ಮಣಿಕಂಠನ ಸನ್ನಿಧಾನದತ್ತ ನಾಯಿಯ ಪ್ರಯಾಣ.!!
ಅಯ್ಯಪ್ಪ ಮಾಲಾಧಾರಿಗಳ ಜೊತೆಗೆ ಹೆಜ್ಜೆ ಹಾಕ್ತಿರುವ ಶ್ವಾನ

ಮಂಗಳೂರು: ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಪಾದಯಾತ್ರೆಯಲ್ಲಿ ಶ್ವಾನವೊಂದು ಅಯ್ಯಪ್ಪ ದೇವರ ಸನ್ನಿಧಾನದತ್ತ ಹೆಜ್ಜೆ ಹಾಕುತ್ತಿದೆ. ದಿನ ಪ್ರತಿ ಸುಮಾರು 40 ಕಿ.ಮೀ ನಡೆಯುತ್ತಿರುವ ಶ್ವಾನವನ್ನು ಕಂಡು ಎಲ್ಲಾರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೇಕ್ಕೇರಿ ಗ್ರಾಮದಿಂದ ಅಯ್ಯಪ್ಪ ಮಾಲಾಧಾರಿಗಳ ತಂಡ ಶಬರಿಮಲೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ನವೆಂಬರ್ 4ರಂದು ಪಾದಯಾತ್ರೆ ಶುರು ಮಾಡಿದ್ರು. ಗೋಕಾಕ್ ತಾಲೂಕಿನ ಗ್ರಾಮದಿಂದ ಶ್ವಾನವೊಂದು ಅಯ್ಯಪ್ಪ ಮಾಲಾಧಾರಿಗಳ ಜೊತೆಗಿದ್ದು ಸುಮಾರು 600 ಕಿಮೀ ಕ್ರಮಿಸಿದೆ. ಹತ್ತು ಮಂದಿ ಮಾಲಾಧಾರಿಗಳ ತಂಡ ಮಂಗಳೂರು ಮೂಲಕ ಕೇರಳ ರಾಜ್ಯದ ಕಾಸರಗೋಡಿಗೆ ತಲುಪಿದ್ದಾರೆ.

ಗುರು ಸ್ವಾಮಿಗಳು ಶ್ವಾನವನ್ನು ಓಡಿಸಿದ್ರು ಕೂಡಾ ಅದು ಹೋಗಲಿಲ್ಲ, ನಮ್ಮ ಜೊತೆಗೆ ಬಂದಿದೆ. ನಾವು ನೀಡುತ್ತಿರುವ ಆಹಾರವನ್ನು ಮಾತ್ರ ಸೇವಿಸುತ್ತದೆ. ನಮ್ಮ ಜೊತೆಗೆ ಪಾದಯಾತ್ರೆ ಶುರುಮಾಡುತ್ತದೆ. ನಾವು ಎಲ್ಲಿ ವಾಸ್ತವ್ಯ ಮಾಡುತ್ತೇವೋ ಅಲ್ಲೆ ಅದು ಕೂಡ ಇರುತ್ತದೆ ಎನ್ನುತ್ತಾರೆ ಅಯ್ಯಪ್ಪ ಮಾಲಾಧಾರಿ ಮೌನೇಶ್‌ ರಾಚಪ್ಪ ಬಡಿಗೇರ್.

ಹತ್ತು ಮಂದಿ ಮಾಲಾಧಾರಿಗಳ ತಂಡ ಮಂಗಳೂರು ಮೂಲಕ ರಾಜ್ಯದ ಗಡಿದಾಟಿ ಕೇರಳದ ಕಾಸರಗೋಡಿಗೆ ತಲುಪಿದ್ದಾರೆ. ಗುರು ಸ್ವಾಮಿಗಳು ಶ್ವಾನವನ್ನು ಓಡಿಸಿದರು ಸಹ ಅದು ಹೋಗಿಲ್ಲ. ಅದರಿಂದ ತಪ್ಪಿಸಿಕೊಂಡು ಹೋಗುವ ಯಾವ ಪ್ರಯತ್ನವು ಸಫಲವಾಗಿಲ್ಲ. ಅಯ್ಯಪ್ಪ ಮಾಲಾಧಾರಿಗಳು ನಡೆಯುವಾಗ ನಡೆಯುತ್ತದೆ. ವಿಶ್ರಾಂತಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಅದೂ ವಿಶ್ರಾಂತಿ ತೆಗೆದುಕೊಳ್ಳುತ್ತದೆ. ಅಯ್ಯಪ್ಪ ಸ್ವಾಮಿಗಳು ಪ್ರಯಾಣ ಮುಂದುವರಿಸಿದಾಗ ಅದೂ ಹಿಂಬಾಲಿಸುತ್ತದೆ. ಈಗಾಗಲೇ 14 ದಿನಗಳ ಪಾದಯಾತ್ರೆ ಮುಗಿಸಿರುವ ಇವರು ಇನ್ನೂ 500 ಕಿಮೀ ಪಾದಯಾತ್ರೆ ಮೂಲಕ ಡಿಸೆಂಬರ್ 4 ಅಥವಾ 5 ರಂದು ದೇವರ ಸನ್ನಿಧಾನ ತಲುಪಲಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!