ಬಿಗ್ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಹೊಸ ಕಾರಿಗೆ ಅಪಘಾತ; ಆಟೋ ಚಾಲಕ ಸಾವು
ತುಕಾಲಿ ಸಂತೋಷ್​ ಕಾರಿಗೆ ಡಿಕ್ಕಿ ಹೊಡೆದ ಪ್ರಕರಣ
ಚಿಕಿತ್ಸೆ ಫಲಿಸದೆ ಆಟೋ ಚಾಲಕ ಸಾವು

ತುಮಕೂರು: ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ತುಕಾಲಿ ಸಂತೋಷ್​ ಕಾರು ಅಪಘಾತದಲ್ಲಿ ಆಟೋ ಚಾಲಕ ಸಾವನ್ನಪ್ಪಿದ್ದಾನೆ. ಜಗದೀಶ್ (44) ಮೃತ ಆಟೋ ಚಾಲಕ.

ತಡರಾತ್ರಿ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ತುಕಾಲಿ ಸಂತೋಷ್​ ಕಾರಿಗೆ ಆಟೋ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಜಗದೀಶ್​​ ಇಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತ ಆಟೋ ಚಾಲಕ ಕುಣಿಗಲ್ ತಾಲೂಕು ಕೋಡಿಹಳ್ಳಿಪಾಳ್ಯ ನಿವಾಸಿ. ತಡರಾತ್ರಿ ತುಕಾಲಿ ಸಂತೋಷ್​ ಅವರು ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ಹೋಗುತ್ತಿದ್ದರು. ಅದೇ ಮಾರ್ಗದಲ್ಲಿ ಕುಣಿಗಲ್​ನಿಂದ ಕುರುಡಿಹಳ್ಳಿಗೆ ಆಟೋ ಬರುತ್ತಿತ್ತು.

ಈ ವೇಳೆ ತುಕಾಲಿ ಸಂತೋಷ್ ಕಾರಿಗೆ ಕುಡಿದ ಅಮಲಿನಲ್ಲಿ ಆಟೋ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಆದರೆ ಆಟೋ ಚಾಲಕನಿಗೆ ಗಂಭೀರವಾಗಿ ಗಾಯಗಳಾಗಿದ್ದವು. ಆ ಕೂಡಲೇ ಚಾಲಕ ಜಗದೀಶ್​ನನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಟೋ ಚಾಲಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!