ಅಯೋಧ್ಯೆ ಕಣ್ಗಾವಲಿಗೆ ಪರ್ಕಳದ ವ್ಯಕ್ತಿಯ ದೂರದರ್ಶಕ ಆಯ್ಕೆ.!!
ಅಯೋಧ್ಯೆ ರಾಮಮಂದಿರ ಕಣ್ಗಾವಲಿಗೆ ಮನೋಹರ್ ಆವಿಷ್ಕರಣೆ ಮಾಡಿ ನಿರ್ಮಿಸಿದ ದೂರದರ್ಶಕ

ಉತ್ತರ ಪ್ರದೇಶದ ಸರಕಾರ ಅಯೋಧ್ಯೆಯ ಶ್ರೀರಾಮ ಮಂದಿರದ ಭದ್ರತೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಕಣ್ಗಾವಲು ಇರಿಸಲು ಮಣಿಪಾಲದ ಎಂಐಟಿಯ ಉದ್ಯೋಗಿ, ಪರ್ಕಳದ ನಿವಾಸಿ ಆರ್. ಮನೋಹರ್ ಆವಿಷ್ಕರಣೆ ಮಾಡಿ ನಿರ್ಮಿಸಿದ ದೂರದರ್ಶಕ ಆಯ್ಕೆಯಾಗಿದೆ. 

ಸುಮಾರು 50 ದೂರದರ್ಶಕಗಳನ್ನು ಖರೀದಿಸುವ ಆರ್ಡರ್ ಈಗಾಗಲೇ ಇವರಿಗೆ ಆನ್‌ಲೈನ್ ಮೂಲಕ ಬಂದಿದೆ. ಸದ್ಯ 25 ದೂರದರ್ಶಕಗಳನ್ನು ತಯಾರಿಸಿ ನೀಡಲಾಗುವುದು ಎಂದು ಆರ್.ಮನೋಹರ್ ತಿಳಿಸಿದ್ದಾರೆ. ಪ್ರಯೋಗಿಕವಾಗಿ ಇವರ ದೂರದರ್ಶಕಕ್ಕೆ ಮಾನ್ಯತೆ ದೊರೆತ್ತಿದ್ದು, ಆರ್.ಮನೋಹರ್ ಟೆಲಿಸ್ಕೋಪನ್ನು ಆವಿಷ್ಕಾರಣೆ ಮಾಡುವಲ್ಲಿ ಸಫಲತೆ ಕಂಡಿದ್ದಾರೆ. ನೇರವಾಗಿ ಪ್ರತಿಬಿಂಬವನ್ನು ನೋಡುವಂತಹ ದೂರದರ್ಶಕವನ್ನು ಆವಿಷ್ಕರಣೆ ಮಾಡಿ ರುವುದರಿಂದ ಇವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪೇಟೆಂಟ್ ಕೂಡ ದೂರದರ್ಶಕಕ್ಕೆ ಸಿಕ್ಕಿದೆ.

ದೂರದರ್ಶಕವನ್ನು ಇನ್ನಷ್ಟು ಸರಳ ರೀತಿಯಲ್ಲಿ ಮತ್ತು ಚಿಕ್ಕದಾದ ಗಾತ್ರಕ್ಕೆ ಮತ್ತು ಅತಿ ದೂರದ ವಸ್ತು ಕಾಣುವಂತೆ ಇನ್ನಷ್ಟು ಅಧ್ಯಯನದಲ್ಲಿ ತೊಡಗಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರದ ಭದ್ರತೆಯ ದೃಷ್ಟಿಯಲ್ಲಿ ಸರ್ಚಿಂಗ್ ನಡೆಸಲು ಮನೋಹರ್ ಅವರ ದೂರದರ್ಶಕ ಆಯ್ಕೆ ಆಗಿರುವುದು ಸ್ಥಳೀಯರಲ್ಲಿಯೂ ಸಂತಸ ತಂದಿದೆ ಎಂದು ಸ್ಥಳೀಯರಾದ ಮೋಹನ್ ದಾಸ ನಾಯಕ್ ಪರ್ಕಳ, ಗಣೇಶ್ ರಾಜ್ ಸರಳೇಬೆಟ್ಟು, ಜಯಶೆಟ್ಟಿ ಬನ್ನಂಜೆ, ರಾಜೇಶ್ ಪ್ರಭು ಪರ್ಕಳ, ಪ್ರಕಾಶ್ ನಾಯ್ಕ್ ಪರ್ಕಳ, ಜಯ ದೀಪ್ ನಾಯಕ್ ತಿಳಿಸಿದ್ದಾರೆ. ಇವರು ಪರ್ಕಳ ಮತ್ತು ಉಡುಪಿಯಲ್ಲಿ ಕೆಲವು ಆಯ್ದ ಸ್ಥಳಗಳಲ್ಲಿ ಸೂರ್ಯ ಗ್ರಹಣ, ಚಂದ್ರಗ್ರಹಣ, ಶನಿಗ್ರಹ, ಗುರುಗ್ರಹ, ಮಂಗಳ ಗ್ರಹ ಇನ್ನಿತರ ಅನ್ಯಗ್ರಹಗಳನ್ನು ಇವರ ದೂರದರ್ಶಕದ ಮೂಲಕ ಉಚಿತವಾಗಿ ತೋರಿಸಿ ಕೊಟ್ಟಿದ್ದಾರೆ. ಅದೇ ರೀತಿ ಕೆಲವೊಂದು ಶಾಲೆಗಳಿಗೆ ಅವರೇ ತಯಾರಿಸಿದ ದೂರದರ್ಶಕವನ್ನ ಉಚಿತವಾಗಿ ನೀಡಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!