ತಮಿಳಿನ ಖ್ಯಾತ ನಟ ವಿಜಯ ಆ್ಯಂಟೋನಿ ಪುತ್ರಿ ಆತ್ಮಹತ್ಯೆ
ವಿಜಯ್ ಆ್ಯಂಟನಿ ಕುಟುಂಬದಲ್ಲಿ ಕಹಿ ಘಟನೆ - ಮಗಳು ಮೀರಾ ಆತ್ಮಹತ್ಯೆ

ತಮಿಳಿನ ಖ್ಯಾತ ನಟ ವಿಜಯ್ ಆ್ಯಂಟನಿ ಕುಟುಂಬದಲ್ಲಿ ಕಹಿ ಘಟನೆ ಒಂದು ನಡೆದಿದೆ. ಅವರ ಮಗಳು ಮೀರಾ ಇಂದು (ಸೆಪ್ಟೆಂಬರ್ 19) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 16 ವರ್ಷ ವಯಸ್ಸಾಗಿತ್ತು. ಅವರನ್ನು ಚೆನ್ನೈನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ. 

ಮೀರಾ ಅವರು ಇಂದು ಮುಂಜಾನೆ ತಾವು ಇದ್ದ ರೂಂನಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಅವರು ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಹಲವು ಸಮಯದಿಂದ ಅವರು ಖಿನ್ನತೆಗೆ ಒಳಗಾಗಿದ್ದರು. ಈ ಸಾವಿನ ಕುರಿತು ತನಿಖೆ ಕೂಡ ನಡೆಯುತ್ತಿದೆ. ವಿಜಯ್ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಅಭಿಮಾನಿಗಳು ಕೋರಿಕೊಳ್ಳುತ್ತಿದ್ದಾರೆ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆಕೆಯ ತಂದೆ ಮಗಳ ಕೋಣೆಯಲ್ಲಿ ನೋಡಿದಾಗ ಆಕೆಯ ದುಪ್ಪಟ್ಟಾ ಬಳಸಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಮನೆಯ ಕೆಲಸಗಾರರ ಸಹಾಯದಿಂದ ಆಕೆಯನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದರಾದರೂ ಆಕೆಯ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ. ಆಳ್ವಾರಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!