ಮಂಗಳೂರು: ಕಮೀಷನರೇಟ್ ವ್ಯಾಪ್ತಿಯಲ್ಲಿ 75 ಅಪರಾಧಿಗಳ ಗಡಿಪಾರು - ಅನುಪಮ್ ಅಗರ್ವಾಲ್
ಕಮೀಷನರೇಟ್ ವ್ಯಾಪ್ತಿಯಲ್ಲಿ 75 ಅಪರಾಧಿಗಳ ಗಡಿಪಾರು - ಅನುಪಮ್ ಅಗರ್ವಾಲ್

ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 75 ಅಪರಾಧಿಗಳ ಗಡಿಪಾರು ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. 

ಪೊಲೀಸ್‌ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಮಗ್ರ ಬಂದೋಬಸ್ತ್ ತಯಾರಿ ಮಾಡಿಕೊಳ್ಳಲಾಗಿದ್ದು, ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್ ವತಿಯಿಂದ ಒಟ್ಟು 46 ಪಿಎಸ್‌ಐ ಸೆಕ್ಟ‌ರ್ ಮೊಬೈಲ್‌ಗಳು, 14 ಪಿಐ ಸೂಪರ್‌ವಿಷನ್ ಸೆಕ್ಟರ್ ಅಧಿಕಾರಿಗಳು ಹಾಗೂ 4 ಎಸಿಪಿ ನೋಡಲ್ ಅಧಿಕಾರಿಗಳನ್ನಾಗಿ ಮತ್ತು ಒಟ್ಟು ಮತಗಟ್ಟೆಗಳಿಗೆ 1003 ಪೊಲೀಸ್ ಸಿಬ್ಬಂದಿಗಳು, 350 ಗೃಹ ರಕ್ಷಕ ಸಿಬ್ಬಂದಿಗಳನ್ನು ಹಾಗೂ 17 ಫಾರೆಸ್ಟ್ ಗಾರ್ಡ್‌ ಗಳನ್ನು ಹಾಗೂ 36 ಕ್ರಿಟಿಕಲ್ ಮತಗಟ್ಟೆಗಳಿಗೆ ಕೇಂದ್ರಿಯ ಭದ್ರತಾ ಪಡೆ ಹಾಗೂ 16 ಎಎಸ್‌ಐ ಅವರನ್ನು ನಿಯೋಜಿಸಲಾಗಿರುತ್ತದೆ ಎಂದರು.

ಮತದಾನದ ದಿನದಂದು ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯಕಟ್ಟಿನ ಜಾಗಗಳನ್ನು ಸೂಕ್ಷ್ಮ ಪ್ರದೇಶಗಳನ್ನಾಗಿ ಗುರುತಿಸಿ ಪಿಐ-03, ಪಿಎಸ್‌ಐ-21 ಹಾಗೂ ಎಎಸ್‌ಐ-13, ಪಿಸಿ/ಎಫ್‌ಜಿ 43 ಒಟ್ಟು 80 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!