ಬಂಟ್ವಾಳ: ಸ್ನೇಹಿತನ ಹೆಂಡತಿ ಮೇಲೆ ಅತ್ಯಾಚಾರ..! ಮದುವೆ ಭರವಸೆ ನೀಡಿ ಕೃತ್ಯ - ಹಲ್ಲೆಗೈದು ಜೀವ ಬೆದರಿಕೆ
ಸ್ನೇಹಿತನ ಹೆಂಡತಿ ಮೇಲೆ ಅತ್ಯಾಚಾರ..!
ಮೂರು ಮಕ್ಕಳ ತಾಯಿಯೊಂದಿಗೆ ಸಲುಗೆ ಬೆಳೆಸಿ ದೈಹಿಕ ಸಂಪರ್ಕ..!
ಮದುವೆ ಭರವಸೆ ನೀಡಿ ಕೃತ್ಯ - ಹಲ್ಲೆಗೈದು ಜೀವ ಬೆದರಿಕೆ

ಬಂಟ್ವಾಳ: ವಿವಾಹಿತ ಮೂರು ಮಕ್ಕಳ ತಾಯಿಯನ್ನು ಮದುವೆಯಾಗುವುದಾಗಿ ನಂಬಿಸಿ, ಆ ಬಳಿಕ ನಿರಂತರವಾಗಿ ದೈಹಿಕ ಸಂಪರ್ಕ ಮಾಡಿ ಕೊನೆಗೆ ಕೊಲೆ ಬೆದರಿಕೆ ಹಾಕಿದ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಲೊರೆಟ್ಟೊ ನಿವಾಸಿಯೋರ್ವರ ಪತ್ನಿಗೆ ನರಿಕೊಂಬು ನಿವಾಸಿ ತಸ್ಲೀಂ ಆರೀಫ್ ಅತ್ಯಾಚಾರ ಎಸಗುವುದರ ಜೊತೆಗೆ ಕೊಲೆ ಬೆದರಿಕೆ ಹಾಕಿರುತ್ತಾನೆ.

ಗಂಡನ ಸ್ನೇಹಿತನಿಂದಲೇ ಕೃತ್ಯ

ಆರೋಪಿ ತಸ್ಲೀಂ ಆರೀಫ ದೂರುದಾರ ಮಹಿಳೆಯ ಪತಿ ಅಬ್ದುಲ್ ಅಜೀಜ್ ಅವರ ಸ್ನೇಹಿತ ಆಗಿದ್ದಾನೆ. ಆಗಾಗ ಪತಿಯೊಂದಿಗೆ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಬಳಿಕ ಆರೋಪಿ ಹಾಗೂ ಮಹಿಳೆ ನಡುವೆ ಸಲುಗೆ ಉಂಟಾಗಿ ಮೊಬೈಲ್ ನಂಬರ್ ಪಡೆದು, ಗಂಡ ಕೆಲಸಕ್ಕೆ ಹೋದ ಸಮಯ ಮನೆಗೆ ಬರುತ್ತಿದ್ದ. ಸಲುಗೆ ಬೆಳೆದು ದೈಹಿಕ ಸಂಪರ್ಕಕ್ಕೆ ಬಂದಾಗ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ, ಸುಳ್ಳು ಹೇಳಿಕೊಂಡು ಹಲವಾರು ಬಾರಿ ದೈಹಿಕ ಸಂಪರ್ಕ ನಡೆಸಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.

ಸ್ನೇಹಿತ ಹಾಗೂ ಹೆಂಡತಿಯ ವಿಷಯ ತಿಳಿದ ಪತಿ ಅವಳಿಂದ ದೂರವಾಗಿದ್ದ. ಬಳಿಕ ಆರೋಪಿಯೊಂದಿಗೆ ಮಹಿಳೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಇದೀಗ ಆರೋಪಿ ತಸ್ಲೀಂ ಕುಲ್ಲಕ ಕಾರಣಕ್ಕೆ ಮಹಿಳೆಗೆ ಮುಖ, ಬಾಯಿಗೆ ಹೊಡೆದು, ಸೊಂಟಕ್ಕೆ ಒದ್ದಿರುವುದಲ್ಲದೆ, ತಲೆ ಕೂದಲನ್ನು ಎಳೆದು ಅವ್ಯಾಚ ಶಬ್ದಗಳಿಂದ ಬೈದಿದ್ದಾನೆ. ಜೊತೆಗೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿದ್ದಾನೆ ಎಂದು ಮಹಿಳೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!