ಮದುವೆ ನಿರಾಕರಿಸಿದ್ದಕ್ಕೆ ಹಾಡಹಗಲೇ ಯುವತಿಯ ಭೀಕರ ಕೊಲೆ.!
ಪಾರ್ಕ್ ನಲ್ಲೇ ಯುವತಿಯ ಭೀಕರ ಕೊಲೆ - ಯುವಕನ ಬಂಧನ

ಮದುವೆಗೆ ನಿರಾಕರಿಸಿದ ಒಂದೇ ಕಾರಣಕ್ಕೆ ಹಾಡಹಗಲೇ ಪಾರ್ಕ್ ನಲ್ಲಿ ಕುಳಿತಿದ್ದ 25 ವರ್ಷದ ವಿದ್ಯಾರ್ಥಿನಿ ತಲೆಗೆ ರಾಡ್ ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ದಕ್ಷಿಣ ದೆಹಲಿಯ ಮಾಳವೀಯ ನಗರದ ಅರಬಿಂದೋ ಕಾಲೇಜು ಬಳಿಯ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ರಾಡ್‌ನಿಂದ ಹಲ್ಲೆ ನಡೆಸಿ ಕಾಲೇಜು ವಿದ್ಯಾರ್ಥಿನಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಮೃತ ವಿದ್ಯಾರ್ಥಿನಿ ಕಮಲಾ ನೆಹರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಸ್ನೇಹಿತನೊಂದಿಗೆ ಉದ್ಯಾನವನಕ್ಕೆ ತೆರಳಿದ್ದಳು. ವಿದ್ಯಾರ್ಥಿನಿ ಮೇಲೆ ರಾಡ್‌ನಿಂದ ಹಲ್ಲೆ ನಡೆಸಲಾಗಿದ್ದು, ತಲೆಗೆ ಬಲವಾದ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಚಂದನ್ ಚೌಧರಿ ತಿಳಿಸಿದ್ದಾರೆ. ಘಟನೆ ಸಂಬಂಧ 28 ವರ್ಷದ ಆರೋಪಿ ಇರ್ಫಾನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  

ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಇರ್ಫಾನ್ ಮೃತ ಯುವತಿಯೊಂದಿಗೆ ಮದುವೆಯಾಗಲು ಬಯಸಿದ್ದ. ಆದರೆ, ಯುವತಿ ಮನೆಯವರು ಮದುವೆಗೆ ನಿರಾಕರಿಸಿದ್ದರು, ಇದೇ ಕಾರಣಕ್ಕೆ ಆಕ್ರೋಶಗೊಂಡಿದ್ದ ಇರ್ಫಾನ್ ಆಕೆಯ ಮೇಲೆ ರಾಡ್ ನಿಂದ ಹಲ್ಲೆ ಮಾಡಿ ಕೊಂದು ಹಾಕಿದ್ದಾನೆ. 

ದಕ್ಷಿಣ ದೆಹಲಿಯ ಡಿಸಿಪಿ ಚಂದನ್‌ ಚೌಧರಿ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು "ಇಡೀ ಘಟನೆಯು ಮೂಲತಃ ಪ್ರೇಮ ಕೋನ ಮತ್ತು ಮದುವೆ ನಿರಾಕರಣೆಯ ಹಿನ್ನಲೆ ಹೊಂದಿದೆ. ಸಂತ್ರಸ್ತೆ (22 ವರ್ಷ) ಮತ್ತು ಆರೋಪಿ (28 ವರ್ಷ) ಸೋದರ ಸಂಬಂಧಿಗಳಾಗಿದ್ದು, ಮೃತ ಯುವತಿಯ ಕುಟುಂಬವು ಆರೋಪಿ ಇರ್ಫಾನ್ ನಿರುದ್ಯೋಗಿಯಾಗಿದ್ದರಿಂದ ಮದುವೆಗೆ ನಿರಾಕರಿಸಿತ್ತು. ತರುವಾಯ, ಹುಡುಗಿ ಅವನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ಇದರಿಂದ ಹುಡುಗ ಮಾನಸಿಕವಾಗಿ ತೊಂದರೆಗೀಡಾಗಿದ್ದನು. ಆದ್ದರಿಂದ ಅವನು ಇಂದು ಈ ಅಪರಾಧವನ್ನು ಮಾಡಿದ್ದಾನೆ. ಅವನು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!