ದಕ್ಷಿಣ ಕನ್ನಡದಲ್ಲಿ ಪೊಲೀಸ್ ಕಣ್ಣಿಗೆ ಮಣ್ಣೆರಚಿ ನಡೆಯುತ್ತಿದೆ "ಬೈರಾಸ್ ಗೊಬ್ಬು"...!
ಬೈರಾಸ್ ಗೊಬ್ಬು ಹಾಗೂ ಕಿಂಗ್‌ಪಿನ್‌ಗಳ ಕಂಪ್ಲೀಟ್ ಸ್ಟೋರಿ ಇಲ್ಲಿದೆ

ಮಂಗಳೂರಿನ ಪೊಲೀಸ್ ಅಧಿಕಾರಿಗಳ ದಕ್ಷ ಕಾರ್ಯಾಚರಣೆಯಿಂದ, ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಎಲ್ಲಾ ಇಸ್ಪೀಟ್ ಕ್ಲಬ್ ಗಳು 6 ತಿಂಗಳ ಹಿಂದೆಯೇ ಬಂದ್ ಆಗಿದ್ದವು... ಬಂದ್ ಆಗಿದ್ದೇ ತಡ, ಕೆಲವೊಂದು ಜೂಜಾಟ ನಡೆಸುತ್ತಿದ್ದ ವ್ಯಕ್ತಿಗಳು ಒಟ್ಟು ಸೇರಿ "ಬೈರಾಸ್ ಗೊಬ್ಬು"...!? ನಿರಂತರವಾಗಿ ನಡೆಸುತ್ತಿದ್ದಾರೆ.

ಅರೆ..! ಇದೇನು "ಬೈರಾಸ್ ಗೊಬ್ಬು" ಎಂದು ಯೋಚಿಸುತ್ತೀರಾ...? ಹಾಗಿದ್ದಲ್ಲಿ ಇಲ್ಲಿ ನಾವು ನೀಡ್ತೇವೆ ನೋಡಿ "ಬೈರಾಸ್ ಗೊಬ್ಬು" ಇದರ ಕಂಪ್ಲೀಟ್ ಡೀಟೇಲ್ಸ್ ಮತ್ತು ಅದರ ಕಿಂಗ್ ಪಿನ್ ಗಳ ಸಂಪೂರ್ಣ ಮಾಹಿತಿ.

ಇದರ ಕಿಂಗ್ ಪಿನ್ ಗಳು ಇಬ್ಬರೇ ಇರೋದು... ಒಬ್ಬಾತ ಮಂಗಳೂರು ಬಜಾಲ್ ನಿವಾಸಿ ಅನ್ವರ್ ಅಲಿಯಾಸ್ ಬೈರಾಸ್ ಅನ್ವರ್... ಇನ್ನೊಬ್ಬ ಶಕ್ತಿನಗರ ನಿವಾಸಿ ನಿತಿನ್ ಕೊಟ್ಟಾರಿ ಅಲಿಯಾಸ್ ಬುಕ್ಕಿ ನಿತಿನ್... ಇಬ್ಬರೂ ದಿನಕ್ಕೊಂದು ಕಡೆಯಲ್ಲಿ ಅಂದರ್ ಬಾಹರ್ ಆಟವನ್ನು ಬೈರಾಸ್ ಗೊಬ್ಬು ಹೆಸರಿಟ್ಟುಕೊಂಡು ಪೊಲೀಸರ ಕಣ್ಣಿಗೆ ಮಣ್ಣೆರಚಿ ಅಕ್ರಮ ಇಸ್ಪೀಟ್ ಅಡ್ಡ ನಡೆಸುತ್ತಿದ್ದಾರೆ. 

ಈಗಿನ ಮಾಹಿತಿ ಪ್ರಕಾರ ನಿತಿನ್ ಎಂಬಾತ ಉಜಿರೆ ಧರ್ಮಸ್ಥಳ ಭಾಗದಲ್ಲಿ ಈ ದಂಧೆ ನಡೆಸುತ್ತಿದ್ದಾನೆ... ಈತನಿಗೆ ಉಜಿರೆಯ ವಚನ ಶೆಟ್ಟಿ ಬೆನ್ನೆಲುಬಾಗಿ ನಿಂತು ದಿನಕ್ಕೊಂದು ಜಾಗ ತೋರಿಸಿ ಆ ಜಾಗದಲ್ಲಿ ಆಟ ಆಡಿಸುವಂತೆ ತಿಳಿಸುತ್ತಾನೆ. ಪೊಲೀಸ್ ಇಲಾಖೆಗೆ ತಿಳಿದು ದಾಳಿ ನಡೆಸುತ್ತಾರೆ ಎನ್ನುವ ಭಯದಿಂದ ದಿನಕ್ಕೊಂದು ಜಾಗದಲ್ಲಿ ನಿತಿನ್ ಮತ್ತು ವಚನ್ ಇಸ್ಪೀಟ್ ದಂಧೆ ನಡೆಸುತ್ತಿದ್ದಾರೆ.

ಇನ್ನೊಬ್ಬ ಅನ್ವರ್ ಎಂಬಾತ ಬಂಟ್ವಾಳದ ಕೆಂಪುಗುಡ್ಡೆ ಚರ್ಚ್ ದ್ವಾರದ ಆಸುಪಾಸಿನಲ್ಲಿ ಬೈರಾಸ್ ಗೊಬ್ಬು ನಡೆಸುತ್ತಿದ್ದ.. ಆದರೆ ನಮ್ಮ ಮಾಧ್ಯಮದಲ್ಲಿ ಅದರ ಬಗ್ಗೆ ವರದಿಯಾದ ನಂತರ ಪೊಲೀಸರು ಈತನ ಮೇಲೆ ನಿಗಾ ವಹಿಸಿದ್ದ ಕಾರಣ, ಜಾಗ ಬದಲಿಸಿಕೊಂಡಿದ್ದಾನೆ. ಈತನಿಗೆ  ದಿನೇಶ್ ಬಂಟ್ವಾಳ ಎನ್ನುವಾತ ಜೊತೆಯಾಗಿ ಆತ ನಡೆಸಲು ದಿನಕ್ಕೊಂದು ಜಾಗ ಹುಡುಕಿಕೊಡುತ್ತಾನೆ.

ಎಷ್ಟರವರೆಗೆ ಈ ದಂಧೆ ಮುಂದುವರೆದಿದೆ ಎಂದರೆ, ದಿನಕ್ಕೊಂದು ಕಡೆ ನಡೆಯುವ ಈ ಇಸ್ಪೀಟ್ ದಂಧೆಯ ಜಾಗದ ರಹಸ್ಯ ಯಾರಿಗೂ ಗೊತ್ತೇ ಆಗಬಾರದು ಎಂದು, ಜೂಜಾಟ ಆಡಲು ಬರುವ ಜನರಿಗೆ ಆ ಜಾಗಕ್ಕೆ ಕರೆದೊಯ್ಯಲು ಇನ್ನೋವಾ, ಸ್ವಿಫ್ಟ್, ರಿಟ್ಜ್ ಇನ್ನೂ ಮುಂತಾದ ಗಾಡಿಗಳ ಸೌಲಭ್ಯ ಕೂಡ ಒದಗಿಸುತ್ತಿದ್ದಾನೆ.

ವಚನ್ ಶೆಟ್ಟಿ ಉಜಿರೆ ಎಂಬಾತನನ್ನು ಪೊಲೀಸ್ ಇಲಾಖೆ ಬಂಧಿಸಿ ವಿಚಾರಿಸಿದಲ್ಲಿ ಈ ಎಲ್ಲಾ ಅಕ್ರಮದ ಸಂಪೂರ್ಣ ಮಾಹಿತಿ ಸಿಗುವುದು ಖಚಿತ ಮತ್ತು ಈ ಅಕ್ರಮ ನಡೆಸುತ್ತಿರುವವರ ವಿರುದ್ಧ ಗೂಂಡಾ ಕಾಯ್ದೆ ಸೆಕ್ಷನ್ ನಲ್ಲಿ ಬಂಧಿಸಿ ಜೈಲಿಗಟ್ಟಿದರೆ, ಸಂಪೂರ್ಣವಾಗಿ ಈ ಇಸ್ಪೀಟ್ ದಂಧೆಗೆ ಪೂರ್ಣ ವಿರಾಮ ಇಟ್ಟಂತಾಗುತ್ತದೆ.

ಮತ್ತೊಂದು ವಿಚಾರವೇನೆಂದರೆ ಇತ್ತೀಚಿನ ದಿನಗಳಲ್ಲಿ ಇದೇ ಖಿಲಾಡಿಗಳು ಉತ್ತರ ಕನ್ನಡದಲ್ಲಿ ಈ ಇಸ್ಪೀಟ್ ದಂಧೆ ನಡೆಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಕೆಲವೊಂದು ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸರ ಕಣ್ಣಿಗೆ ಮಣ್ಣೆರಚಿ ಇಂತಹ ದಂಧೆ ನಡೆಸುತ್ತಿರುವವರ ವಿರುದ್ಧ ಪೊಲೀಸರು ಮುಂದಿನ ದಿನಗಳಲ್ಲಿ ಬ್ರೇಕ್ ಹಾಕಲಿದ್ದಾರೆ ಎನ್ನುವುದು ಖಚಿತ. ಬ್ರೇಕ್ ಹಾಕದೆ ಇದ್ದಲ್ಲಿ ಇಸ್ಪೀಟ್ ಜೂಜಾಟದಲ್ಲಿ ಸೋತು ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೂ ಅತಿಯಾಗಬಹುದು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!