ಉಚಿತ ಸೇವಾ ಅಂಬುಲೆನ್ಸ್ ದ್ವಿತೀಯ ವರ್ಷಾಚರಣೆ
ಕಾಟಿಪಳ್ಳ ದ ಪ್ರತಿಷ್ಠಿತ ಸಂಸ್ಥೆಯಾದ ' ಸೇವಾ ' ಚಾರಿಟೇಬಲ್ ಟ್ರಸ್ಟ್ ನ ಕಳೆದ ಎರಡು ವರ್ಷಗಳಿಂದ ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿರುವ ಉಚಿತ ಸೇವಾ ಆಂಬ್ಯುಲೆನ್ಸ್ ನ ದ್ವಿತೀಯ ವಾರ್ಷಿಕ ದಿನಾಚರಣೆಯು ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಜರುಗಿತು.

ಉಚಿತ ಸೇವಾ ಅಂಬುಲೆನ್ಸ್ ದ್ವಿತೀಯ ವರ್ಷಾಚರಣೆ

ಕಾಟಿಪಳ್ಳ ದ ಪ್ರತಿಷ್ಠಿತ ಸಂಸ್ಥೆಯಾದ ' ಸೇವಾ ' ಚಾರಿಟೇಬಲ್ ಟ್ರಸ್ಟ್ ನ ಕಳೆದ  ಎರಡು ವರ್ಷಗಳಿಂದ ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿರುವ ಉಚಿತ ಸೇವಾ ಆಂಬ್ಯುಲೆನ್ಸ್ ನ ದ್ವಿತೀಯ ವಾರ್ಷಿಕ ದಿನಾಚರಣೆಯು ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಜರುಗಿತು.

 

ಮದ್ಯಾಹ್ನ 2 - 00 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ಜರುಗಿದವು ಔಷಧೀಯ ಮನೆಮದ್ದುಗಳ ಬಗ್ಗೆ ತಜ್ಞರಾದ ಶ್ರೀಮತಿ ಲಲಿತಾ ಪೂಜಾರಿ ಶಿಬರೂರು ಇವರಿಂದ ಮಾಹಿತಿ ಹಾಗೂ ಹಲವು ಔಷಧೀಯ ಗಿಡಗಳ ಪ್ರದರ್ಶನಗಳು ಜರುಗಿದವು. ಶ್ರೀ ರಘುರಾಮ ತಂತ್ರಿ ಗೌರವಾಧ್ಯಕ್ಷರು ನವೋದಯ ಯುವಕ ವೃಂದ ಗಣೇಶಪುರ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ಜರುಗಿತು. ಆದರ್ಶ ಯುವಕ ಮಂಡಲ ಕಾಟಿಪಳ್ಳ ಇದರ ಅಧ್ಯಕ್ಷರಾದ ಶ್ರೀ ಶಂಕರ್ ಪಿ.ಜಿ. ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಕಾಟಿಪಳ್ಳ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷರಾದ   ನೋಣಯ್ಯ ಸುವರ್ಣ , ಕೃಷ್ಣಾಪುರ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಶಿವಪ್ರಸಾದ್ ಬೊಳ್ಳಾಜೆ , ಹನುಮನಗರ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷರಾದ ಶ್ರೀ ಸುಧಾಕರ ದೇವಾಡಿಗ, ಗುರುನಗರದ ಶ್ರೀ ಗುರು ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷರಾದ ಶ್ರೀ ನಾಗೇಶ್ ಶೆಟ್ಟಿಗಾರ್ ಬಾಗವಹಿಸಿದ್ದರು. ಟ್ರಸ್ಟ್ ನ ಅಧ್ಯಕ್ಷ  ಶ್ರೀ ಎ ಪಿ ಮೋಹನ್ ಗಣೇಶಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ನ ಶ್ರೀ ರೂಪೇಶ್ ರೈ ವಂದಿಸಿದರು.  ಶ್ರೀಮತಿ ಸಂಧ್ಯಾ ಕಾಟಿಪಳ್ಳ ಹಾಗೂ ಶ್ರೀಮತಿ ರೇಖಾ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ಟ್ರಸ್ಟ್ ಆಶ್ರಯದ ' ಸೇವಾ ' ಮಹಿಳಾ ಸಮಿತಿಯ ವತಿಯಿಂದ ವಿಶಿಷ್ಟವಾದ " ಭಾರತೀಯ ನಾರಿ " ಸಂಸ್ಕೃತಿ ಆಧಾರಿತ ಸೌಂದರ್ಯ ಸ್ಪರ್ಧೆಯು ಮಹಿಳೆಯರಿಗಾಗಿ ನಡೆಯಿತು. 53 ಜನ ಸ್ಪರ್ಧಿಗಳು ಭಾಗವಹಿಸಿದ್ದರು.

ಸಂಜೆ ನಡೆದ ಉಚಿತ ಸೇವಾ ಆಂಬ್ಯುಲೆನ್ಸ್ ದ್ವಿತೀಯ ವರ್ಷಾಚರಣೆ ಸಮಾರಂಭವನ್ನು ಕಾಟಿಪಳ್ಳದ ಬ್ರಹ್ಮಶ್ರೀ ನಾರಾಯಣಗುರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ದಯಕರ ಪಿ. ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ದರು. ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಪದ್ಮನಾಭ ಸಾಲ್ಯಾನ್ ಬಾಳ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಟ್ರಸ್ಟ್ ನ ಅಧ್ಯಕ್ಷರಾದ ಎ.ಪಿ. ಮೋಹನ್ ಗಣೇಶಪುರರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಮ್ಮ ಟ್ರಸ್ಟ್ ನ ಉಚಿತ ಸೇವಾ ಆಂಬ್ಯುಲೆನ್ಸ್  ಕಳೆದ ಎರಡು ವರ್ಷಗಳಿಂದ ದಿನದ 24 ಗಂಟೆಯೂ ಸೇವೆಯನ್ನು ಗೈಯ್ಯುತ್ತಾ  ಒಟ್ಟು 333 ಪ್ರಕರಣಗಳಲ್ಲಿ ಸಂಪೂರ್ಣ ಉಚಿತ ಸೇವೆಯನ್ನು ನಡೆಸಿದೆಯಲ್ಲದೆ ಮುಂದಿನ ದಿನಗಳಲ್ಲಿ ಕೂಡಾ ಉಚಿತ ಸೇವೆ ಮುಂದುವರಿಯಲಿದೆ. ಜನತೆಯು ಸಂಪೂರ್ಣ ಸಹಕಾರವನ್ನು ನೀಡಬೇಕೆಂದು ಕೇಳಿಕೊಂಡರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದ. ಕ. ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ , ಶ್ರೀ ಧನಲಕ್ಷ್ಮೀ ಕನ್ಸ್ಟ್ರಕ್ಷನ್ ಮಾಲಕರಾದ ಶ್ರೀ ರಾಜಾರಾಮ್ ಸಾಲ್ಯಾನ್ , ಪಣಂಬೂರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ವಿವೇಕ್ ಆಚಾರ್ಯ ಕೃಷ್ಣಾಪುರ , ಸಾರ್ವಜನಿಕ ಯಕ್ಷಗಾನ ಸೇವಾ ಟ್ರಸ್ಟ್ ನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ರಾಜೇಶ್ ಕರ್ಕೇರ , ಹಿಂದೂ ಯುವ ಸೇನೆ ಸುರತ್ಕಲ್  'ಓಂಕಾರ' ಘಟಕದ ಅಧ್ಯಕ್ಷರಾದ  ಶ್ರೀ ಬಾಲಕೃಷ್ಣ ಶೆಟ್ಟಿ , ಹೋಟೆಲ್  ಉದ್ಯಮಿ ಶ್ರೀ ಆಶಿಕ್ ಕುಮಾರ್ ಎಂ.ಆರ್.ಪಿ.ಯೆಲ್, ಪಿ.ಡಿ.ಎಫ್ ಉಪಾಧ್ಯಕ್ಷರಾದ ಶ್ರೀ ದಿನೇಶ್ ಶೆಟ್ಟಿ ಕಾಟಿಪಳ್ಳ , ಗಣೇಶಕಟ್ಟೆ ಸೇವಾ ಸಮಿತಿ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಸುರೇಶ್ ಗಣೇಶಕಟ್ಟೆ  , ಸಮಾಜಸೇವಕ ಶ್ರೀ ಲತೇಶ್ ಎಂ.ಆರ್.ಪಿ.ಯೆಲ್, ಉದ್ಯಮಿ ಲಯನ್ ಶ್ರೀ ದೀಪಕ್ ಪೂಜಾರಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಭಾರತೀಯ ನಾರಿ '  ಸ್ಪರ್ಧೆಯ ಸಂಯೋಜಕರಾದ ಶ್ರೀಮತಿ ಗುಣವತಿ ರಮೇಶ್ , ಶ್ರೀ ಪ್ರಮೀಳಾ ದೀಪಕ್ ಶ್ರೀಮತಿ ಕರುಣಾ ದೇವಾಡಿಗ , ' ಸೇವಾ ' ಮಹಿಳಾ ಸಮಿತಿಯ ಶ್ರೀಮತಿ ವಸಂತಿ ಸುವರ್ಣ ಉಪಸ್ಥಿತರಿದ್ದರು . ಕಾರ್ಯಕ್ರಮದಲ್ಲಿ ಉಚಿತ ಸೇವಾ ಅಂಬುಲೆನ್ಸ್ ನಲ್ಲಿ ರಾತ್ರಿ ಪಾಳಿಯಲ್ಲಿ ಸೇವಾ ರೂಪದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟ್ರಸ್ಟ್ ನ 13ಜನ ಚಾಲಕರುಗಳನ್ನು ಅಭಿನಂದಿಸಲಾಯಿತು.

ಸೇವಾ ಚಾರಿಟೇಬಲ್ ಟ್ರಸ್ಟ್ ನ ಶ್ರೀ ಶ್ರೀನಿವಾಸ ಭಟ್ ಬಾಲಾಜ್ಜೆ , ಶ್ರೀ ಯೋಗೀಶ್ ನಾಯಕ್ , ಶ್ರೀ ಗಿರೀಶ್ ನಾಯಕ್ , ಶ್ರೀ ಸಂದೀಪ್  , ಶ್ರೀ ಲೋಕನಾಥ್ ಶೆಟ್ಟಿ , ಶ್ರೀ ಸುಧಾಕರ ಬೊಳ್ಳಾಜ್ಜೆ , ಶ್ರೀ ತಾರಾನಾಥ್ ಶೆಟ್ಟಿ , ಶ್ರೀ ಪ್ರಶಾಂತ ಕುಲಾಲ್ , ಶ್ರೀ ಮಂಜುನಾಥ ಪೂಜಾರಿ , ಶ್ರೀ ತಾರಾನಾಥ್ ಶೆಟ್ಟಿಗಾರ್ , ಶ್ರೀ ಕಿಶನ್ ಅಮೀನ್ , ಶ್ರೀ ರವೀಂದ್ರ ದೇವಾಡಿಗ , ಶ್ರೀ ಗಣೇಶ್ ದೇವಾಡಿಗ , ಸೇವಾ ಯುವ ಬ್ರಿಗೇಡ್ ನ ಶ್ರೀ ಕುಕ್ಯಾನ್ , ಶ್ರೀ ಜಗದೀಶ್ ದೇವಾಡಿಗ , ಶ್ರೀ ದೀಪಕ್ ದೇವಾಡಿಗ ಹಾಗೂ ಸೇವಾ ಮಹಿಳಾ ಸಮಿತಿಯ ಶ್ರೀಮತಿ ವಸಂತಿ ಸುವರ್ಣ , ಶ್ರೀಮತಿ ನವೀನಾಕ್ಷಿ , ಶ್ರೀ ಇಂದಿರಾಕ್ಷಿ ಹರೀಶ್ , ಶ್ರೀಮತಿ ವಿಜಯ ಶೆಟ್ಟಿ , ಶ್ರೀಮತಿ ಜ್ಯೋತಿ ದೇವೇಂದ್ರ ಮುಂತಾದವರು ಉಪಸ್ಥಿತರಿದ್ದರು. 

 

ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶ್ರೀ ದಿನೇಶ್ ಸುವರ್ಣ ಸ್ವಾಗತಿಸಿ . ಶ್ರೀಮತಿ ಸಂಧ್ಯಾ ಹಾಗೂ ಶ್ರೀಮತಿ ರೇಖಾ ಕಾಟಿಪಳ್ಳ ಕಾರ್ಯಕ್ರಮವನ್ನು ನಿರೂಪಿಸಿದರು , ಶ್ರೀ ಪ್ರಸನ್ನ ದೇವಾಡಿಗ ವಂದಿಸಿದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!