ವಿಟ್ಲ: ಮಂಗಗಳನ್ನು ಓಡಿಸಲು ಪೊಲೀಸರನ್ನೇ ಕರೆಸಿದ ಕೃಷಿಕ.!
ತೋಟಕ್ಕೆ ದಾಳಿ ಮಾಡಿದ ಮಂಗಗಳನ್ನು ಓಡಿಸಲು ಪೊಲೀಸರನ್ನೇ ಕರೆಸಿದ ಕೃಷಿಕ

ವಿಟ್ಲ : ಇದೊಂದು ಅಚ್ಚರಿಯ ಘಟನೆ. ಕೃಷಿಕರೊಬ್ಬರು ಮಂಗಗಳ ಕಾಟಕ್ಕೆ ಪೊಲೀಸರನ್ನೇ ಮನೆಗೆ ಕರೆಸಿದ ಘಟನೆ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಬಿಲ್ಲಂಪದವು ಎಂಬಲ್ಲಿ ನಡೆದಿದೆ. 

ಚುನಾವಣಾ ನೀತಿ ಸಂಹಿತೆ ಪ್ರಕಾರ ಕೋವಿ ಡೆಪಾಸಿಟ್ ಮಾಡಿದ್ದ ಹಿನ್ನಲೆ ಕೃಷಿಕರೋರ್ವರು ತೋಟಕ್ಕೆ ನುಗ್ಗಿದ ಮಂಗಗಳನ್ನು ಓಡಿಸಲು 112 ತುರ್ತು ಪೊಲೀಸರನ್ನೇ ತೋಟಕ್ಕೆ ಕರೆಸಿದ ಘಟನೆ ಬುಧವಾರ ರಾತ್ರಿ ಅಳಿಕೆ ಗ್ರಾಮದ ಬಿಲ್ಲಂಪದವು ಎಂಬಲ್ಲಿ ನಡೆದಿದೆ.

ಅಳಿಕೆ ಗ್ರಾಮದ ಕೃಷಿಕರು ಕಾಡುಹಂದಿ, ಕೋತಿಗಳ ಉಪಟಳದಿಂದ ಕಂಗಾಲಾಗಿದ್ದು, ಅಳಿಕೆ ಗ್ರಾಮದ ಕೃಷಿಕ ಬಿಲ್ಲಂಪದವು ನಿಶಾಂತ್ ಎಂಬವರು ಜಿಲ್ಲಾಧಿಕಾರಿಗೆ ಕರೆ ಮಾಡಿ ಸಮಸ್ಯೆ ವಿವರಿಸಿದರು, 112 ತುರ್ತು ಸಂಖ್ಯೆಗೆ ಕರೆಮಾಡುವಂತೆ ಜಿಲ್ಲಾಧಿಕಾರಿ ಸಲಹೆಯನ್ನು ನೀಡಿದ ಮೇರೆಗೆ ಬಳಿಕ 112 ತುರ್ತು ಸಂಖ್ಯೆಗೆ ಕರೆ ಮಾಡಿದರು. ಕಂಟ್ರೋಲ್ ರೂಂ ಅಧಿಕಾರಿಗಳ ಸೂಚನೆಯಂತೆ ನಿಶಾಂತ್ ರವರ ಮನೆ ಅಂಗಳಕ್ಕೆ 112 ಸಿಬ್ಬಂದಿಗಳು ಬಂದಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!