ಲೋಕಸಭೆ ಚುನಾವಣೆ ಅಖಾಡಗಳಲ್ಲಿ ಕೋಟಿ ಕುಬೇರರು! ಕದನ ಕಣಗಳಲ್ಲಿ ಧನಿಕ ಅಭ್ಯರ್ಥಿಗಳದ್ದೇ ಪಾರುಪತ್ಯ
ಲೋಕಸಭೆ ಚುನಾವಣೆ ಅಖಾಡಗಳಲ್ಲಿ ಕೋಟಿ ಕುಬೇರರು!
ಕದನ ಕಣಗಳಲ್ಲಿ ಧನಿಕ ಅಭ್ಯರ್ಥಿಗಳದ್ದೇ ಪಾರುಪತ್ಯ

ಇವತ್ತು ಲೋಕ ಅಖಾಡದಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯದ್ದೇ ಭರಾಟೆ. ಈ ನಡುವೆ ಅಭ್ಯರ್ಥಿಗಳು ಆಸ್ತಿ ಘೋಷಣೆಯನ್ನೂ ಮಾಡಿಕೊಂಡಿದ್ದು, ಒಬ್ಬೊಬ್ಬರ ಆಸ್ತಿಯ ವಿವರಗಳು ಅಬ್ಬಬ್ಬಾ ಎನ್ನುವಂತಿದೆ. ಯಾಕೆಂದರೆ ಎಲ್ಲರೂ ಕೋಟಿಯ ಕುಬೇರರೇ. ಲೋಕಸಭೆಗೆ ಪ್ರತಿನಿಧಿಗಳ ಆಯ್ಕೆ ಮಾಡುವ ಜಿದ್ದಾಜಿದ್ದಿನ ಮಹಾಯುದ್ಧ. ಇಲ್ಲಿ ಗಣ್ಯರು, ಶ್ರೀಮಂತರದ್ದೇ ಅಬ್ಬರವಾಗಿದೆ. ಕದನ ಕಣಗಳಲ್ಲಿ ಧನಿಕ ಅಭ್ಯರ್ಥಿಗಳು ಪಾರಪತ್ಯ ಮೆರೆದಿದ್ದಾರೆ. 

ಹಲವು ಅಭ್ಯರ್ಥಿಗಳು ಈಗಾಗಲೇ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಮೈಸೂರು-ಕೊಡಗು ಅಭ್ಯರ್ಥಿ, ಮಹಾರಾಜ ಯದುವೀರ್ 5 ಕೋಟಿ ಆಸ್ತಿ ಒಡೆಯನಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾಲಿ ಸಂಸದ ಡಿ.ಕೆ.ಸುರೇಶ್ ಎಲ್ಲಾ ಪಕ್ಷಗಳ ಅಭ್ಯರ್ಥಿಗಳಿಗಿಂತ ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ. ಯಾವೆಲ್ಲಾ ಅಭ್ಯರ್ಥಿಗಳು ಎಷ್ಟೆಷ್ಟು ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ ಎಂಬ ಲಿಸ್ಟ್ ಇಲ್ಲಿದೆ.

ಇದೇ ಮೊದಲ ಬಾರಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕೊಡಗು-ಮೈಸೂರು ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಮಹಾರಾಜ ಯದುವೀರ್ 5 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.

ಯದುವೀರ್ ಆಸ್ತಿ ಮೌಲ್ಯ!

ಒಟ್ಟು ಆಸ್ತಿ 5 ಕೋಟಿ

ಚರಾಸ್ತಿ 4.99 ಕೋಟಿ

ಸ್ಥಿರಾಸ್ತಿ ಘೋಷಿಸಿಲ್ಲ

ಚಿನ್ನಾಭರಣದ ಮೌಲ್ಯ 3.25 ಕೋಟಿ

ಸಾಲ ಇಲ್ಲ

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ 19 ಕೋಟಿ ಮೌಲ್ಯದ ಆಸ್ತಿಯನ್ನ ಘೋಷಿಸಿಕೊಂಡಿದ್ದಾರೆ.

ಸೋಮಣ್ಣ ಆಸ್ತಿ ಮೌಲ್ಯ!

ಒಟ್ಟು ಆಸ್ತಿ 19 ಕೋಟಿ

ಚರಾಸ್ತಿ 5 ಕೋಟಿ

ಸ್ಥಿರಾಸ್ತಿ 14 ಕೋಟಿ

ಚಿನ್ನಾಭರಣದ ಮೌಲ್ಯ 1 ಕೋಟಿ

ಸಾಲ 6 ಕೋಟಿ

ಬೆಂಗಳೂರು ಕೇಂದ್ರ ಅಭ್ಯರ್ಥಿ, ಹಾಲಿ ಸಂಸದ ಪಿ ಸಿ ಮೋಹನ್ ಆಸ್ತಿ ವಿವರ ಸಲ್ಲಿಸಿದ್ದ 36 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.

ಪಿ ಸಿ ಮೋಹನ್ ಆಸ್ತಿ ಮೌಲ್ಯ!

ಒಟ್ಟು ಆಸ್ತಿ 36.44 ಕೋಟಿ

ಚರಾಸ್ತಿ 10.46 ಕೋಟಿ

ಸ್ಥಿರಾಸ್ತಿ 25.98 ಕೋಟಿ

ಚಿನ್ನಾಭರಣ 33 ಲಕ್ಷ

ಇರುವ ಸಾಲ 5.79 ಕೋಟಿ

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಸಲ್ಲಿಸಿದ ಆಸ್ತಿ ವಿವರದಲ್ಲಿ 191 ಕೋಟಿ ಆಸ್ತಿಯನ್ನ ಘೋಷಿಸಿಕೊಂಡಿದ್ದಾರೆ.

ರಕ್ಷಾ ರಾಮಯ್ಯ ಆಸ್ತಿ ಮೌಲ್ಯ!

ಒಟ್ಟು ಆಸ್ತಿ 191 ಕೋಟಿ

ಚರಾಸ್ತಿ 38 ಕೋಟಿ

ಸ್ಥಿರಾಸ್ತಿ 30 ಕೋಟಿ

ಚಿನ್ನಾಭರಣ 40 ಕೋಟಿ

ಇರುವ ಸಾಲ 85 ಕೋಟಿ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ 49 ಕೋಟಿ ಮೌಲ್ಯದ ಆಸ್ತಿಯನ್ನ ಘೋಷಿಸಿಕೊಂಡಿದ್ದಾರೆ.

ಡಾ.ಕೆ ಸುಧಾಕರ್ ಆಸ್ತಿ ಮೌಲ್ಯ!

ಒಟ್ಟು ಆಸ್ತಿ 49 ಕೋಟಿ

ಚರಾಸ್ತಿ 26 ಕೋಟಿ

ಸ್ಥಿರಾಸ್ತಿ 63 ಕೋಟಿ

ಚಿನ್ನಾಭರಣ 35 ಕೋಟಿ

ಇರುವ ಸಾಲ 19 ಕೋಟಿ

ಹಾಸನದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 41 ಕೋಟಿ ಮೌಲ್ಯದ ಆಸ್ತಿಯನ್ನ ಘೋಷಿಸಿಕೊಂಡಿದ್ದಾರೆ.

ಶ್ರೇಯಸ್ ಪಟೇಲ್ ಆಸ್ತಿ ಮೌಲ್ಯ!

ಒಟ್ಟು ಆಸ್ತಿ 41 ಕೋಟಿ

ಚರಾಸ್ತಿ 1 ಕೋಟಿ

ಸ್ಥಿರಾಸ್ತಿ 40 ಕೋಟಿ

ಚಿನ್ನಾಭರಣ 59 ಲಕ್ಷ

ಇರುವ ಸಾಲ 50 ಲಕ್ಷ

ಒಟ್ಟಾರೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳು ಗರಿಷ್ಠ 90 ಲಕ್ಷದವರೆಗೆ ಖರ್ಚು ಮಾಡಬಹುದು. ಆದ್ರೆ ಇಲ್ಲಿ ಅಭ್ಯರ್ಥಿಗಳು ಕೋಟಿ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು ಲೋಕಸಭೆ ಚುನಾವಣೆ ಯುದ್ಧ ಶ್ರೀಮಂತರ ಕದನವಾದಂತಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!