ಸಹೋದರನಿಗೆ ಕಿಡ್ನಿ ನೀಡಿದ್ದಕ್ಕೆ ತಲಾಖ್ ನೀಡಿದ ಗಂಡ
ಸಹೋದರನಿಗೆ ಕಿಡ್ನಿ ನೀಡಿದ್ದಕ್ಕೆ ತಲಾಖ್ ನೀಡಿದ ಗಂಡ

ಸಹೋದರನಿಗೆ ಕಿಡ್ನಿ ದಾನ ಮಾಡಿದ ಮಹಿಳೆಗೆ ಪತಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಬೈರಿಯಾಹಿ ಗ್ರಾಮದ ಮಹಿಳೆಯ ಪತಿ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು, ಮಹಿಳೆ ತನ್ನ ತಾಯಿ ಮತ್ತು ಸಹೋದರನೊಂದಿಗೆ ವಾಸವಾಗಿದ್ದಳು.

ಕೆಲವು ವಾರಗಳ ಹಿಂದಷ್ಟೆ ಸಹೋದರನ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು, ವೈದ್ಯರು ಪರೀಕ್ಷೆ ನಡೆಸಿ ಕಿಡ್ನಿಯಲ್ಲಿ ಸಮಸ್ಯೆ ಇರುವುದಾಗಿ ಹೇಳಿದ್ದು, ಕಿಡ್ನಿ ಬದಲಾವಣೆ ಮಾಡಬೇಕು ಎಂದು ತಿಳಿಸಿದ್ದಾರೆ.

ಕೂಡಲೇ ಮಹಿಳೆ ಸಹೋದರನಿಗಾಗಿ ತನ್ನ ಕಿಡ್ನಿ ನೀಡಿದ್ದಾಳೆ. ಶಸ್ತ್ರ ಚಿಕಿತ್ಸೆ ಬಳಿಕ ಇಬ್ಬರೂ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಬಳಿಕ ಮಹಿಳೆ ತಾನು ಸಹೋದರನಿಗೆ ಕಿಡ್ನಿ ದಾನ ಮಾಡಿರುವ ವಿಚಾರವನ್ನು ಪತಿಗೆ ಫೋನ್ ನಲ್ಲಿ ತಿಳಿಸಿದ್ದು, ಇದರಿಂದ ಕೋಪಗೊಂಡ ಪತಿ ಆಕೆಗೆ ಫೋನ್ ನಲ್ಲೇ ತ್ರಿವಳಿ ತಲಾಖ್ ನೀಡಿದ್ದಾನೆ. 

ಪತಿಯ ಪ್ರತಿಕ್ರಿಯೆ ನೋಡಿ ಆಘಾತಗೊಂಡ ಮಹಿಳೆ ಪತಿಯ ವಿರುದ್ಧ ಠಾಣೆಗೆ ದೂರು ನೀಡಿದ್ದಾಳೆ. 2019 ರಲ್ಲೇ ದೇಶದಲ್ಲಿ ತ್ರಿವಳಿ ತಲಾಕ್ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಲಾಗಿದೆ. ಹೀಗಾಗಿ ಇದಕ್ಕೆ ಮಾನ್ಯತೆ ಇಲ್ಲ. ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!