ಮಂಗಳೂರು ಸರ್ಕ್ಯೂಟ್ ಹೌಸ್ ಬಿಜೈ ರಸ್ತೆಗೆ ಜಾರ್ಜ್ ಫೆರ್ನಾಂಡೀಸ್ ಹೆಸರು; ಮೇಯರ್ ಸುಧೀರ್ ಶೆಟ್ಟಿ
'ಸರ್ಕ್ಯೂಟ್ ಹೌಸ್ ನಿಂದ ಬಿಜೈ ರಸ್ತೆಗೆ ಜಾರ್ಜ್ ಫರ್ನಾಂಡೀಸ್ ಹೆಸರು ಮರುನಾಮಕರಣ'

ಮಂಗಳೂರು : ಮಂಗಳೂರು ನಗರದ ಸರ್ಕ್ಯೂಟ್ ಹೌಸ್ ಬಿಜೈ ರಸ್ತೆಗೆ ಮಾಜಿ ರಕ್ಷಣಾ ಸಚಿವ ದಿವಂಗತ ಜಾರ್ಜ್ ಫೆರ್ನಾಂಡೀಸ್ ಹೆಸರು ನಾಮಕರಣ ಮಾಡಲು ಸರ್ಕಾರ ಅನುಮತಿ ನೀಡಿದ್ದು ಲೋಕಸಭಾ ಚುನಾವಣೆ ಬಳಿಕ ಈ ರಸ್ತೆಯ ಹೆಸರು ಅಧಿಕೃತ ನಾಮಫಲಕದೊಂದಿಗೆ ಹಾಕಲಿದ್ದೇವೆ  ಎಂದು ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಲೋಕಸಭಾ ಚುನಾವಣೆ ಬಳಿಕ ಈ ರಸ್ತೆಯ ಹೆಸರು ಅಧಿಕೃತ ನಾಮಫಲಕದೊಂದಿಗೆ ಹಾಕಲಿದ್ದೇವೆ ಎಂದರು. ಮಂಗಳೂರಿನ ಬಿಜೈ ಪರಿಸರದಲ್ಲಿ ಹುಟ್ಟಿದ ಜಾರ್ಜ್ ಫೆರ್ನಾಂಡೀಸ್ 9 ಲೋಕಸಭಾ ಚುನಾವಣೆಯಲ್ಲಿ ಗೆದ್ದ ಕಾರ್ಮಿಕ ನಾಯಕರಾಗಿದ್ದಾರೆ. ಕೊಂಕಣ್ ರೈಲ್ವೆ ಹರಿಕಾರರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿ ದೇಶದ ಪ್ರಧಾನಿ ಮೋದಿ ಪದ್ಮವಿಭೂಷಣ ನೀಡಿದ್ದಾರೆ. ಮಂಗಳೂರು ಮನಪ ಸಾಮಾನ್ಯ ಸಭೆಯಲ್ಲಿ ಜಯನಂದ್ ಅಂಚನ್ ಅವರ ಅವಧಿಯಲ್ಲಿ ಮನವಿ ಮಾಡಲಾಗಿತ್ತು.ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚಾರ್ಡ್ ಮೋರಸ್ ಅವರು ಕೂಡ ರಸ್ತೆಗೆ ಮರುನಾಮಕರಣ ಮಾಡುವಂತೆ ಮನವಿ ಮಾಡಿದ್ದರು. ರಸ್ತೆ ಮರುನಾಮಕರಣದ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ಧರಾಮಯ್ಯ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಧನ್ಯವಾದಗಳು ಎಂದು ಹೇಳಿದರು. ಇನ್ನು ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರಿಡುವ ವಿಚಾರ ಚರ್ಚೆಗಳಾಗಿವೆ ಶೀಘ್ರವಾಗಿ ಈ ಕಾರ್ಯ ಕೂಡ ಆಗಲಿದೆ ಎಂದರು.

ಮಂಗಳೂರಿನ ನಾರಾಯಣ ಗುರು ವೃತ್ತ ನಿರ್ವಹಣೆ ವಿಚಾರವಾಗಿ ಮಾತನಾಡಿದ ಮೇಯರ್ ಈಗಾ ನಿರ್ವಾಹಣೆ ಮೂಡದಿಂದ ಆಗ್ತಾ ಇದೆ ಇದನ್ನು ಪಾಲಿಕೆಗೆ ನೀಡಲು‌ ಮನವಿ ನೀಡಲಾಗಿದೆ. ಈ ವೃತ್ತದ ನಿರ್ವಹಣೆಯನ್ನು ಕುದ್ರೋಳಿ ದೇವಸ್ಥಾನ ಆಡಳಿತ ಮಂಡಳಿ ಕೇಳಿದೆ ಈ ಬಗ್ಗೆ ಪರೀಶಿಲನೆ ನಡೆಸ್ತೇವೆ ಎಂದರು.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!