ಉಡುಪಿ: ಮತದಾನ ಜಾಗೃತಿಗೆ ಯಕ್ಷ ಕಲಾವಿದರಾದ ಜಿಪಂ ಸಿಇಒ, ಎಸ್‌ಪಿ.!
ಕಲೆ ಮೂಲಕ ಮತ ಜಾಗೃತಿ - ಯಕ್ಷ ಕಲಾವಿದರಾಗಿ ಮಿಂಚಿದ ಜಿಪಂ ಸಿಇಒ, ಎಸ್‌ಪಿ

ಉಡುಪಿ : ಮತದಾನ ಜಾಗೃತಿಗಾಗಿ ಪ್ರತಿ ಚುನಾವಣೆಯಲ್ಲೂ ಉಡುಪಿ ಜಿಲ್ಲಾಡಳಿತ ವಿಭಿನ್ನ ಪ್ರಯತ್ನ ನಡೆಸುತ್ತಾ ಬಂದಿದೆ.  ಈ ಬಾರಿ ಯಕ್ಷಗಾನ ಕಲಾವಿದರಾಗಿ ವೇಷ ತೊಟ್ಟ ಅಧಿಕಾರಿಗಳು ಮತದಾನ ಜಾಗೃತಿಯ ಸಂದೇಶ ಸಾರಿದ್ದಾರೆ.

ಈ ಕಲೆ ಮೂಲಕ ಮತ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವ ಮೂಲಕ ಮತದಾನವನ್ನು ಹಬ್ಬವನ್ನಾಗಿಸುವ ಪ್ರಯತ್ನವನ್ನು ತೊಟ್ಟರು. ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದ ಮೂಲಕ ಮತದಾನ ಜಾಗೃತಿ ಮಾಡುತ್ತಿರುವುದು ಇದೇನೂ ಹೊಸದಲ್ಲ. ಆದರೆ ಹಿರಿಯ ಅಧಿಕಾರಿಗಳೇ ವೇಷ ಧರಿಸಿದ್ದು ಇದು ಪ್ರಥಮವಾಗಿದೆ. ಸ್ವೀಪ್ ಸಮಿತಿ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಕೈಗೊಂಡ ಈ ಕಾರ್ಯಕ್ರಮದಲ್ಲಿ ರಾಜ್ಯದಲ್ಲೇ ವಿಶೇಷ ಎಂಬಂತೆ ಉಡುಪಿ ಜಿಲ್ಲೆಯ ಐಎಎಸ್, ಕೆಎಸ್, ಐಪಿಎಸ್ ಅಧಿಕಾರಿಗಳು ಯಕ್ಷಗಾನ ವೇಷ ಧರಿಸಿ ಗಮನ ಸೆಳೆದಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್, ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಮಿಥುನ್ ಅವರು ಬಡಗುತಿಟ್ಟು ಯಕ್ಷಗಾನ ಶೈಲಿಯ ವೇಷಭೂಷಣ ಧರಿಸಿಕೊಂಡು ಕಾಪು ಬೀಚ್ ಸಹಿತ ಹಲವು ಪ್ರಮುಖ ಸ್ಥಳಗಳಲ್ಲಿ ಕಾಣಿಸಿಕೊಂಡು ಮತದಾನ ಜಾಗೃತಿ ಮೂಡಿಸಿದರು. ಕಳದೆ ಬಾರಿ ಕಳೆದ ಬಾರಿ ಕಾಂಡ್ಲಾವನದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!