈ ವೇಳೆ ಊಟದ ಸಮಯದಲ್ಲಿ ಅಶೋಕ್ ರಾಜ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಬೆಂಗಳೂರಿನ ಸ್ವರ್ಶ ಆಸ್ಪತ್ರೆಗೆ ದಾಖಲಿಸಿ. ನಂತರ ತ್ರೀವ್ರ ಉಸಿರಾಟದ ತೊಂದರೆ ಕಂಡುಬ0ದು, ತೀವ್ರ ಹೃದಯಾಘಾತವಾಗಿ ಕೋಮ ತಲುಪಿದ್ದರು. ಆರೋಗ್ಯದಲ್ಲಿ ಕಂಡುಬರುತ್ತಿರುವ ತೀವ್ರತೆಯನ್ನ ಅರಿತು ತಕ್ಷಣ ಬೆಂಗಳೂರಿನ ದಯಾನಂದ ಸಾಗರ ಆಸ್ವತ್ರೆಗೆ ವರ್ಗಾಯಿಸಲಾಯಿತು.

ಇದೀಗ ತ್ರೀವ್ರ ನೀಗಾ ಘಟಕದಲ್ಲಿ ಹೃದಯಸಂಬ0ಧಿ ಹಾಗೂ ಮೆದುಳಿಗೆ ಸಂಬ0ಧಿಸಿದ0ತೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಶೋಕ್ ರಾಜ್ ಅವರ ಪುತ್ರಿ ಸುಷ್ಮಾ ರಾಜ್ ತಿಳಿಸಿದ್ದಾರೆ.  ಇನ್ನು ಹತ್ತುದಿನಗಳ ಗಡುವನ್ನ ವೈದ್ಯರು ನೀಡಿದ್ದಾರೆ. ಬೆಂಗಳೂರಿನನಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿದದ್ದು ದಿನಕ್ಕೆ ಒಂದು ಲಕ್ಷ ವೆಚ್ಚವಾಗುತ್ತಿದೆ. ಈಗಾಗಲೇ ನಾಲ್ಕೈದು ದಿನ ಕಳೆದಿದೆ. ಕಲಾವಿದರು ಹಾಗೂ ಇವರ ಕುಟುಂಬದವರು ಹಣ ಹೊಂದಿಸಲು ಎಲ್ಲಾ ರೀತಿಯ ಪ್ರಯತ್ನವನ್ನ ಮಾಡಿದ್ದಾರೆ. ಆದರೆ ದೊಡ್ಡ ಮೊತ್ತದ ಹಣ ಹೊಂದಿಸಲು ಇದೀಗ ಸಹೃದಯ ದಾನಿಗಳ ಸಹಾಯಹಸ್ತ ಬೇಕಾಗಿದೆ. ಅಶೋಕ್ ರಾಜ್ ಇವರ ಚಿಕಿತ್ಸೆಗೆ ಹಣದ ನೆರವು ನೀಡುವವರು ಇವರ ಬ್ಯಾಂಕ್ ಖಾತೆಗೆ ಹಣ ವರ್ಗಾಹಿಸಬಹುದಾಗಿದೆ. ಈಗಾಗಲೇ ನಾಲ್ಕೈದು ದಿನ ಕಳೆದಿದೆ. ಇರುವ ಹಣವನೆಲ್ಲ ವ್ಯೇಯಿಸಿ ಇದೀಗ ಕಲಾವಿದನ ಕುಟುಂಬ ಆತಂಕದಲ್ಲಿದ್ದಾರೆ. ಇವರ ಬ್ಯಾಂಕ್ ಖಾತೆ ವಿವರ ಇಲ್ಲಿ ನೀಡಲಾಗಿದೆ.

ಕಲಾವಿದರಿಗೆ ಕಷ್ಟಕಾಲದಲ್ಲಿ ಸಹಕಾರ ನೀಡಿ:

G pay / phone pay NO 9980250447

Bank name : Canara bank

Name : Ashok raj 

Branch : Brahmagiri 

Account no: 02222200029903

IFSC : CNRB0010222


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!