ಉಳ್ಳಾಲ: ಅಕ್ರಮ ಮರಳುಗಾರಿಕೆ.! ಸಿಸಿಟಿವಿ ಹಾಳು ಮಾಡಿದ ಇಬ್ಬರು ಅರೆಸ್ಟ್
ತುಂಬಿನಾಡ್ ಮೂಲದ ದಿಶಾಂತ್ (21) ಮತ್ತು ರಕ್ಷಿತ್ (32) ಬಂಧನ

ಮಂಗಳೂರು: ಅಕ್ರಮ ಮರಳುಗಾರಿಕೆ ಕಣ್ಗಾವಲಿಗೆ ಜಿಲ್ಲಾಡಳಿತ ಹಾಕಿದ್ದ ಸಿಸಿ ಕ್ಯಾಮರಾ ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ತುಂಬಿನಾಡ್ ಮೂಲದ ದಿಶಾಂತ್ (21) ಮತ್ತು ರಕ್ಷಿತ್ (32) ಎಂದು ಗುರುತಿಸಲಾಗಿದೆ. ಅವರು ಎರಡು ದಿನಗಳ ಹಿಂದೆ ಸೋಮೇಶ್ವರದಲ್ಲಿ ಮರಳು ಸಾಗಾಟ ಮಾಡುವ ಉದ್ದೇಶದಿಂದ ಸಿಸಿ ಕ್ಯಾಮರಾಕ್ಕೆ ಹಾನಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಮರಳು ಸಾಗಾಟ ತಡೆಯುವುದಕ್ಕಾಗಿ ದ.ಕ. ಜಿಲ್ಲಾಡಳಿತ ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸದಂತೆ ಕಣ್ಗಾವಲಿಗೆ ಸಿಸಿ ಕ್ಯಾಮರಾ ಅಳವಡಿಸಿತ್ತು. ಕೆಲ ತಿಂಗಳ ಹಿಂದೆ ತಂಡವೊಂದು ಸೋಮೇಶ್ವರ ಬೀಚ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾವನ್ನು ಲಾರಿಯಿಂದ ಢಿಕ್ಕಿ ಹೊಡೆದು ಕೆಡವಲು ಯತ್ನಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿತ್ತು.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!