NAI ರಾಜ್ಯ ಉಪ ಕಾರ್ಯದರ್ಶಿಯಾಗಿ ಪೊಲೀಸ್ ವಾರ್ತೆ ಪ್ರಧಾನ ಸಂಪಾದಕರಾದ ಸುಭಾಶ್ ಶೆಟ್ಟಿ ಅವಿರೋಧ ಆಯ್ಕೆ
ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಇಂಡಿಯಾ ರಾಜ್ಯ ಉಪ ಕಾರ್ಯದರ್ಶಿಯಾಗಿ ಸುಭಾಶ್ ಶೆಟ್ಟಿ ಆಯ್ಕೆ

ರಾಷ್ಟ್ರೀಯ ಮಟ್ಟದಲ್ಲಿ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ, ಕಷ್ಟಕಾರ್ಪಣ್ಯಕ್ಕೆ ಸ್ಪಂದಿಸಿ - ಬಗೆಹರಿಸಲು ಅಸ್ತಿತ್ವದಲ್ಲಿರುವ "ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಇಂಡಿಯಾ (N A I) ರಾಜ್ಯ ಘಟಕದ ಅಧ್ಯಕ್ಷರಾದ ಶ್ರೀ ಅಮ್ಮರವಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ವಿ.ಶ್ರೀಕಾಂತ್ ಕಶ್ಯಪ್ ರವರು ನಿರ್ಭಿತಿಯ ಪತ್ರಿಕೆಯಾದ "ಪೊಲೀಸ್ ವಾರ್ತೆ" ಪ್ರಧಾನ ಸಂಪಾದಕರು - ಸೃಜನಶೀಲ - ಸರಳ ವ್ಯಕ್ತಿತ್ವದ ಶ್ರೀ ಸುಭಾಶ್.ಆರ್.ಶೆಟ್ಟಿ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ವಿಪಿನ್ ಗೌರ್ ಆದೇಶದ ಮೇರೆಗೆ ಇವರನ್ನು  ನೇಮಕ ಮಾಡಲಾಗಿದೆ. ನೂತನವಾಗಿ ನೇಮಕ ಆಗಿರುವ ಶ್ರೀ ಸುಭಾಶ್ ಶೆಟ್ಟಿ  ಅವರು ಸಂಘಟನೆಯ ಕಾರ್ಯ - ತತ್ವ ಸಿದ್ಧಾಂತಗಳನ್ನು ಯಶಸ್ವಿಯಾಗಿ ನಿಭಾಯಿಸಲು ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!