ಪಡುಬಿದ್ರೆ: ಅದಾನಿ ಪವರ್ ಪ್ಲಾಂಟ್ ಕಂಪನಿಯಲ್ಲಿ ಕ್ರೇನ್ ಅವಘಡ - ಓರ್ವ ಮೃತ್ಯು
ನಂದಿಕೂರು ಅದಾನಿ ಪವರ್ ಪ್ಲಾಂಟ್ ಕಂಪನಿಯಲ್ಲಿ ಅವಘಡ
ಕಾಂಟ್ರಾಕ್ಟರ್ ನಿರ್ಲಕ್ಷ್ಯತನ - 23 ವರ್ಷದ ಯುವಕ

ಪಡುಬಿದ್ರೆ : ಪಡುಬಿದ್ರೆ ಸಮೀಪದ ನಂದಿಕೂರಿನಲ್ಲಿರುವ ಅದಾನಿ ಥರ್ಮಲ್ ಪವರ್ ಪ್ಲಾಂಟ್ ಕಂಪನಿಯಲ್ಲಿ ಕ್ರೇನ್ ಅವಘಡ ಸಂಭವಿಸಿದ್ದು, ರಾಜಸ್ಥಾನ ಮೂಲದ ಇಬ್ಬರು  ಮೃತಪಟ್ಟರುವುದಾಗಿ ತಿಳಿದುಬಂದಿದೆ. 

ಯಾವುದೇ ಸುರಕ್ಷತೆ ಇಲ್ಲದೆ ಕೆಲಸ ಮಾಡುತ್ತಿದ್ದ ಸಂಧರ್ಭ ಕ್ರೇನ್ ನ ರೋಪ್ ತುಂಡಾಗಿ ಕಟ್ಟಡದ ಭೀಮ್ ನೆಲಕ್ಕುರುಳಿ ಅವಘಡ ಸಂಭವಿಸಿದ್ದು,  23ರ ಹರೆಯದ ಯುವಕನೊಬ್ಬ ಸಾವನ್ನಪ್ಪಿದ್ದು,  ಇನ್ನೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ನಂತರ ಮೃತಪಟ್ಟಿದ್ದಾರೆ. ಇದಕ್ಕೆಲ್ಲಾ ನೇರ ಹೊಣೆ ಕೇರಳ ಮೂಲದ ಸನ್ನಿ ಮತ್ತು ವೆಲ್ಟೆಕ್ ಕಂಪನಿ ಎಂದು ಕೆಲಸಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅದಾನಿ ಸಂಸ್ಥೆಗೆ ಒಳಪಡುವ FGD (Flue Gas Desulfurization) ಎಂಬ ಕಟ್ಟಡವನ್ನು ನೆಲಸಮ ಮಾಡುವ ಕಾಮಗಾರಿ ಚಾಲ್ತಿಯಲ್ಲಿದ್ದು, ಬಹುತೇಕ 75% ಕಾಮಗಾರಿ ಮುಕ್ತಾಯಗೊಳ್ಳುತ್ತಾ ಬಂದಿದೆ. ಅದಾನಿ ಸಂಸ್ಥೆಯು "ಪವರ್ ಟೆಕ್" ಎಂಬ ಕಂಪನಿಗೆ ಪರವಾನಿಗೆ ನೀಡಿರುತ್ತದೆ. ನಂತರ "ಪವರ್ ಟೆಕ್"  ಕಂಪನಿಯು ಕೇರಳ "ಸನ್ನಿ ಮತ್ತು ವೆಲ್ ಟೆಕ್" ಎಂಬ ಸಂಸ್ಥೆಗೆ ಈ FGD ನೆಲಸಮಗೊಳಿಸಲು ಕಾಂಟ್ರಾಕ್ಟ್ ನೀಡಿತ್ತು. ಇವರು ಸರಿಯಾದ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಇದ್ದ ಕಾರಣ ಅವಘಡ ಸಂಭವಿಸಿದೆ.

ಇಂದು ಮಧ್ಯಾಹ್ನದ ವೇಳೆ ಕ್ರೇನ್ ಮೂಲಕ ರೋಪ್ ಕಟ್ಟಿಕೊಂಡು  ಸುರಕ್ಷತಾ ಕ್ರಮವಾಗಿ 3 ಜನ ಕೆಲಸ ಮಾಡುತ್ತಿದ್ದರು, ಇನ್ನು ಉಳಿದ 2 ಮಂದಿ ಯಾವುದೇ ಸುರಕ್ಷತೆ ಇಲ್ಲದೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಧರ್ಭ ಕ್ರೇನ್ ನ ರೋಪ್ ತುಂಡಾಗಿ ಕಟ್ಟಡದ ಭೀಮ್ ಒಂದು  ನೆಲಕ್ಕುರುಳಿದೆ. 3 ಜನ ರೋಪ್ ನಲ್ಲಿಯೇ ಉಳಿದುಕೊಂಡಿದ್ದು, ಇನ್ನು ಉಳಿದ ಇಬ್ಬರಲ್ಲಿ ಒಬ್ಬ ರಾಜಸ್ಥಾನದ 23ರ ಹರೆಯದ ಯುವಕ ನೇರವಾಗಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ. ಇನ್ನೊಬ್ಬ ವ್ಯಕ್ತಿ ಕೂಡ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಅವರು ಮೃತಪಟ್ಟಿದ್ಧಾರೆ ಎಂದು ತಿಳಿದು ಬಂದಿದೆ. ಈ ಘಟನೆಗೆ ನೇರ ಹೊಣೆ ಕೇರಳ ಮೂಲದ ಸನ್ನಿ ಮತ್ತು ವೆಲ್ಟೆಕ್ ಕಂಪನಿ ಎಂದು ಕೆಲಸಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!