ಕಾರ್ಕಳ: (ಫೆ.11) ಪರ್ಪಲೆ ಗಿರಿಯಲ್ಲಿ ಶಿಲಾನ್ಯಾಸ - ಪೂರ್ವಭಾವಿ ಸಭೆ
ಪರ್ಪಲೆ ಗಿರಿ : ಧರ್ಮ ದೈವಗಳ ಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ

ಕಾರ್ಕಳ : ಕಾಲದ ಹೊಡೆತಕ್ಕೆ ಸಿಲುಕಿ ಅಸ್ತಿತ್ವ ಕಳೆದುಕೊಂಡಿದ್ದ ಪರ್ಪಲೆ ಗಿರಿಯಲ್ಲಿ ಮತ್ತೆ ಸನ್ನಿಧಾನ ಬೆಳಗುವ ಬಹುಕಾಲದ ಕನಸು ನನಸಾಗುವ ಕಾಲ ಕೂಡಿಬಂದಿದೆ. ಫೆಬ್ರವರಿ 11ರಂದು ಧರ್ಮ ದೈವಗಳ ಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ.  

ಶ್ರೀಮದ್ ಅನೆಗೊಂದಿ ಸಂಸ್ಥಾನದ ಪರಮಪೂಜ್ಯ ಯತಿವರ್ಯರ ಕರ ಕಮಲಗಳಿಂದ ಇದೇ ತಿಂಗಳ 11ನೇ ತಾರೀಕು ಬೆಳಗ್ಗೆ ಧರ್ಮ ದೈವಗಳ ಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರೆವೇರಲಿದೆ. ಆ ಪ್ರಯುಕ್ತ ಪೂರ್ವಭಾವಿ ಸಭೆ ಬೆಳ್ಮಣ್ ನ ಸೊಸೈಟಿ ಹಾಲ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಪರ್ಪಲೆಗಿರಿ ಪುನರುತ್ಥಾನ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!