ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಬಣ್ಣ ಹಚ್ಚಲಿದ್ದಾರೆ ಕೋಸ್ಟಲ್ ವುಡ್ ಬೆಡಗಿ..!!
ದರ್ಶನ್ ‘ಡೆವಿಲ್’ ಸಿನಿಮಾಗೆ ನಾಯಕಿ ಫಿಕ್ಸ್
ಕರಾವಳಿ ಬೆಡಗಿ ದಚ್ಚುಗೆ ನಾಯಕಿ

ಸ್ಯಾಂಡಲ್ ವುಡ್ ನಟ ದರ್ಶನ್ ‘ಕಾಟೇರ’ ಸಕ್ಸಸ್ ಬಳಿಕ ಇದೀಗ ‘ಡೆವಿಲ್’ಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ನಾಯಕಿ ಫಿಕ್ಸ್ ಆಗಿದ್ದು, ಕರಾವಳಿ ಕುವರಿ, ಬ್ಯಾಡ್ಮಿಂಟನ್ ಆಟಗಾರ್ತಿ, ಬರಹಗಾರ್ತಿಯು ಆಗಿರುವ ರಚನಾ ರೈ ನಟಿಸುತ್ತಿದ್ದಾರೆ.

ಮೂಲತಃ ದಕ್ಷಿಣ ಕನ್ನಡದ ಪುತ್ತೂರು ಮೂಲದ ರಚನಾ ರೈ ಈಗಾಗಲೇ ತುಳು ಸಿನಿಮಾದಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾ ರೂಪೇಶ್ ಜೊತೆ ಸರ್ಕಸ್ ಅನ್ನುವ ತುಳು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಇದೀಗ ಡಿ ಬಾಸ್ ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡೆವಿಲ್ ಸಿನಿಮಾದಲ್ಲಿ ರಚನಾ ರೈ ಬಣ್ಣ ಹಚ್ಚುತ್ತಿದ್ದಾರೆ.

ಅಂದಹಾಗೆಯೇ ಡೆವಿಲ್ ಸಿನಿಮಾ ಮಿಲನ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾದಗೆ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿತ್ತು. ಆದರೀಗ ಕಡಲ ಕುವರಿ, ಪುತ್ತೂರಿನ ರಚನಾ ರೈ ಡೆವಿಲ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಲ್ಲದೆ, ಈ ನಟಿ ಅಶೋಕ್ ‘ಬ್ಲೇಡ್’ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!