ಇಬ್ಬರು ಗಂಡು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ.!
ಪುಟ್ಟ ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆಗೆ ಶರಣು

ಇಬ್ಬರು ಪುಟ್ಟ ಮಕ್ಕಳೊಂದಿಗೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಚ್ಚಿಯ ಕಡಮಕ್ಕುಡಿಯಲ್ಲಿ ನಡೆದಿದೆ.

ಮೃತರನ್ನು ಮಿಜೋ ಜಾನಿ (39), ಅವರ ಪತ್ನಿ ಶಿಲ್ಪಾ(32) ಮತ್ತು ಅವರ ಮಕ್ಕಳು ಆರಾನ್ (5) ಮತ್ತು ಎಬೆಲ್ (7) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಂಪತಿಯೇ ಮಕ್ಕಳನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮಿಜೋ ಮತ್ತು ಶಿಲ್ಪಾ, ತಮ್ಮ ಮಕ್ಕಳೊಂದಿಗೆ ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು, ಮಿಜೋ ಅವರ ತಾಯಿ ಮತ್ತು ಸಹೋದರ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಡಿಸೈನರ್ ಆಗಿದ್ದ ಮಿಜೋ ಅವರ ಸಹೋದ್ಯೋಗಿಯೊಬ್ಬರು ಮಂಗಳವಾರ ಬೆಳಗ್ಗೆ ಅವರನ್ನು ಹುಡುಕಿಕೊಂಡು ಬಂದಿದ್ದಾರೆ. ಆದರೆ ಮನೆಯವರು ಸ್ಪಂದಿಸದಿರುವುದನ್ನು ಅರಿತು ಬಾಗಿಲು ಒಡೆದಿದ್ದಾರೆ.

ವರದಿಗಳ ಪ್ರಕಾರ, ಶಿಲ್ಪಾ ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿದ್ದರು ಆದರೆ ವೀಸಾ ತೊಂದರೆ ಹಿನ್ನಲೆ ಒಂದು ತಿಂಗಳೊಳಗೆ ಮರಳಿದ್ದರು. ಹಣಕಾಸಿನ ಸಮಸ್ಯೆಯೇ ಈ ಕ್ರಮಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕುಟುಂಬದವರ ಮೃತದೇಹಗಳನ್ನು ಪರವೂರು ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಪೊಲೀಸ್ ತನಿಖೆಯೂ ನಡೆಯುತ್ತಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!