ದುಬೈನಲ್ಲಿ ಸಿದ್ದವಾಗುತ್ತಿದೆ ವಿಶ್ವದಲ್ಲೇ ಅತಿದೊಡ್ಡ ಏರ್ಪೋರ್ಟ್.!
ವಿಶ್ವದಲ್ಲೇ ಅತಿದೊಡ್ಡ ಏರ್​ಪೋರ್ಟ್ ದುಬೈನಲ್ಲಿ ನಿರ್ಮಾಣ
400 ಗೇಟ್, 5 ರನ್​ವೇ ಇರುವ ಟರ್ಮಿನಲ್​ನ ವಿಶೇಷತೆಗಳು ಹಲವು

ಯುಎಇಯ ದುಬೈನಲ್ಲಿರುವ ಅಲ್ಮಖ್ತೂಮ್ ಇಂಟರ್ನ್ಯಾಷನಲ್ ಏರ್ಪೋರ್ಟ್ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣವಾಗಿ ನಿರ್ಮಾಣವಾಗಲಿದೆ. 

ದುಬೈನ ಈ 2ನೇ ಏರ್ಪೋರ್ಟ್ ನಲ್ಲಿ ಹೊಸ ಟರ್ಮಿನಲ್ ತಯಾರಾಗುತ್ತಿದೆ. ಈ ಟರ್ಮಿನಲ್ ಅಂದಾಜು 35 ಬಿಲಿಯನ್ ಡಾಲರ್ ವೆಚ್ಚದಲ್ಲಿ ಸಿದ್ದಗೊಳ್ಳಲಿದೆ. ಹಾಗೂ ಇದು ವಿಶ್ವದಲ್ಲೇ ಅತಿದೊಡ್ಡ ಟರ್ಮಿನಲ್ ಆಗಿದೆ. ಈ ಟರ್ಮಿನಲ್ ನಲ್ಲಿ 400 ಗೇಟ್, 5 ರನ್ ವೇ ಇರಲಿವೆ.

ದುಬೈನ ದಕ್ಷಿಣ ಭಾಗದಲ್ಲಿರುವ ಮರುಭೂಮಿಯಲ್ಲಿ ಮುಂದಿನ 10 ವರ್ಷದಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ವಿಶ್ವದ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ತನ್ನ ಇಡೀ ಕಾರ್ಯಾಚರಣೆಗಳನ್ನು ಈ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಗೊಳಿಸಲಾಗುತ್ತದೆ.

ದುಬೈನಲ್ಲಿ ಎರಡು ಏರ್ಪೋರ್ಟ್​ಗಳಿವೆ. ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ (ಡಿಎಕ್ಸ್​ಬಿ) ಮತ್ತು ಅಲ್​ಮಖ್ತೂಮ್ ಏರ್ಪೋರ್ಟ್ ಇವೆ. ವಿಶ್ವದ ಅತ್ಯಂತ ಬ್ಯುಸಿ ಏರ್ಪೋರ್ಟ್​ಗಳಲ್ಲಿ ದುಬೈ ವಿಮಾನ ನಿಲ್ದಾಣ ಒಂದು. ಇಲ್ಲಿ ಸುಮಾರು 9 ಕೋಟಿ ಜನರು ವರ್ಷದಲ್ಲಿ ಬಂದು ಹೋಗುತ್ತಾರೆ. ಈ ಏರ್ಪೋರ್ಟ್​ನಿಂದ 45 ಕಿಮೀ ದಕ್ಷಿಣಕ್ಕೆ ಅಲ್​ಮಖ್ತೂನ್ ಏರ್ಪೋರ್ಟ್ ಇದೆ. 2010ಕ್ಕೆ ಆರಂಭವಾದ ಇದರಲ್ಲಿ ಸದ್ಯ ಒಂದು ಟರ್ಮಿನಲ್ ಮತ್ತು ಎರಡು ರನ್​ವೇಗಳಿವೆ.

ಈಗ ಇರುವ ಯೋಜನೆಯಲ್ಲಿ ಅಲ್​ಮಖ್ತೂನ್ ಏರ್ಪೋರ್ಟ್​ನಲ್ಲಿ ಹೊಸ ಟರ್ಮಿನಲ್ ಸಿದ್ಧಗೊಳಿಸಲಾಗುತ್ತಿದೆ. ಇದು ವಿಶ್ವದಲ್ಲೇ ಅತಿದೊಡ್ಡ ಟರ್ಮಿನಲ್ ಆಗುತ್ತದೆ. 400 ವಿಮಾನ ಗೇಟ್​ಗಳು ಇರಲಿವೆ. ಐದು ಪರ್ಯಾಯ ರನ್​ವೇಗಳನ್ನು ನಿರ್ಮಿಸಲಾಗುತ್ತಿದೆ. ಇದು ಪೂರ್ಣವಾಗಿ ಸಿದ್ಧಗೊಂಡರೆ ದುಬೈ ಇಂಟರ್ನ್ಯಾಷನಲ್ ಏರ್​ಪೋರ್ಟ್ ಏನಿದೆ ಅದಕ್ಕಿಂತ ಐದು ಪಟ್ಟು ಬೃಹತ್ತಾಗಿರಲಿದೆ ಹೊಸ ಎರ್ಪೋರ್ಟ್. ಎರಡೂವರೆ ಕೋಟಿಗಿಂತಲೂ ಹೆಚ್ಚು ಪ್ರಯಾಣಿಕರಿಗೆ ಸೇವೆ ನೀಡುವಷ್ಟು ಬೃಹತ್ತಾಗಿರಲಿದೆ ಇದು. ಈ ಏರ್ಪೋರ್ಟ್ ನಿರ್ಮಾಣದಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಪ್ರಯೋಗವಾಗಲಿರುವ ಹೊಸ ಏವಿಯೇಶನ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆಯಂತೆ. ಏರ್ಪೋರ್ಟ್ ಸುತ್ತಲೂ ನಗರವನ್ನೂ ನಿರ್ಮಿಸಲಾಗುತ್ತಿದೆ. ಲಕ್ಷಾಂತರ ಮನೆಗಳೂ ಸುತ್ತಲೂ ನಿರ್ಮಾಣವಾಗಲಿವೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!