ಉಡುಪಿ: ವಿಡಿಯೋ ರೆಕಾರ್ಡ್ ಪ್ರಕರಣ - ಕಾಲೇಜಿಗೆ ಭೇಟಿ ನೀಡಿದ ಖುಷ್ಬೂ
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಭೇಟಿ

ಉಡುಪಿ: ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್‌ ಇಟ್ಟು ವೀಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಭೇಟಿ ನೀಡಿದ್ದಾರೆ.

ಜುಲೈ 27 ರ ಗುರುವಾರ ಬೆಳಿಗ್ಗೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೇ ಮಚೀಂದ್ರ ಮತ್ತು ಆಯೋಗದ ಇತರ ಅಧಿಕಾರಿಗಳೊಂದಿಗೆ ಖುಷ್ಬೂ ಅವರು ಘಟನೆಯ ಕುರಿತಾಗಿ ಮಾಹಿತಿ ಪಡೆದುಕೊಳ್ಳಲು ಕಾಲೇಜು ಕ್ಯಾಂಪಸ್‌ಗೆ ಭೇಟಿ ನೀಡಿದರು. ಅವರು ಕಾಲೇಜು ಆಡಳಿತ ಮಂಡಳಿ, ಸಂತ್ರಸ್ತೆ ಮತ್ತು ಅಪರಾಧಿ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಪ್ರಕರಣದ ವಿಚಾರಣೆಗಾಗಿ ಕಾಲೇಜಿಗೆ ಆಗಮಿಸಿದ ಖುಷ್ಬೂ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿದರು. ಇದೇ ವೇಳೆ ಘಟನೆ ನಡೆದ ಶೌಚಾಲಯ ವನ್ನು ಕೂಡ ಅವರು ಪರಿಶೀಲಿಸಿದರು. ಈ ವೇಳೇ ಕಾಲೇಜಿನ ನಿರ್ದೇಶಕಿ ರಶ್ಮಿ, ಶೈಕ್ಷಣಿಕ ಸಂಯೋಜಕ ಬಾಲಕೃಷ್ಣ, ಪ್ರಾಂಶುಪಾಲ ರಜೀಪ್ ಮೊಂಡಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವಕೀಲೆ ಮೇರಿ ಶ್ರೇಷ್ಠ, ಮತ್ತಿತರರು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!