ಮಂಗಳೂರು: ಸ್ಟಾರ್ ರೇಟಿಂಗ್ ಟಾಸ್ಕ್; 21.5 ಲಕ್ಷ ವಂಚನೆ
ಮಂಗಳೂರು: ಸ್ಟಾರ್ ರೇಟಿಂಗ್ ಟಾಸ್ಕ್; 21.5 ಲಕ್ಷ ವಂಚನೆ

ಮಂಗಳೂರು: ಆನ್‌ಲೈನ್‌ನಲ್ಲಿ ಸ್ಟಾರ್ ರೇಟಿಂಗ್ ನೀಡುವ ಗುರಿ ನೀಡಿ, ಹಣ ಕಟ್ಟಿಸಿಕೊಂಡು 21.51 ಲಕ್ಷ ವಂಚನೆ ನಡೆಸಿದ ಬಗ್ಗೆ ಇಲ್ಲಿನ ಸೆನ್ ಕೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನನ್ನ ವಾಟ್ಸಾಪ್ ಸಂಖ್ಯೆಗೆ ನ. 4ರಂದು ಸಂದೇಶ ಬಂದಿತ್ತು. ಅದರ ಜೊತೆಗೆ ಆನ್‌ಲೈನ್ ವೆಬ್‌ಸೈಟ್‌ನ ಕೊಂಡಿಯನ್ನು ಕಳುಹಿಸಿದ್ದರು. ಅದನ್ನು ತೆರೆದಾಗ ಟೆಲಿಗ್ರಾಂ ಆಪ್‌ನ ಗ್ರೂಪ್‌ಗೆ ನನ್ನನ್ನು ಸೇರಿಸಿದ್ದರು. ನನಗೆ 'ಸ್ಟಾರ್ ರೇಟಿಂಗ್ ಎಂಬ ಟಾಸ್ಕ್ ನೀಡಲಾಗಿತ್ತು. ಅದರ ಸಲುವಾಗಿ ಆರಂಭದಲ್ಲಿ 5 ಸಾವಿರ ಹಣವನ್ನು ಪಾವತಿಸಿದ್ದೆ. ಪ್ರತಿಯಾಗಿ ನನ್ನ ಖಾತೆಗೆ  6,500 ಜಮೆ ಮಾಡಿದ್ದರು. ನಂತರ 'ಗ್ರೂಪ್ ಮರ್ಚೆಂಟ್ ಟಾಸ್ಕ್' ಮಿಷನ್ ಪೂರ್ಣಗೊಳಿಸಲು ಹಣ ಕಟ್ಟುವಂತೆ ಸೂಚಿಸಿದ್ದರು. ಇದಕ್ಕಾಗಿ ನ. 4ರಿಂದ ನ.7ರವರೆಗೆ ಹಂತ-ಹAತವಾಗಿ ಒಟ್ಟು 21.51 ಲಕ್ಷವನ್ನು ಪಾವತಿಸಿದ್ದೆ. ನಂತರ ಹಣವನ್ನು ಮರಳಿಸದೇ ವಂಚಿಸಲಾಗಿದೆ ಎಂದು ವಂಚನೆಗೊಳಗಾದ ವ್ಯಕ್ತಿ ದೂರಿದ್ದಾರೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!