ಮಂಗಳೂರು:  ಕುಕ್ಕರ್ ಬಾಂಬ್ ಜೊತೆ ಫೋಟೋ; ಐಸಿಸ್‌ ನಂಟು..! ಶಾರಿಕ್‌ ಭಯಾನಕ ಹಿನ್ನಲೆ ಬಯಲು
ಮಂಗಳೂರಿನ ಸ್ಫೋಟ ಭಯಾನಕ ಹಿನ್ನಲೆ ಬಯಲು

ಮಂಗಳೂರಿನ ನಾಗೂರಿನ  ಬಳಿ ಆಟೋದಲ್ಲಿ ಸಂಭವಿಸಿದ  ನಿಗೂಢ ಸ್ಫೋಟದ ಹಿಂದಿರುವ ವ್ಯಕ್ತಿಯ ಗುರುತು ಕೊನೆಗೂ ಪತ್ತೆಯಾಗಿದೆ. ಕುಕ್ಕರ್ ಬಾಂಬ್ ತಂದಿದ್ದ ಎನ್ನಲಾದ ಆಟೋ ಪ್ರಯಾಣಿಕ ಸ್ಫೋಟದ ವೇಳೆ ಗಾಯಗೊಂಡಿದ್ದ. ಈತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿ ಶಾರೀಕ್ ಎಂಬ ಶಂಕೆಯ ಮೇಲೆ ಪೊಲೀಸರು ಆತನ ಕುಟುಂಬ ಸದಸ್ಯರನ್ನು ಮಂಗಳೂರಿಗೆ ಕರೆಸಿಕೊಂಡಿದ್ದರು. ಸದ್ಯ ಈತನ ಬಗ್ಗೆ ಹಲವು ಮಾಹಿತಿಗಳು ಲಭ್ಯವಾಗಿದ್ದು, ಇದು ಉಗ್ರ ಸಂಚು ಆರೋಪಿ ಶಾರಿಕ್‌ ಐಸಿಸ್‌ ಲಿಂಕ್‌ ಇರುವುದು ತಿಳಿದುಬಂದಿದೆ.

ಇಂದು  ಬೆಳಿಗ್ಗೆ ಶಂಕಿತ ಚಿಕಿತ್ಸೆ ಪಡೆಯುತ್ತಿದ್ದ ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆಗೆ ಕುಟುಂಬ ಸದಸ್ಯರು ಭೇಟಿ ನೀಡಿದರು. ಈ ವೇಳೆ ಮಂಗಳೂರು ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಉಪಸ್ಥಿತರಿದ್ದರು. ಅವರ ಸಮ್ಮುಖದಲ್ಲೆ ಕುಟುಂಬ 3 ಸದಸ್ಯರು ಗಾಯಾಳು ತಮ್ಮ ಕುಟುಂಬ ಸದಸ್ಯ ಮಹಮ್ಮದ್ ಶಾರೀಕ್ ಖಚಿತ ಪಡಿಸಿದ್ದಾರೆ. ಕೆಲ ಸಮಯದ ಆಸ್ಪತ್ರೆಯಲ್ಲಿ ವ್ಯಯಿಸಿದ ಕುಟುಂಬ ಸದಸ್ಯರು, ಗುರುತು ಪತ್ತೆ ಹಚ್ಚುವ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಲೇ ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ. ಈ ವೇಳೆ ಆಸ್ಪತ್ರೆಯ ಮುಂದೆ ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳು ಅವರನ್ನು ಮಾತನಾಡಿಸಲು ಯತ್ನಿಸಿದರಾದರೂ ಅವರು ಯಾವುದೇ ಹೇಳಿಕೆ ನೀಡಲು ನಿರಾಕರಿಸಿ ಅಲ್ಲಿಂದ ಹೊರ ನಡೆದಿದ್ದಾರೆ.

ಐಸಿಸ್ ನಿಂದ ಪ್ರಭಾವಿತನಾಗಿದ್ದ ಶಂಕಿತ ಉಗ್ರ ಶಾರಿಕ್ ಎಂದು ಮೂಲಗಳು ತಿಳಿಸಿದೆ. ಈತ ಹಲವು ನಕಲಿ ಆದರ್ ಕಾರ್ಡ್ ಬಳಸಿದ್ದ. ಆರೋಪಿ ಶಾರಿಕ್ ಕೊಯಂಬುತ್ತುರುನಲ್ಲಿ ಕೂಡ ನಕಲಿ ಆಧಾರ್ ಕಾರ್ಡನ್ನು ಬಳಸಿ ತಂಗಿದ್ದ ಎನ್ನಲಾಗಿದೆ. ಮೈಸೂರಿನ ರೂಮ್ ನಲ್ಲಿ 5 ಬ್ಯಾಗನಲ್ಲಿ ಬಾಂಬ್ ತಯಾರಿ ವಸ್ತುಗಳು ಇತ್ತು. ಈತ ಬಾಂಬ್‌ ತಯಾರಿಯನ್ನು ಕುದ್ದಾಗಿ ಮಾಡುತ್ತಿದ್ದ ಎನ್ನುವಂತಹ ಮಾಹಿತಿಗಳು ಲಭ್ಯವಾಗಿದೆ. ಮೈಸೂರು ರೂಮ್ ಓನರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಂಕಿತ ಉಗ್ರ ಶಾರಿಕ್ ಕುಕ್ಕರ್ ಬಾಂಬ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಈತ  ಕುಕ್ಕರ್ ಬಾಂಬ್ ಹಿಡಿದುಕೊಂಡ ಫೋಟೋ ಲಭ್ಯವಾಗಿದ್ದು, ಈತನ ಹಿಂದೆ ದೊಡ್ಡಮಟ್ಟದ ಸಂಚು ಇದೆ. ಈತನ ಪ್ಲಾನ್‌ ಏನಾಗಿತ್ತು. ಯಾರು ಇದರ ರೂವಾರಿ ಎನ್ನುವುದು ಸದ್ಯದಲ್ಲೇ ಹೊರಬೀಳಲಿದೆ. 

ಎರಡು ವರ್ಷಗಳ ಹಿಂದೆ ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ ಗೋಡೆ ಮೇಲೆ ಉಗ್ರ ಸಂಘಟನೆ ಲಷ್ಕರ್ ಪರವಾಗಿ ಬರಹ ಬರೆಯಲಾಗಿತ್ತು. ಈ ಪ್ರಕರಣದಲ್ಲಿ ಮಾಝ್ ಮುನೀರ್ ಜೊತೆ ಶಾರೀಕ್‌ನನ್ನು ಬಂಧಿಸಲಾಗಿತ್ತು. ಆ ಪ್ರಕರಣದಲ್ಲಿ ಬಂಧಿತನಾಗಿದ್ದ ಶಾರೀಕ್ ಇಂದಿನ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಒಬ್ಬನೇ ಈ ಮೂಲಕ ಖಚಿತಗೊಂಡಂತಾಗಿದೆ. ಮಂಗಳೂರು ಆಟೋ ಬ್ಲಾಸ್ಟ್ ಹಿಂದೆ ಶಾರೀಕ್ ಪಾತ್ರ ಇರೋದು ಮೇಲ್ನೋಟಕ್ಕೆ ಖಚಿತವಾಗುತ್ತಲೇ ಆತನಿಗೆ ಸಂಬಂಧಿಸಿದ ತೀರ್ಥಹಳ್ಳಿಯ ನಾಲ್ಕು ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನು ಶಂಕಿತ ಉಗ್ರ ಶಾರೀಕ್ ಮುಖ ಊದಿಕೊಂಡಿದ್ದು, ಸುಮಾರು ಶೇ.40ರಷ್ಟು ದೇಹದ ಭಾಗ ಸುಟ್ಟಿದೆ. ಸದ್ಯ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿದು ಬಂದಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಶಂಕಿತ ಉಗ್ರನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿ ಶಾರೀಕ್ ಎಂದು ಗುರುತಿಸಿದ್ದರು.ಬಆದ್ರೆ ಮುಖ ಊದಿಕೊಂಡಿರುವ ಹಿನ್ನೆಲೆ ಸ್ಪಷ್ಟವಾಗಿ ಗುರುತು ಪತ್ತೆಯಾಗಿಲ್ಲ. ಈ ಹಿನ್ನೆಲೆ ಶಿವಮೊಗ್ಗದಿಂದ ಶಾರೀಕ್ ಪೋಷಕರನ್ನು ಮಂಗಳೂರಿಗೆ ಕರೆಸಲಾಗಿತ್ತು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!