ಪಡುಬಿದ್ರಿ: ದೇವಸ್ಥಾನದ ಹೆಸರಲ್ಲಿ ಮರಳುಗಾರಿಕೆ - ಸ್ಥಳೀಯರಿಂದ ತಡೆ.!
ಅಕ್ರಮ ಮರಳುಗಾರಿಕೆ - ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ

ಪಡುಬಿದ್ರಿ: ಕಾನೂನು ಚಾಪೆಯಡಿಯಿಂದ ನುಸುಳಿದರೆ ಅಕ್ರಮಿಗಳು ರಂಗೋಳಿ ಯಡಿಯಿಂದ ನುಸುಳಿದ ಘಟನೆಯೊಂದು ಕಾಪು ಸಮೀಪದ ಇನ್ನಂಜೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.

ಅಕ್ರಮ ಮರಳುಗಾರಿಕೆಗೆ ಸಂಪೂರ್ಣ ಬ್ರೇಕ್ ಬಿದ್ದಿದ್ದರೂ ಗ್ರಾ.ಪಂ. ಸಹಕಾರದಿಂದಲೋ ಎಂಬಂತೆ  ದೇವಸ್ಥಾನಕ್ಕೆ ಮರಳು ಎಂಬುದಾಗಿ ದೇವರ ಹೆಸರಲ್ಲಿ ಇನ್ನಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡುಂಬು ಹೊಳೆಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದ ವಾಹನವನ್ನು ತಡೆದು ಗ್ರಾ.ಪಂ.ಗೆ ಕರೆ ಮಾಡಿದಾಗ ಸ್ಥಳಕ್ಕೆ ಬಂದ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಅಕ್ರಮ ಮರಳುಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳ ಬೇಕಾಗಿದ್ದರೂ ಮರಳು ಮರಳಿ ಡಂಫ್ ಮಾಡಿಸಿ ವಾಹನವನ್ನು ಬಿಟ್ಟು ಕಳುಹಿಸಿಸುವ ಮೂಲಕ ಅಕ್ರಮಕ್ಕೆ ಸಾತ್ ನೀಡಿದಂತ್ತಾಗಿದೆ.

ಈ ಬಗ್ಗೆ ಮಾತನಾಡಿದ ಪಿಡಿಓ ಟ್ರೀಪ್ ಶಿಟ್ ಮುಂದಿನ ಹದಿನೈದು ತಾರೀಕಿನ ವರಗೆ ಲಭ್ಯವಿಲ್ಲ, ಈ ಬಗ್ಗೆ ಮರಳು ಸಾಗಾಟಗಾರರ ಗಮನಕ್ಕೂ ತರಲಾಗಿದೆ, ಆದರೆ ಅವರು ಮರಳು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಬಗ್ಗೆ ಆ ಭಾಗದ ಗ್ರಾಮಸ್ಥರು ತಿಳಿಸಿದಂತೆ ಕಾರ್ಯಚರಣೆ ನಡೆಸಲಾಗಿದೆ. ದೇವಸ್ಥಾನಕ್ಕೆ ಎಂದ ಕಾರಣ ಅಧ್ಯಕ್ಷರು ತಿಳಿಸಿದಂತೆ ವಾಹನವನ್ನು ಬಿಡಲಾಗಿದೆ ಎನ್ನುವ ಮೂಲಕ...ಮಂದಿರ, ಚರ್ಚ್, ಮಸೀದಿಗಳಿಗೆ ಈ ಮರಳು ನೀತಿ ಅನ್ವಯವಾಗದು ಎಂಬ ಹೊಸ ಕಾನೂನ್ನನ್ನು ಇನ್ನಂಜೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬರೆದಂತ್ತಾಗಿದೆ ಎಂಬ ಮಾತು ಗ್ರಾಮಸ್ಥರದ್ದಾಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!