ರಾಮ ಮಂದಿರ ಪ್ರಾಣಪ್ರತಿಷ್ಠೆ : ಕೇಂದ್ರ ಸರ್ಕಾರದ ಗಿಫ್ಟ್, ಅರ್ಧ ದಿನ ರಜೆ ಘೋಷಣೆ.!
ರಾಮಮಂದಿರದ ಉದ್ಘಾಟನೆಯಂದು ಕೇಂದ್ರ ಸರ್ಕಾರದ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ

ಮಾಂಸ, ಮೀನು ನಿಷೇಧಿಸಿದ ಯೋಗಿ ಸರ್ಕಾರ

ಜನವರಿ 22ರಂದು ರಾಮ ಮಂದಿರ ಪ್ರಾಣಪ್ರತಿಷ್ಠೆ ನಡೆಯಲಿದೆ. ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇದೀಗ ಕೇಂದ್ರ ಸರ್ಕಾರ ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಬಂಪರ್ ಗಿಫ್ಟ್ ಘೋಷಿಸಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಜನವರಿ 22ರಂದು ಕೇಂದ್ರ ಸರ್ಕಾರಿ ನೌಕರರು, ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಿದೆ. ಜನವರಿ 22ರಂದು ಮಧ್ಯಾಹ್ನ 2.30ರ ವರೆಗೆ ಕೇಂದ್ರ ಸರ್ಕಾರ ಎಲ್ಲಾ ಸರ್ಕಾರಿ ಕಚೇರಿ, ನೌಕರರಿಗೆ ರಜೆ ನೀಡಲಾಗಿದೆ.

ದೇಶವೆ ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಕಾತರಗೊಂಡಿದೆ. ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ದೇವಸ್ಥಾನ, ಮಠ, ಗುಡಿಗಳು ಅಲಂಕೃತಗೊಂಡಿದೆ. ದೇಶದ ಜನ ರಾಮ ಮಂದಿರ ಪ್ರಾಣಪ್ರತಿಷ್ಠೆಯನ್ನು ವೀಕ್ಷಿಸಲು, ಶ್ರೀರಾಮ ಭಜನೆ, ಪೂಜೆಯಲ್ಲಿ ತಲ್ಲೀನರಾಗಲು ಬಯಸಿದ್ದಾರೆ. ಭಾರತೀಯರ ಧಾರ್ಮಿಕ ಭಾವನೆಯನ್ನು ಗೌರವಿಸಿ ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಿಸಿದೆ.

ಕೇಂದ್ರ ಸರ್ಕಾರ ಅಧೀನದಲ್ಲಿರುವ ಸರ್ಕಾರಿ ಕಚೇರಿಗಳು, ಅಧಿಕಾರಿಗಳು, ಸಂಸ್ಥೆಗಳಿಗೆ ಜನವರಿ 22ರಂದು ಅರ್ಧ ದಿನ ರಜೆ ಘೋಷಿಸಿದೆ. ಈ ಮೂಲಕ ಉದ್ಯೋಗಿಗಳು, ನೌಕರರು ರಾಮ ಮಂದಿರ ಪ್ರಾಣ ಪ್ರತಿಷ್ಠೆಯಲ್ಲಿ ಭಾಗೀದಾರರಾಗಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. 

ಮಾಂಸ, ಮೀನು ನಿಷೇಧಿಸಿದ ಯೋಗಿ ಸರ್ಕಾರ

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇನ್ನು ಕೆಲವೇ ದಿನಗಳಿದ್ದು ಉತ್ತರ ಪ್ರದೇಶದಲ್ಲಿ ಜನವರಿ 22 ರಂದು ಮಾಂಸ, ಮೀನು ಮಾರಾಟವನ್ನು ನಿಷೇಧಿಸಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರವು ಜನವರಿ 22 ರಂದು ರಾಮ್ ಲಲ್ಲಾ ಪ್ರತಿಷ್ಠಾಪನೆಯ ದಿನ ಉತ್ತರ ಪ್ರದೇಶದ ಎಲ್ಲಾ ಮಾಂಸ, ಮೀನು ಹಾಗೂ ಮಧ್ಯ ಮಾರಾಟವನ್ನೂ  ನಿಷೇಧಿಸಿದೆ.

ಕೇಂದ್ರ ಸರ್ಕಾರ ಅರ್ಧ ದಿನ ರಜೆ ಘೋಷಿಸಿದ್ದರೆ, ಹಲವು ರಾಜ್ಯಗಳು ಈಗಾಗಲೇ ಜನವರಿ 22ಕ್ಕೆ ರಜೆ ಘೋಷಿಸಿದೆ. 5ಕ್ಕೂ ಹೆಚ್ಚು ರಾಜ್ಯಗಳು ಜನವರಿ 22ರಂದ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ. ಇಷ್ಟೇ ಅಲ್ಲ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಹಿನ್ನಲೆಯಲ್ಲಿ ಹಲವು ರಾಜ್ಯಗಳು ಮದ್ಯ ಹಾಗೂ ಮಾಂಸ ಮಾರಾಟ ನಿಷೇಧಿಸಿದೆ.

ಜ 22 ರಂದು ರಾಮ ಮಂದಿರದ ಉದ್ಘಾಟನಾ ಸಮಾರಂಭ ನಡೆಯಲಿದ್ದು. ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ರಾಮ್ ಲಲ್ಲಾ ಪ್ರತಿಷ್ಠಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ 7,000 ಕ್ಕೂ ಹೆಚ್ಚು ಜನರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಜನವರಿ 16ರಿಂದಲೇ ಆಯೋಧ್ಯೆ ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡಿದೆ. ಜನವರಿ 22ರ 12.30ಕ್ಕೆ ರಾಮ ಮಂದಿರ ಪ್ರಾಣಪ್ರತಿಷ್ಠೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಮಾಡಲಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!