ನಿಗದಿತ ಕಕ್ಷೆ ತಲುಪಿದ ಆದಿತ್ಯ ಎಲ್1..! 126 ದಿನಗಳ ಯಶಸ್ವಿ ಪ್ರಯಾಣ
ನಿಗದಿತ ಕಕ್ಷೆ ತಲುಪಿದ ಆದಿತ್ಯ ಎಲ್1..! 126 ದಿನಗಳ ಯಶಸ್ವಿ ಪ್ರಯಾಣ

ಬಾಹ್ಯಾಕಾಶದಲ್ಲಿ ಇಸ್ರೋ ಮಹತ್ವದ ಮೈಲಿಗಲ್ಲು ನೆಟ್ಟಿದೆ. ಸೆಪ್ಟೆಂಬರ್ 2 ರಂದು ಉಡಾವಣೆಯಾಗಿದ್ದ ಆದಿತ್ಯ ಎಲ್-1 ನೌಕೆ ಅಂದಾಜು 15 ಲಕ್ಷ ಕಿಲೋಮೀಟರ್ ದೂರ ಸಂಚಾರ ಮಾಡಿದ್ದು, ಶನಿವಾರ ತನ್ನ ನಿಗದಿತ ಸ್ಥಳವನ್ನು ಯಶಸ್ವಿಯಾಗಿ ತಲುಪಿದೆ. 

ಅಂದಾಜು 126 ದಿಗಳ ಕಾಲ 15 ಲಕ್ಷ ಕಿಲೋಮೀಟರ್ ಪ್ರಯಾಣ ಮಾಡಿದ ನೌಕೆ, ಸಂಜೆ 4 ಗಂಟೆಯ ವೇಳೆಗೆ ತನ್ನ ಗಮ್ಯ ಸ್ಥನವನ್ನು ತಲುಪಿತು. ಇದೇ ಸ್ಥಳದಲ್ಲಿ ಮುಂದಿನ 5 ವರ್ಷಗಳ ಕಾಲ ಭಾರತದಿಂದ ಸೂರ್ಯ ಕಣ್ಣಾಗಿ ಅಧ್ಯಯನ ಮಾಡಲಿದೆ. ಅದರೊಂದಿಗೆ ಬಾಹ್ಯಾಕಾಶದಲ್ಲಿರುವ ಭಾರತದ 50 ಸಾವಿರ ಕೋಟಿ ಮೌಲ್ಯದ 400ಕ್ಕೂ ಅಧಿಕ ಉಪಗ್ರಹಗಳ ರಕ್ಷಣೆಯ ಕೆಲಸವನ್ನೂ ಮಾಡಲಿದೆ. 

ಬಾಹ್ಯಾಕಾಶ ನೌಕೆಯು 440ಓ ಲಿಕ್ವಿಡ್ ಅಪೋಜಿ ಮೋಟಾರ್ (ಐಂಒ) ಅನ್ನು ಹೊಂದಿದ್ದು, ಅದರ ಸಹಾಯದಿಂದ ಆದಿತ್ಯ-ಐ1 ಅನ್ನು ಹಾಲೋ ಕಕ್ಷೆಗೆ ಕಳುಹಿಸಲಾಗಿದೆ.  ಈ ಮೋಟಾರ್ ಇಸ್ರೋದ ಮಾರ್ಸ್ ಆರ್ಬಿಟರ್ ಮಿಷನ್ (ಒಔಒ) ನಲ್ಲಿ ಬಳಸಿದಂತೆಯೇ ಇದೆ. ಇದರ ಹೊರತಾಗಿ, ಆದಿತ್ಯ-ಐ1 ಎಂಟು 22ಓ ಥ್ರಸ್ಟರ್‌ಗಳನ್ನು ಮತ್ತು ನಾಲ್ಕು 10ಓ ಥ್ರಸ್ಟರ್‌ಗಳನ್ನು ಹೊಂದಿದೆ, ಇದು ಅದರ ನಿಯಂತ್ರಣಕ್ಕೆ ಅವಶ್ಯಕವಾಗಿದೆ.

ಆದಿತ್ಯ ಐ1 ಮಿಷನ್ ಇಂದ ಸೂರ್ಯನ ವಾತಾವರಣದ ಸೌರಗಾಳಿ, ಸೌರ ಉಷ್ಣತೆ, ಸೌರನ ಬಿಂಬದಲ್ಲಿನ ಕಪ್ಪುಕುಳಿಗಳು, ಸೌರ ಮೇಲ್ಮೈನ ಹೊರ ಉಷ್ಣತಾ ಜ್ವಾಲೆಗಳು, ಅಲ್ಲಿರುವ ಹೀಲಿಯಂ ಪ್ರಮಾಣ, ಆಮ್ಲಜನಕ ಇತ್ಯಾದಿ ಅನಿಲ ಮತ್ತು ಖನಿಜಗಳ ಬಗ್ಗೆ ಮಾಹಿತಿಗಳನ್ನು ಹೊಂದಲು ಇಸ್ರೋದಿಂದ ಅಧ್ಯಯನ ನಡೆಸಲಾಗುತ್ತದೆ.

ಈ ಅಧ್ಯಯನದಿಂದ ಸೌರಗಾಳಿಯಿಂದ ಉಂಟಾಗುವ ಅಧಿಕ ಉಷ್ಣತೆಯ ಅಲೆಗಳಿಂದ ಭೂಮಿಯ ಮೇಲೆ ಉಂಟಾಗುವ ಹಾನಿಯನ್ನು ಅಂದಾಜಿಸಿ ಅದನ್ನು ತಡೆಯುವ ಪ್ರಯತ್ನ ಮಾಡಬಹುದು. ಉಪಗ್ರಹಗಳಿಗೆ, ಅಣು ರಿಯಾಕ್ಟರ್‌ಗಳಲ್ಲಿ, ವಿದ್ಯುತ್ ವ್ಯವಸ್ಥೆಗಳಲ್ಲಿ ಉಂಟಾಗುವ ಏರುಪೇರುಗಳನ್ನ ಕಡಿಮೆ ಮಾಡುವ ಪ್ರಯತ್ನ ಮಾಡಬಹುದಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!