ಮಂಗಳೂರು: ಬಾಲಕಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಇಕ್ಬಾಲ್ ಅರೆಸ್ಟ್‌.!
ಲೈಂಗಿಕ ಕೀಟಲೆ : ಅಶ್ಲೀಲ ವರ್ತನೆ : ಆಟೋ ಚಾಲಕ ಅಂದರ್‌

ಮಂಗಳೂರು: ಎಸ್ಸೆಸೆಲ್ಸಿಯ ವಿದ್ಯಾರ್ಥಿನಿಗೆ ಆಟೋ ರಿಕ್ಷಾ ಚಾಲಕ ಇಕ್ಬಾಲ್‌ ಎಂಬಾತ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಎಂಬಲ್ಲಿ ನಡೆದಿತ್ತು. 

ಅಂಬ್ಲಮೊಗರು ನಿವಾಸಿ ಇಕ್ಬಾಲ್ ವಿರುದ್ಧ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ, ಸದ್ಯ ಪೊಲೀಸರು ಆರೋಪಿ ಇಕ್ಬಾಲ್‌ನನ್ನು ಬಂಧಿಸಿದ್ದಾರೆ.  

"ಒಂಬತ್ತನೇ ತರಗತಿ ಪಾಸಾಗಿದ್ದಕ್ಕೆ ಟ್ರೇಟ್ ಏನೂ ಇಲ್ವಾ..? ಚಾಕಲೇಟ್ ಇಲ್ಲದಿದ್ದರೆ ಬೇರೇನಾದರೂ ಕೊಡು" ಎಂದು ಪೀಡಿಸಿ ಎಸ್ಸೆಸೆಲ್ಸಿ ವಿದ್ಯಾರ್ಥಿನಿಗೆ ಲೈಂಗಿಕ ಕೀಟಲೆ ಕೊಡುತ್ತಿದ್ದ ಆಟೋ ರಿಕ್ಷಾ ಚಾಲಕ ಇಕ್ಬಾಲ್‌. ಇತ್ತೀಚೆಗೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿ ಶಾಲೆಗೆ ತೆರಳಲು ನಿಂತಿದ್ದ ಸಂದರ್ಭದಲ್ಲಿ "ಆಟೋದಲ್ಲಿ ಫ್ರೀಯಾಗಿ ಕರ್ಕೊಂಡು ಹೋಗ್ತಿನಿ" ಎಂದು ಪೀಡಿಸಿ ಬಾಲಕಿಯ ಕೈ ಮತ್ತು ಎದೆ ಭಾಗವನ್ನ ಸ್ಪರ್ಶಿಸಿ ಅಶ್ಲೀಲವಾಗಿ ವರ್ತಿಸಿದ್ಧಾನೆ.  ಈ ಬಗ್ಗೆ ಅಪ್ರಾಪ್ತೆ ಹೆತ್ತವರಲ್ಲಿ ಇತ್ತೀಚೆಗೆ ತಿಳಿಸಿದ್ದಳು. ಕೂಡಲೇ ಹೆತ್ತವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದ.  ಸದ್ಯ ಪೊಲೀಸರು ಆರೋಪಿಯನ್ನು ಆತನ ಸಂಬಂಧಿಕರ ಮನೆಯಲ್ಲಿ ಬಂಧಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!