ಪರಶುರಾಮ ಥೀಮ್ ಪಾರ್ಕ್ ವಿವಾದ; ಫೋಟೊ ತೆಗೆಯಲು ಹೋದ ಯುವಕನಿಗೆ ಹಲ್ಲೆ
ಪರಶುರಾಮ ಥೀಮ್ ಪಾರ್ಕ್ ವಿವಾದ; ಫೋಟೊ ತೆಗೆಯಲು ಹೋದ ಯುವಕನಿಗೆ ಹಲ್ಲೆ

ಕಾರ್ಕಳ: ಬೈಲೂರಿನ ಪರಶುರಾಮ ಥೀಮ್ ಪಾರ್ಕಿಗೆ ಫೋಟೋ ತೆಗೆಯಲು ಹೋದ ಯುವಕನಿಗೆ ಯುವಕರ ಗುಂಪು ತೊಂದರೆ ನೀಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳದ ಅಲ್ಟಾಝ್ (26) ಎಂಬವರು ಅ.19ರಂದು ಸಂಜೆ ಬೈಲೂರಿನ ಪರಶುರಾಮ ಥೀಮ್ ಪಾರ್ಕಿಗೆ ಫೋಟೋ ತೆಗೆಯಲು ತೆರಳಿದ್ದು, ಈ ವೇಳೆ ಅಲ್ಲಿಯೇ ಇದ್ದ ಯುವಕರು ಅಕ್ರಮ ಕೂಟ ಸೇರಿ ಅಲ್ಪಾಝ್ ಅವರನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ದೂರು ದಾಖಲಾಗಿದೆ. ಬಿಜೆಪಿ ಯುವ ಮೋರ್ಚಾದ ಮುಖಂಡರಾದ ವಿಖ್ಯಾತ್ ಶೆಟ್ಟಿ, ಸುಹಾಸ್ ಮುಟ್ಲಪಾಡಿ, ರಾಕೇಶ್ ಕುಕ್ಕುಂದೂರು, ರಂಜಿತ್ ಕೌಡೂರು, ಮುಸ್ತಾ ಜಾರ್ಕಳ ಮೊದಲಾದವರು ಹಲ್ಲೆ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. 

ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಮೂರ್ತಿಯ ಬಳಿ ಕರೆದುಕೊಂಡು ಹೋಗಿ ಅದು ಕಂಚಿನ ಮೂರ್ತಿ ಎಂಬುದಾಗಿ ಸುತ್ತಿಗೆ ನೀಡಿ ಪರೀಕ್ಷಿಸು ಎಂದು ಹೇಳಿದ್ದಲ್ಲದೇ, ಅಲ್ಫಾಜ್ ಅವರಲ್ಲಿ 'ಅದು ಕಂಚಿನ ಮೂರ್ತಿ' ಎಂದು ಹೇಳಿಸಿ ವಿಡಿಯೋ ಮಾಡಿ ತೊಂದರೆ ಮಾಡಲು ಪ್ರಯತ್ನಿಸಿದ್ದಾರೆ. ಅಲ್ಲದೆ ಅಲ್ಟಾಝ್ ರವರ ಮೊಬೈಲನ್ನು ಎಳೆದುಕೊಂಡು ತೊಂದರೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!