ಜೋಕಟ್ಟೆ ಗ್ರಾಮ ಪಂಚಾಯತ್ ನಿರ್ಲಕ್ಷ್ಯ.!
ರಸ್ತೆಬದಿಯಲ್ಲಿ ಕಸದರಾಶಿ - ದುರ್ವಾಸನೆ

ಸುರತ್ಕಲ್:‌  ಜೋಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಖಾನದಿಂದ ಜೋಕಟ್ಟೆ ಸಂಪರ್ಕಿಸುವ ಮಾರ್ಗ ಕೋಡಿಕೆರೆ, ತೋಕೂರು ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಕಸದ ರಾಶಿ ಬಿದ್ದುಕೊಂಡಿದೆ. ಕಳೆದ ಹಲವು ಸಮಯಗಳಿಂದ ಈ ಸಮಸ್ಯೆ ಇದ್ದು, ಗ್ರಾಮ ಪಂಚಾಯತ್ ಈ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಬಗ್ಗೆ ಗಮನಕ್ಕೆ ತಂದರು ಯಾವುದೇ ಸ್ಪಂದನೆ ಇಲ್ಲ, ಕಸ ವಿಲೇವಾರಿ ಮಾಡಲು ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ರಸ್ತೆ ಬದಿಯಲ್ಲಿ ಕಸದ ರಾಶಿ ಬಿದ್ದು, ಕೊಳೆತು ನಾರುತ್ತಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಈ ಭಾಗದಲ್ಲಿ ಓಡಾಡುವುದೇ ಕಷ್ಟಕರವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  

ರಸ್ತೆ ಬದಿಯಲ್ಲಿ ಕಸ ಎಸೆಯಬಾರದು ಎಂದು ರಾಧಾಕೃಷ್ಣ ಭಜನಾ ಮಂದಿರ ವತಿಯಿಂದ ಬ್ಯಾನರ್ ಅಳವಡಿಸಿದರು ಈ ಭಾಗದಲ್ಲಿ ಓಡಾಡುವ ಜನರು ಕಸ ಎಸೆಯುತ್ತಾರೆ. ಒಟ್ಟಾರೆ ಪ್ರಕೃತಿ ನಾಶ ಮಾಡಬಾರದು ಎಂದು ಎಷ್ಟೇ ಹೇಳಿದರು ಜನರಿಗೂ ಅರ್ಥವಾಗಲ್ಲ. ಆದರೆ ಜೋಕಟ್ಟೆ ಪಂಚಾಯತ್ ನಿರ್ಲಕ್ಷ್ಯ ಮಾತ್ರ ಎದ್ದು ಕಾಣುತ್ತಿದೆ. ಜನರು ಕಸ ತಂದು ಹಾಕುತ್ತಿರುವುದು ಸಮಸ್ಯೆಯ ಮೂಲಕ್ಕೆ ಕಾರಣವಾಗಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕಸ ವಿಲೇವಾರಿಗೆ ಕ್ರಮ ಜರುಗಿಸಬೇಕು. ರಸ್ತೆಯುದ್ದಕ್ಕೂ ಕಸದ ರಾಶಿ. ರಸ್ತೆ ಬದಿಯಲ್ಲಿ ಸ್ವಲ್ಪ ಖಾಲಿ ಪ್ರದೇಶ ಇದ್ದರೆ ಸಾಕು ಸಾರ್ವಜನಿಕರು ಪ್ಲಾಸ್ಟಿಕ್‌ ಕವರ್‌, ಕಸವನ್ನು ಸುರಿಯುತ್ತಿದ್ದಾರೆ. ತ್ಯಾಜ್ಯ ರಾಶಿ ದುರ್ವಾಸನೆ ಬೀರುತ್ತಿದ್ದರೂ ಗ್ರಾಪಂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ.

ಹೋಟೆಲ್, ಅಂಗಡಿ, ಮಾರುಕಟ್ಟೆ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ಕಸ ಎಸೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಗ್ರಾಪಂ ಅಧಿಕಾರಿಗಳು ಅಂಥವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾಗಿದೆ. ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಇನ್ನಷ್ಟು ಗಮನ ಹರಿಸಬೇಕಾಗಿದೆ. ಗ್ರಾಪಂ ಎಚ್ಚೆತ್ತು ಗಮನಹರಿಸಿ ಮುಂದೆ ಇಂತಹ ತ್ಯಾಜ್ಯ ಬೀಳದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. 

ಬಿದ್ದಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು ಆ ಮೂಲಕ ಸ್ವಚ್ಛತೆ, ಸೌಂದರ್ಯ ಕಾಪಾಡುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ಜನತೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ಸ್ವಚ್ಛ, ಸುಂದರ ಹಾಗೂ ಉತ್ತಮ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ನಾಗರಿಕರು ಕೈ ಜೋಡಿಸಬೇಕು. ತಕ್ಷಣ ಜೋಕಟ್ಟೆ ಪಂಚಾಯತ್ ಎಚ್ಚೆತ್ತು ರಸ್ತೆ ಬದಿಯಲ್ಲಿ ಬಿದ್ದಿರುವ ಕಸ ಇಲೇವಾರಿ ಮಾಡುವ ಮೂಲಕ ಸ್ವಚ್ಛತೆ ಕಾಪಾಡುವಲ್ಲಿ ಜಾಗೃತಿ ವಹಿಸಬೇಕು ಎನ್ನುವುದು ನಮ್ಮ ಆಶಯ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!