ಹಣಕ್ಕಾಗಿ ರಾಕ್ಷಸಿ ಕೃತ್ಯ: ಇಸ್ತ್ರಿ ಪೆಟ್ಟಿಗೆಯಿಂದ ಮಗಳ ಮೈ ಸುಟ್ಟ ದೊಡ್ಡಮ್ಮ.!!
ಬ್ಯಾಂಕ್​ನಲ್ಲಿದ್ದ ಹಣಕ್ಕಾಗಿ ರಾಕ್ಷಸಿ ಕೃತ್ಯ
ಇಸ್ತ್ರಿ ಪೆಟ್ಟಿಗೆಯಿಂದ ಮಗಳ ತೊಡೆ ಸುಟ್ಟ ದೊಡ್ಡಮ್ಮ

ಬ್ಯಾಂಕ್​ನಲ್ಲಿ ಬಾಲಕಿಯ ಹೆಸರಿನಲ್ಲಿದ್ದ ಹಣಕ್ಕಾಗಿ ದೊಡ್ಡಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟ ಘಟನೆ ಶಿರಾ ತಾಲೂಕಿನ ನಿಡಘಟ್ಟೆ ಗ್ರಾಮದಲ್ಲಿ ನಡೆದಿದೆ. ಮಧುಗಿರಿ ತಾಲೂಕಿನ ಪೂಜಾರಹಳ್ಳಿ ಗ್ರಾಮದ ನಿವಾಸಿಯಾಗಿರುವ ಬಾಲಕಿ ಲಕ್ಷ್ಮೀಗೆ ದೊಡ್ಡಮ್ಮ ನರಸಮ್ಮ ಕಿರುಕುಳ ನೀಡಿದ್ದಾರೆ. ಲಕ್ಷ್ಮೀ ತಾಯಿ ನರಸಮ್ಮ ಕಳೆದ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಮೃತ ತಾಯಿ ನರಸಮ್ಮ ಹಾಗೂ ಬಾಲಕಿ ಲಕ್ಷ್ಮೀ ಹೆಸರಿನಲ್ಲಿ ಜಂಟಿ ಖಾತೆ ಇತ್ತು. 

ಮೃತ ತಾಯಿ ತನ್ನ ಮಗಳಿಗಾಗಿ ನಾಲ್ಕು ಲಕ್ಷ ಫಿಕ್ಸ್ ಡೆಪಾಸಿಟ್ ಮಾಡಿದ್ದರು. ಇದು ನರಸಮ್ಮ ಅವರ ಕಣ್ಣು ಕುಕ್ಕುವಂತೆ ಮಾಡಿತು.  ಹೀಗಾಗಿ ನರಸಮ್ಮ ಶಿವರಾತ್ರಿ ಹಬ್ಬಕ್ಕೆಂದು (ಮಾ.09) ಲಕ್ಷ್ಮೀಯನ್ನು ತಮ್ಮ ಊರಿಗೆ ಕರೆಸಿದ್ದಾಳೆ. ಬಳಿಕ ನರಸಮ್ಮ ಚೆಕ್​ಗೆ ಸಹಿ‌ ಮಾಡು ಅಂತ ಬಾಲಕಿ ಲಕ್ಷ್ಮೀಗೆ ಕಿರುಕುಳ ನೀಡಿದ್ದಾಳೆ. ಆದರೂ ಬಾಲಕಿ ಲಕ್ಷ್ಮೀ ಒಪ್ಪದಿದ್ದಾಗ ನರಸಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಬಾಲಕಿ ಲಕ್ಷ್ಮೀ ತೊಡೆಗೆ ಸುಟ್ಟಿದ್ದಾಳೆ. ನಂಜಮ್ಮ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟಿದ್ದಾಳೆ. 

ಈ ವೇಳೆ ಬಾಲಕಿ ಲಕ್ಷ್ಮೀ ಕಿರುಚದಂತೆ ನಂಜಮ್ಮ ಮಗ ಬಸವರಾಜ್​ ಆಕೆಯ ಬಾಯಿ ಮುಚ್ಚಿದ್ದಾನೆ. ಇನ್ನು ಬಾಲಕಿ ಲಕ್ಷ್ಮೀ ಐದನೇ ತರಗತಿ ಓದುತ್ತಿದ್ದಾಳೆ. ಆಕೆಯ ಪರೀಕ್ಷೆ ನಡೆಯುತ್ತಿದ್ದು, ಸೋಮವಾರ ಪರೀಕ್ಷೆಗೆ ಹಾಜರಾಗಿರಲಿಲ್ಲ. ಹೀಗಾಗಿ ಶಿಕ್ಷಕರು ಮತ್ತು ಸಂಬಂಧಿಕರು ಬಾಲಕಿಯನ್ನು ಊರಿಗೆ ಕರೆಸಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪೂಜಾರಹಳ್ಳಿಯಲ್ಲಿರುವ ಅಜ್ಜಿ ಊರಲ್ಲಿ ವಾಸವಿದ್ದ ಬಾಲಕಿ ಲಕ್ಷ್ಮಿಯನ್ನ ಊರಿಗೆ ಕರೆದುಕೊಂಡು ಬರುವಂತೆ ಪೋಷಕರಿಗೆ ತಿಳಿಸಿದ್ದ ಶಾಲಾ ಶಿಕ್ಷಕರು. ಈ ಹಿನ್ನೆಲೆಯಲ್ಲಿ ಬಾಲಕಿಯನ್ನ ಕರೆತರಲು ಹೋಗಿದ್ದ ಲಕ್ಷ್ಮೀ ಅಜ್ಜಿ ಹೋಗಿದ್ದರು. ಈ ವೇಳೆ ಬಾಲಕಿಗೆ ಟೀ ಚೆಲ್ಲಿದೆ ಎಂದು ಸುಳ್ಳು ಹೇಳಿ ಲಕ್ಷ್ಮೀ ದೊಡ್ಡಮ್ಮ ನಂಜಮ್ಮ ಬೆದರಿಕೆ ಹಾಕಿದ್ದಳು. ಬಾಲಕಿಯನ್ನ ಪೂಜಾರಹಳ್ಳಿಗೆ ಕರೆತಂದು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಬಾಲಕಿ ಲಕ್ಷ್ಮೀಗೆ ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!