ಶಬರಿಮಲೆ ಪ್ರಸಾದದಲ್ಲಿ ಕೀಟನಾಶಕದ ಅಂಶ.! ಅರವಣ ಪ್ರಸಾದಕ್ಕೆ ಹೈಕೋರ್ಟ್ ನಿಷೇಧ
ಶಬರಿಮಲೆ ಪ್ರಸಾದದಲ್ಲಿ ಕೀಟನಾಶಕದ ಅಂಶ.! ಅರವಣ ಪ್ರಸಾದಕ್ಕೆ ಹೈಕೋರ್ಟ್ ನಿಷೇಧ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವನ್ನು ನಿರ್ವಹಿಸುವ ಟ್ರಾವಾಂಕೋರ್ ದೇವಸ್ವಂ ಮಂಡಳಿಗೆ ‘ಅರವಣ ಪ್ರಸಾದಮ್’ ವಿತರಣೆಯನ್ನು ತಕ್ಷಣ ನಿಲ್ಲಿಸುವಂತೆ ಕೇರಳ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ.

ಭಾರತೀಯ ಆಹಾರ ಸುರಕ್ಷೆ ಮತ್ತು ಮಾನಕಗಳ ಪ್ರಾಧಿಕಾರವು ತನ್ನ ಪ್ರಯೋಗಾಲಯದಲ್ಲಿ ಅಯ್ಯಪ್ಪಸ್ವಾಮಿ ಪ್ರಸಾದಕ್ಕೆ ಬಳಕೆಯಾಗುವ ಏಲಕ್ಕಿಯನ್ನು ತಪಾಸಣೆಗೆ ಒಳಪಡಿಸಿದಾಗ ಕೀಟನಾಶಕದ ಉಳಿಕೆ ಪ್ರಮಾಣವು ಅಪಾಯಕಾರಿ ಮಟ್ಟದಲ್ಲಿದ್ದ ಸಂಗತಿ ಬೆಳಕಿಗೆ ಬಂದಿತ್ತು. ‘ಮನುಷ್ಯರ ಬಳಕೆಗೆ ಇದು ಸುರಕ್ಷಿತ ಅಲ್ಲ’ ಎಂದು ಆಹಾರ ವಿಜ್ಞಾನಿಗಳು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್​ ಪ್ರಸಾದ ವಿತರಣೆ ನಿಲ್ಲಿಸುವಂತೆ ಆದೇಶ ಹೊರಡಿಸಿತು.

ನ್ಯಾಯಮೂರ್ತಿಗಳಾದ ಅನಿಲ್ ಕೆ.ನರೇಂದ್ರನ್ ಮತ್ತು ಪಿ.ಜಿ.ಅಜಿತ್​ಕುಮಾರ್ ಅವರಿದ್ದ ಕೇರಳ ಹೈಕೋರ್ಟ್​ನ ವಿಭಾಗೀಯ ನ್ಯಾಯಪೀಠವು ಆದೇಶದ ಪ್ರತಿಗಾಗಿ ಕಾಯುವ ಅಗತ್ಯವಿಲ್ಲ. ತಕ್ಷಣದಿಂದ ಜಾರಿಗೆ ಬರುವಂತೆ ಪ್ರಸಾದ ವಿತರಣೆ ನಿಲ್ಲಿಸಬೇಕು ಎಂದು ಸೂಚಿಸಿತು. ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ಟಿಡಿಬಿ ಪರ ವಕೀಲರು ಈ ಸೂಚನೆಯನ್ನು ಆಡಳಿತ ಮಂಡಳಿಯ ಗಮನಕ್ಕೆ ದೂರವಾಣಿಯ ಮೂಲಕವೇ ತರಬೇಕು. ಆದೇಶವು ಜಾರಿಯಾಗಬೇಕು ಎಂದು ಸೂಚಿಸಿತು.

ಇಡುಕ್ಕಿ ಮೂಲದ ‘ಅಯ್ಯಪ್ಪ ಸ್ಪೈಸಸ್’ ಸಂಸ್ಥೆಯು ಈ ಸಂಬಂಧ ವಕೀಲ ವಿ.ಸೇತುನಾಥ್ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೇ ಅರ್ಜಿದಾರರು ಕಳೆದ ವರ್ಷದ ‘ಮಂಡಳ-ಮಕರವಿಳಕ್ಕು’ ಹಬ್ಬದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಏಲಕ್ಕಿ ಸರಬರಾಜು ಮಾಡಿತ್ತು. ಈ ವರ್ಷ ಸ್ಥಳೀಯ ವ್ಯಾಪಾರಿಗಳಿಂದ ಏಲಕ್ಕಿ ಖರೀದಿಸಲು ಮುಂದಾಗಿದ್ದ ಶಬರಿಮಲೆ ದೇಗುಲ ಮಂಡಳಿ, ಟೆಂಡರ್​ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸಿರಲಿಲ್ಲ. ದಿನಪತ್ರಿಕೆಗಳಲ್ಲಿ ಜಾಹೀರಾತನ್ನೂ ನೀಡಿರಲಿಲ್ಲ ಎಂದು ಅರ್ಜಿದಾರರು ಆರೋಪ ಮಾಡಿದ್ದರು. ಕೊಲ್ಲಂ ಸಮೀಪದ ಕರುನಗಪ್ಪಲ್ಲಿ ಗ್ರಾಮದ ಸುನಿಲ್ ಎಂಬುವವರು ಈ ಹಬ್ಬಸಾಲಿಗಾಗಿ 15 ಕ್ವಿಂಟಲ್ ಏಲಕ್ಕಿ ಸರಬರಾಜು ಮಾಡುವ ಆರ್ಡರ್ ನೀಡಲಾಗಿತ್ತು.

ಏಲಕ್ಕಿಯಲ್ಲಿ 14 ಕೀಟನಾಶಕಗಳ ಉಳಿಕೆ ಪತ್ತೆ

ಅಪಾಯಕಾರಿ ಮಟ್ಟದಲ್ಲಿ ಕೀಟನಾಶಕದ ಉಳಿಕೆ ಇರುವ ಏಲಕ್ಕಿ ಬಳಸಿ ಸಿದ್ಧಪಡಿಸಿದ ಪ್ರಸಾದವನ್ನು ಭಕ್ತರಿಗೆ ನೀಡುವಂತಿಲ್ಲ. ಈ ಆದೇಶ ಪಾಲನೆಯ ಖಾತ್ರಿಯ ಹೊಣೆಯು ಆಹಾರ ಸುರಕ್ಷಾ ಆಯುಕ್ತರದು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಯೋಗಾಲಯದ ವರದಿಯ ಪ್ರಕಾರ, ಈ ಏಲಕ್ಕಿಯಲ್ಲಿ 14 ಕೀಟನಾಶಕಗಳ ಉಳಿಕೆ ಪ್ರಮಾಣವು ಗರಿಷ್ಠ ಮಿತಿಯನ್ನು ಮೀರಿದೆ. ಡಿತಿಯೊಕಾರ್​ಬಮೇಟ್ಸ್, ಸೈಪರ್​ಮೆತರಿನ್, ಇಮಿಡಾಕ್ಲೊಪ್ರಿಡ್ ಪ್ರಮಾಣ ಗಣನೀಯ ಮಟ್ಟದಲ್ಲಿದೆ.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!