"ನಮ್ಮ ರಾಮ ಬಂದಿದ್ದಾನೆ.. ಇಂದಿನಿಂದ ಹೊಸ ಯುಗ" ಎಂದ ನರೇಂದ್ರ ಮೋದಿ
ಬಾಲರಾಮ ಇನ್ನು ಟೆಂಟ್‌ನಲ್ಲಿರಲ್ಲ, ದಿವ್ಯ ಮಂದಿರದಲ್ಲಿರುತ್ತಾನೆ; ಪ್ರಧಾನಿ ಮೋದಿ

ಅಯೋಧ್ಯೆ : ಕೊನೆಗೂ ನಮ್ಮ ರಾಮ ಬಂದಿದ್ದಾನೆ. ಪ್ರತಿಯೊಬ್ಬ ಭಾರತೀಯನ ಅಂತರಂಗದಲ್ಲಿ ವಿರಾಜಮಾನನಾಗಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿಸಿದ ಬಳಿಕ ಬೃಹತ್‌ ವೇದಿಕೆ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಅವರು ಮಾತನಾಡಿದರು. ಕೊನೆಗೂ ನಮ್ಮ ರಾಮ ಬಂದಿದ್ದಾನೆ. ಪ್ರತಿಯೊಬ್ಬ ಭಾರತೀಯನ ಅಂತರಂಗದಲ್ಲಿ ನೆಲೆಸಿದ್ದಾನೆ ಎಂದು ಬಣ್ಣಿಸಿದ್ದಾರೆ. ನಮ್ಮ ಬಾಲರಾಮ ಇನ್ನು ಟೆಂಟ್‌ನಲ್ಲಿ ಇರಲ್ಲ. ದಿವ್ಯ ಮಂದಿರದಲ್ಲಿರಲಿದ್ದಾನೆ ಎಂದು ಹೇಳಿದರು 

ಈ ಶುಭ ಸಂದರ್ಭದಲ್ಲಿ ನಾನು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಹೇಳಲು ತುಂಬಾ ವಿಷಯಗಳಿವೆ. ಆದ್ರೆ ಸಂತಸದಿಂದ ನನಗೆ ಮಾತೇ ಬರುತ್ತಿಲ್ಲ. ಇನ್ಮುಂದೆ ನಮ್ಮ ರಾಮ ಟೆಂಟ್‌ನಲ್ಲಿ ವಾಸಿಸುವುದಿಲ್ಲ, ಅದ್ಧೂರಿ ದೇವಾಲಯದಲ್ಲಿ ವಿರಾಜಮಾನನಾಗಿರುತ್ತಾನೆ. ಈ ಸಮರ್ಪಣೆಯ ಕ್ಷಣವು ಭಗವಾನ್ ರಾಮನ ಆಶೀರ್ವಾದ ಎಂದು ಹೊಗಳಿದರು. ಜನವರಿ 22, ಕ್ಯಾಲೆಂಡರ್‌ನಲ್ಲಿ ಬರುವ ದಿನಾಂಕವಲ್ಲ. ಇದು ಹೊಸ ಯುಗದ ಉದಯ ಎಂದು ಕೊಂಡಾಡಿದರು. ಜೊತೆಗೆ ಜನವರಿ 22ರಂದು ಸಂಜೆ ಪ್ರತಿಯೊಬ್ಬ ರಾಮಭಕ್ತರ ಮನೆಯಲ್ಲೂ ʻಶ್ರೀರಾಮಜ್ಯೋತಿʼ ಬೆಳಗಿಸುವಂತೆ ಕರೆ ನೀಡಿದರು.

ಮಧ್ಯಾಹ್ನ 12 ಗಂಟೆ 30 ನಿಮಿಷ 32 ಸೆಕೆಂಡ್‌ಗಳ ಮಧ್ಯೆ ಅಭಿಜಿತ್‌ ಮುಹೂರ್ತದಲ್ಲಿ (ಅಭಿಜಿತ್‌ʼ ಅಂದ್ರೆ ʼವಿಜಯಶಾಲಿʼ ಎಂದರ್ಥ) ಶಾಸ್ತ್ರೋಕ್ತವಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಅರ್ಚಕರು, ಪಂಡಿತರು ಹಾಗೂ ಯಜಮಾನ ಸ್ಥಾನದಲ್ಲಿದ್ದ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ನೆರವೇರಿತು. ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಸಿಎಂ ಯೋಗಿ ಆದಿತ್ಯನಾಥ್‌, ಗುಜರಾತ್‌ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಮೊದಲಾದವರು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!