ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಇದರ 4ನೇ ವರ್ಷದ ಭಕ್ತಿ ಧರ್ಮದ ನಡೆ ಪಾದಯಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ...
ವಿಷ್ಣುಮೂರ್ತಿ ದೇವಾಸ್ಥನ ಕುಳಾಯಿಯಲ್ಲಿ ನಡೆಯಿತು.

ಮಂಗಳೂರು: ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಈ ಸಂಸ್ಥೆಯಿಂದ 4 ವರ್ಷದಿಂದ ನಡೆಯುತ್ತಿರುವ ಭಕ್ತಿ ಧರ್ಮದ ನಡೆ ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಇಂದು ವಿಷ್ಣುಮೂರ್ತಿ ದೇವಾಸ್ಥನ ಕುಳಾಯಿಯಲ್ಲಿ ನಡೆಯಿತು. 

ಕಾರ್ಯಕ್ರಮನ್ನು ಉದ್ಘಾಟಿಸಿ ಆಮಂತ್ರಣ ಪತ್ರಿಕೆಯನ್ನು ಚಿತ್ರಾಪುರ ದೇವಸ್ಥಾನ ಮತ್ತು ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀ ಪಾದರು ಬಿಡುಗಡೆ ಮಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ಅವರು ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಈ ಸಂಸ್ಥೆಯಿಂದ ಬಡವರಿಗೆ ಸಹಾಯವಾಗಿದೆ ಮತ್ತು 4 ವರ್ಷಗಳಿಂದ ನಡೆಯುತ್ತಿರುವ ಈ ಭಕ್ತಿ ಧರ್ಮದ ನಡೆ ಯಶ್ವಸಿಯಾಗಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಮುಲ್ಕಿ ಸೀಮೆ ಅನುವಂಶಿಕ ಅರಸರಾದ ದುಗ್ಗಣ್ಣ ಸಾವಂತರು, ವಿಶ್ವ ಹಿಂದು ಪರಿಷತ್‌ ಇದರ ಪ್ರಾಂತ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸುದರ್ಶನ್‌ ಮೂಡಬಿದ್ರೆ, ಭಜರಂಗದಳ  ವಿಭಾಗ ಸಂಯೋಜಕ ಭುಜಂಗ ಕುಲಾಲ್‌ ಅದ್ಯಪಾಡಿ, ಜಯರಾಮ್‌ ಶೆಟ್ಟಿ ಗುತ್ತಿನಾರ್‌ ಪಿಲಿ ಚಾಮುಂಡಿ ದೈವಸ್ಥಾನ ತೋಕೂರು, ಅನುವಂಶಿಕ ಮೋಕ್ತಸರ ಕೃಷ್ಣ ಹೆಬ್ಬಾರ್‌, ಚಿತ್ರಾಪುರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಉಮೇಶ್‌ ಕರ್ಕೇರ, ಮಂಗಳೂರು ಮಹಾ ನಗರ ಪಾಲಿಕೆಯ ಸದಸ್ಯರಾದ ವೇದಾವತಿ, ವರುಣ್‌ ಚೌಟ, ನಯನ ಕೋಟ್ಯಾನ್‌, ಶ್ವೇತ ಪೂಜಾರಿ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು. 

ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ (ರಿ) ಮಂಗಳೂರು ಈ ಸಂಸ್ಥೆಯು ಅಶಕ್ತ ಹಿಂದೂ ಕುಟುಂಬಗಳನ್ನು ಗುರುತಿಸಿಕೊಂಡು ಅವರ ಕಂಬನಿಯನ್ನು ಒರೆಸುವ ನಿಟ್ಟಿನಲ್ಲಿ ತಮ್ಮಲ್ಲಾದ ಸಹಾಯನ್ನು ಮಾಡುತ್ತ ಬಂದಿದೆ. ಈ ಸಂಸ್ಥೆಯ ವತಿಯಿಂದ ಭಕ್ತಿ ಹಾಗೂ ಧರ್ಮದ ಗುರಿಯೊಂದಿಗೆ ಲೋಕ ಕಲ್ಯಾಣಕ್ಕಾಗಿ ಕಷ್ಟ ಕಾರ್ಪಾಣ್ಯಗಳ ನಿವಾರಣೆಗೆ ಭಕ್ತ ಜನರ ಪಾದಯಾತ್ರೆಯನ್ನು ಚಿತ್ರಾಪುರ ದೇವಸ್ಥಾನ ಮತ್ತು ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀ ಪಾದರ ಶುಭಾರ್ಶಿವಾದದೊಂದಿಗೆ ಪರಮ ಪಾದದಿಂದ ಮೂಲ ಪಾದದೆಡೆಗೆ ಸುಭೀಜ್ಞಾ ಸಮಾಜದ ಗುರಿಯೊಂದಿಗೆ ಭಕ್ತ ಜನರ ಪಾದಯಾತ್ರೆ ನಡೆಯಲಿದೆ. ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಈ ಪಾದಯಾತ್ರೆ ನಡೆಯಲಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!