ಏ.1 ರಿಂದ ಟೋಲ್ ದರ ಹೆಚ್ಚಳ - ಸವಾರರ ಜೇಬಿಗೆ ಕತ್ತರಿ.!
ಮತ್ತೆ ಹೆದ್ದಾರಿ ಟೋಲ್‌ ದರ ಹೆಚ್ಚಳ

2024-25ನೇ ಹಣಕಾಸು ವರ್ಷ ಏಪ್ರಿಲ್‌ 1 ರಿಂದ ಆರಂಭವಾಗಿದ್ದು, ಹಲವು ಬದಲಾವಣೆಗಳು ಆಗಲಿವೆ. ಈ ಪೈಕಿ ಟೋಲ್ ದರ ಪರಿಷ್ಕ್ರರಣೆಗಳಲ್ಲಿಯೂ ಒಂದು. ರಾಷ್ಟ್ರಿಯ ಹೆದ್ದಾರಿಗಳಲ್ಲಿನ ಟೋಲ್ ದರಗಳು ಏ. 1 ರಿಂದ ಮತ್ತೆ ಹೆಚ್ಚಳವಾಗಲಿದ್ದು, ಈ ಮೂಲಕ ಮತ್ತೆ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ.

ಕರಾವಳಿಯಲ್ಲಿರುವ ಬಂಟ್ವಾಳ ಸಮೀಪದ ಬ್ರಹ್ಮರಕೂಟ್ಲು ಕೇರಳ- ಕರ್ನಾಟಕ ಗಡಿಯ ತಲಪಾಡಿ, ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನದ ಗುಂಡ್ಮಿ ಟೋಲ್ ಗೇಟ್ ಗಳಲ್ಲಿ ಪರಿಷ್ಕ್ರತ ಶುಲ್ಕ ಜಾರಿಗೆ ಬರಲಿದೆ. ಆದರೆ ಈ ಬಾರಿ ಏಕಮುಖ ಸಂಚಾರದ ಶುಲ್ಕದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ದ್ವಿಮುಖ ಸಂಚಾರ ಮತ್ತು ಮಾಸಿಕ ಪಾಸ್ ನ ಶುಲ್ಕದಲ್ಲಿ ಏರಿಕೆ ಮಾಡಲಾಗಿದೆ.

ಪ್ರತೀ ವರ್ಷ ಎಪ್ರಿಲ್ ಒಂದರಿಂದ ದೇಶಾದ್ಯಂತ ಟೋಲ್ ಶುಲ್ಕ ಪರಿಷ್ಕರಣೆಯಾಗುತ್ತದೆ. ಈ ಪ್ರಕಾರ ಬ್ರಹ್ಮರಕೂಟ್ಲು ಟೋಲ್ ನಲ್ಲಿ ಕಾರು, ಜೀಪು, ವ್ಯಾನ್ ದ್ವಿಮುಖ ಸಂಚಾರದ ಶುಲ್ಕದಲ್ಲಿ 5 ರೂ. ಏರಿಕೆ ಕಂಡಿದ್ದು ಪರಿಷ್ಕ್ರತ ದರ 50 ರೂ. ಆಗಿರಲಿದೆ. ತಲಪಾಡಿಯಲ್ಲಿ 80 ರೂ, ಹೆಜಮಾಡಿಯಲ್ಲಿ 75, ಸಾಸ್ತಾನ ಗುಂಡ್ಮಿ 90 ರೂ. ಪರಿಷ್ಕ್ರತ ದರವಾಗಿದೆ. ಟೋಲ್ ದರ ಹೆಚ್ಚಳವವು ವಾಹನ ಸವಾರರ ಜೇಬಿಗೆ ಭಾರವಾಗಿ ಪರಿಣಮಿಸಲಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!