ಮಂಗಳೂರು: (ಜು.30) ಶ್ರೀ ಪಾಂಡುರಂಗ ದೇವರಿಗೆ ಸಾಮೂಹಿಕ “ಲಕ್ಷ ತುಳಸಿ ಅರ್ಚನೆ"
(ಜು.30) ಶ್ರೀ ಪಾಂಡುರಂಗ ದೇವರಿಗೆ ಸಾಮೂಹಿಕ “ಲಕ್ಷ ತುಳಸಿ ಅರ್ಚನೆ"

ಮಂಗಳೂರು: ಇದೇ ಬರುವ 29ನೇ ತಾರೀಕು ಶನಿವಾರ ಸಾಮೂಹಿಕ ಲಕ್ಷ ತುಳಸಿ ಅರ್ಚನೆಯ ಪ್ರಯುಕ್ತ ವೈದಿಕ ಕಾರ್ಯಕ್ರಮದೊಂದಿಗೆ ಮಂದಿರದ ಪರಿಸರದಿಂದ ತುಳಸಿಯನ್ನು ಸಂಗ್ರಹಿಸಲು ವಿಶಿಷ್ಠವಾಗಿ ತುಳಸಿ ಹೊರೆಕಾಣಿಕೆ ಕಾರ್ಯಕ್ರಮವು ಭಜನೆಯೊಂದಿಗೆ ಹರಿಹರ ಪಾಂಡುರಂಗ ವಿಠಲ ಭಜನಾ ಮಂದಿರ ಟ್ರಸ್ಟ್ (ರಿ) ಕಂಡೆಟ್ಟು, ಬಿಕರ್ನಕಟ್ಟೆಯಲ್ಲಿ ನಡೆಯಲಿದೆ. ಇದರ ಮುಖ್ಯ ಉದ್ದೇಶ ಮಂದಿರದ ಪರಿಸರದ ಭಕ್ತರು ತಮ್ಮ ಮನೆಯಲ್ಲಿ ಬೆಳೆಸಿದ ತುಳಸಿಯನ್ನು ಪಾಂಡುರಂಗನಿಗೆ ಅರ್ಪಿಸಲು ಒಂದು ಅವಕಾಶ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದಿನಾಂಕ 30 ಭಾನುವಾರದಂದು ಪಾಂಡುರಂಗನಿಗೆ ಸಾಮೂಹಿಕ ತುಳಸಿ ಅರ್ಚನೆ ಕಾರ್ಯಕ್ರಮ ನಡೆಯಲಿದೆ. ಈ ಲಕ್ಷ ತುಳಸಿ ಅರ್ಚನೆಯ ವಿಶೇಷವೇನೆಂದರೆ ಭಕ್ತರೇ ಸ್ವತಃ ವಿಷ್ಣು ಸಹಸ್ರನಾಮದ ಪಠಣದೊಂದಿಗೆ ತಮ್ಮ ಕೈಯಿಂದಲೇ ತುಳಸಿ ದಳ ಅರ್ಚನೆ ಮಾಡುವ ವಿಶೇಷ ಕಾರ್ಯಕ್ರಮವು ಪುರೋಹಿತರಾದ ಶ್ರೀ ಸಚ್ಚಿದಾನಂದ ನಿಗ್ಲೆ ನೇತೃತ್ವದಲ್ಲಿ ನಡೆಯಲಿದೆ.

​ಈಗಾಗಲೇ ಪರಿಸರದ ಊರಿನ ಹಾಗೂ ಒಂದಷ್ಟು ಪರ ಊರಿನ ಭಕ್ತರನ್ನು, ದಾನಿಗಳನ್ನು ಸಂಪರ್ಕಿಸಿ ಸಾಮೂಹಿಕ ಲಕ್ಷ ತುಳಸಿ ಅರ್ಚನೆಯ ಈ ಮಹತ್ಕಾರ್ಯವನ್ನು ನಡೆಸಲು ಸಹಕಾರವನ್ನು ಕೋರಿರುತ್ತೇವೆ. ಲಕ್ಷ ತುಳಸಿ ಅರ್ಚನೆಯ ನಂತರ ಶ್ರೀ ಪಾಂಡುರAಗ ರುಖುಮಾಯಿ ದೇವರ ಮಹಾಪೂಜೆ ನೆರವೇರಲಿದೆ. ಅದೇ ದಿನ ಮಧ್ಯಾಹ್ನ ವಿದ್ವಾನ್ ಪಂಜ ಭಾಸ್ಕರ ಭಟ್ ಇವರಿಂದ ಲಕ್ಷ ತುಳಸಿ ಅರ್ಚನೆಯ ಬಗ್ಗೆ ಪ್ರವಚನ ಕಾರ್ಯಕ್ರಮ ಹಾಗೂ ಮಹಾ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

​ಸಂಜೆ ಮಾಣಿಲದ ಅರವಿಂದ ಆಚಾರ್ಯ ಮತ್ತು ತಂಡದವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ, ರಂಗಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ಅಧ್ಯಕ್ಷರಾದ ವಿ. ಜಯರಾಮ್, ​ಕಾರ್ಯದರ್ಶಿ ಕೆ. ರಾಧಾಕೃಷ್ಣ ರಾವ್, ​ಉಪಾಧ್ಯಕ್ಷ ಮನೋಹರ್ ರೈ, ಶೋಭಾಶೇಖರ್, ​ಸದಸ್ಯರಾದ ರಾಮಚಂದ್ರ ಕಂಡೆಟ್ಟು ಉಪಸ್ಥಿತರಿದ್ದರು. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!