ಕೆಎಸ್ಆರ್ ಟಿಸಿ - ಓಮ್ನಿ ಕಾರಿನ ನಡುವೆ ಅಪಘಾತ – ಮೂವರು ಸ್ಥಳದಲ್ಲೇ ಸಾವು.!
ಭೀಕರ ಅಪಘಾತ - ಮೂವರು ಸ್ಪಾಟ್ ಡೆತ್

ಶಿವಮೊಗ್ಗ : ಓಮ್ನಿ ಕಾರು ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನಪ್ಪಿದ ಘಟನೆ ಶಿವಮೊಗ್ಗ-ಶಿಕಾರಿಪುರ ರಸ್ತೆಯ ಚಿನ್ನಿಕಟ್ಟೆ-ಬಿದರಹಳ್ಳಿ ನಡುವೆ ಸಂಭವಿಸಿದೆ.

ಮೃತರನ್ನು ಶಿಕಾರಿಪುರ ತಾಲ್ಲೂಕಿನ ಹರಮಘಟ್ಟದ ನಂಜುಂಡಪ್ಪ, ರಾಕೇಶ್ ಹಾಗೂ ದೇವರಾಜ್ ಎಂದು ತಿಳಿದುಬಂದಿದೆ. ಒಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೊರಟಿದ್ದ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ ಹಾಗೂ ಒಮ್ನಿ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಒಮ್ನಿ ವಾಹನ ನುಜ್ಜುಗಜ್ಜಾಗಿದೆ. ಬಸ್‌ ಒಮ್ನಿ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ರಸ್ತೆಪಕ್ಕದ ತಡೆಗೋಡೆಗೆ ಗುದ್ದಿದೆ. ಇದರಿಂದ ಬಸ್‌ನ ಮುಂದಿನ ಚಕ್ರ ಕಳಚಿದ್ದು, ಮುಂಭಾಗ ಜಖಂಗೊಂಡಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!