ಉಡುಪಿ: ಶಾಲೆಯಲ್ಲಿ "ಅಲ್ಲಾಹು ಅಕ್ಬರ್" ಹಾಡಿಗೆ ವಿದ್ಯಾರ್ಥಿಗಳಿಂದ ನೃತ್ಯ; ಹಿಂದೂ ಸಂಘಟನೆಗಳಿಂದ ಆಕ್ಷೇಪ
ಆಜಾನ್‌ಗೆ ವಿದ್ಯಾರ್ಥಿಗಳಿಂದ ನೃತ್ಯ

ಉಡುಪಿ: ಕುಂದಾಪುರ ತಾಲೂಕಿನ ಖಾಸಗಿ ಶಾಲೆಯ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಆಜಾನ್‌ಗೆ ನೃತ್ಯ ಮಾಡಿದ್ದಕ್ಕೆ ಹಿಂದೂಗಳಿಂದ ಆಕ್ಷೇಪ ವ್ಯಕ್ತವಾದ ಘಟನೆ ನಡೆದಿದೆ. 

ಶಂಕರನಾರಾಯಣದ ಮದರ್ ಥೆರೆಸಾ ಮೆಮೋರಿಯಲ್ ಶಾಲೆ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಕ್ರೀಡಾಕೂಟ ಆಯೋಜಿಸಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮಾಡಿದ ಸ್ವಾಗತ ನೃತ್ಯ ಚರ್ಚೆಗೆ ಕಾರಣವಾಯ್ತು. ಸ್ವಾಗತ ನೃತ್ಯದಲ್ಲಿ ಹಿಂದೂ, ಕ್ರೈಸ್ತ, ಇಸ್ಲಾಂ ಹಾಡುಗಳಿಗೆ ವಿದ್ಯಾರ್ಥಿನಿಯರಿಂದ ನೃತ್ಯ ನಡೆದಿದೆ. ಅಲ್ಲಾಹು ಅಕ್ಬರ್‌ಗೆ (ಆಜಾನ್) ವಿದ್ಯಾರ್ಥಿಗಳು ನೃತ್ಯ ಮಾಡಿದ್ದಕ್ಕೆ ಸ್ಥಳದಲ್ಲೇ ಆಕ್ಷೇಪ ವ್ಯಕ್ತವಾಯ್ತು. ವೇದಿಕೆಯಲ್ಲಿದ್ದ ಸ್ಥಳೀಯ ಬಿಜೆಪಿ ಮುಖಂಡ ಉಮೇಶ್ ಶೆಟ್ಟಿ ಕಲ್ಗದ್ದೆ ಖಂಡನೆ ಮಾಡಿದರು.

ಸ್ಥಳೀಯ ಹಿಂದೂ ಪರ ಸಂಘಟನೆಗಳ ಖಂಡಿಸಿದ್ದು, ಶಾಲಾ ಆಡಳಿತ ಮಂಡಳಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು. ಕ್ಷಮೆ ಯಾಚಿಸದಿದ್ದರೆ ಪ್ರತಿಭಟಿಸುವ ಎಚ್ಚರಿಕೆ ನೀಡಿದರು. ಕೆಲಕಾಲ ಚರ್ಚೆ ನಡೆದು, ಶಾಲಾ ಆಡಳಿತ ಮಂಡಳಿ ವಿಷಾದ ವ್ಯಕ್ತಪಡಿಸಿದೆ.

ಸ್ವಾಗತ ನೃತ್ಯದಲ್ಲಿ 30 ಸೆಕೆಂಡ್ ಆಜಾನ್‌ಗೆ ವಿದ್ಯಾರ್ಥಿಗಳು ನೃತ್ಯ ಮಾಡಿದ್ದರು, ಆಮೇಲೆ ಕ್ರೈಸ್ತ ಧರ್ಮದ ಬೈಬಲ್‌ ಮತ್ತು ಶ್ಲೋಕಕ್ಕೆ ಹೆಜ್ಜೆ ಹಾಕಿದ್ದರು. ಹಿಂದೂ ಧಾರ್ಮಿಕ ಪದ್ಯಕ್ಕೂ ವಿದ್ಯಾರ್ಥಿಗಳು ಕುಣಿದಿದ್ದರು. ಆಜಾನ್ ಹೆಜ್ಜೆ ಹಾಕಿದ್ದರು. ಯಾರದ್ದೂ ಭಾವನೆಯನ್ನು ಘಾಸಿಗೊಳಿಸಲಾಗಿದೆ ಉದ್ದೇಶ ನಮ್ಮದಾಗಿರಲಿಲ್ಲ. ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದ್ದರೆ ಕ್ಷಮೆಯಾಚಿಸುತ್ತೇವೆ ಎಂದು ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರು ವಿಷಾದ ವ್ಯಕ್ತಪಡಿಸಿದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!