ಕಾರ್ಕಳ: ಗುಂಡಿಗೆ ಉರುಳಿ ಬಿದ್ದ ಕಾರು; ಓರ್ವ ಸಾವು
ಕೆದಿಂಜೆ ಸಮೀಪ ಕಣಿವೆಗೆ ಉರುಳಿದ ಕಾರು – ಓರ್ವ ಸಾವು

ಕಾರ್ಕಳ: ಕಾರೊಂದು ಕಣಿವೆಗೆ ಉರುಳಿ ಬಿದ್ದು ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಬೋಳ ಕೆದಿಂಜೆ ಸಮೀಪದ ಮಂಜರಪಲ್ಕೆಯಲ್ಲಿ ನಡೆದಿದೆ. 

ಕಿಯಾ ಕಾರೊಂದು ಬೋಳ ಕೆದಿಂಜೆ ಸಮೀಪದ ಮಂಜರಪಲ್ಕೆಯಲ್ಲಿ  ಕಣಿವೆಗೆ ಉರುಳಿ ಬಿದಿದ್ದು, ಕಾರಿನಲ್ಲಿ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ 6 ಮಂದಿ ಪ್ರಯಾಣಿಸುತ್ತಿದ್ದು, ಅವರಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಕಾರ್ಕಳದಿಂದ ಬೆಳ್ಮಣ್ ಕಡೆಗೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಉರುಳಿ ಬಿದ್ದಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

 

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!