ಸುಳ್ಯ: ಮರಗಳ ಕಡಿದು ಸಾಗಾಟ - ಸೊತ್ತುಗಳ ಸಹಿತ 4 ಮಂದಿ ವಶಕ್ಕೆ.!
ಅಕ್ರಮ ಮರ ಸಾಗಾಟ ಯತ್ನ - ಲಾರಿ, ಕ್ರೇನ್ ಸಹಿತ ನಾಲ್ಕು ಮಂದಿ ಸೆರೆ

ಸುಳ್ಯ: ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ ಮಾಡಲು ಯತ್ನಿಸಿದ ಘಟನೆ ಸುಳ್ಯ ಕಸಬಾ ಗ್ರಾಮದ ಶಾಂತಿ ನಗರದಲ್ಲಿ ಗುರುವಾರ ನಡೆದಿದ್ದು, ಮರ ಸಾಗಾಟದ ಲಾರಿ, ಕ್ರೇನ್ ಸಹಿತ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಶಾಂತಿನಗರದ ವೆಂಕಪ್ಪ ನಾಯ್ಕರ ಜಮೀನುನಲ್ಲಿದ್ದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿದ್ದ ವೇಳೆ ಸುಳ್ಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸೌಮ್ಯ ಪಿ. ಎನ್. ನೇತೃತ್ವದ ತಂಡ ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ. 

ಘಟನೆಯಲ್ಲಿ ಅಕ್ರಮ ಮರ ಸಾಗಾಟ ಮಾಡಲು ಬಳಸಿದ ಲಾರಿ, ಕ್ರೇನ್ ಹಾಗೂ 7.946 ಘ. ಮೀ.ಮರವನ್ನು ವಶ ಪಡಿಸಿಕೊಂಡಿದ್ದಾರೆ. ಹಾಗೂ ಆರೋಪಿಗಳಾದ ಕೆ.ವೆಂಕಪ್ಪ ನಾಯ್ಕ ಶಾಂತಿನಗರ, ಮರದ ವ್ಯಾಪಾರಿ ಹಳೆಗೇಟಿನ ರಿಫಾಯಿ ಬಿನ್ ಕುನ್ಹಿಪ್ಪ, ಕ್ರೇನ್ ಚಾಲಕ ಈಶ್ವರ್ ನಾಯ್ಕ ಜಯನಗರ, ಲಾರಿ ಚಾಲಕ ಹಾಸನದ ಚಂದ್ರೇಗೌಡ ಇವರನ್ನು ಬಂಧಿಸಿ ದಸ್ತಗಿರಿ ಮಾಡಲಾಗಿದೆ. ವಾಹನ ಮತ್ತು ಸೊತ್ತುಗಳ ಮೌಲ್ಯ 15 ಲಕ್ಷ ಎಂದು ಅಂದಾಜಿಸಲಾಗಿದೆ. 

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಸೌಮ್ಯ. ಪಿ. ಎನ್, ರಾಘವೇಂದ್ರ ಪ್ರಸಾದ್, ಗಸ್ತು ಅರಣ್ಯ ಪಾಲಕರಾದ ಗೀತಾ, ಪುಷ್ಪಾವತಿ, ನಿಂಗಪ್ಪ ಕೊಪ್ಪ, ವಾಹನ ಚಾಲಕ ಪುರುಷೋತ್ತಮ್ ಭಾಗವಹಿಸಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಟೋನಿ ಎಸ್ ಮರಿಯಪ್ಪ ರವರ ನಿರ್ದೇಶನ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಮಂಜುನಾಥ ಎನ್. ರವರು ತನಿಖೆ ಕೈಗೊಂಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!