ಕಾರ್ಕಳ: ಸೌಜನ್ಯ ಪರ ಹೋರಾಟ ಸಮಿತಿಯಿಂದ ಬೃಹತ್ ಜನಾಂದೋಲನ ಸಭೆ
ಸೆ.24ರಂದು ಬೃಹತ್ ಜನಾಂದೋಲನ ಸಭೆ - ಪತ್ರಿಕಾ ಪ್ರಕಟಣೆ

ಕಾರ್ಕಳ: ಸೌಜನ್ಯ ಪರ ಹೋರಾಟ ಸಮಿತಿ ಇವರ ಸಹಯೋಗದಲ್ಲಿ ಕಾರ್ಕಳದಲ್ಲಿ ಶಾಂತಿಯುತ ಬೃಹತ್ ಜನಾಂದೋಲನ ಸಭೆ 24-09-2023 ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿ0ದ ನಡೆಯಲಿದ್ದು, ಇಂದು ಸೌಜನ್ಯ ಪರ ಹೋರಾಟ ಸಮಿತಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಸೌಜನ್ಯಳ ಪ್ರಕರಣವನ್ನು ಮರು ತನಿಖೆಗೆ ಆದೇಶಿಸಬೇಕು ಮತ್ತು ನಿರ್ದೋಷಿ ಸಂತೋಷ್ ರಾವ್ ಇವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಆರೋಪಿಗಳಿಗೆ ದಿಲ್ಲಿಯ ನಿರ್ಭಯಾ ಪ್ರಕರಣದಂತೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಬೇಕು. ಸಂವಿಧಾನ ಬದ್ಧವಾಗಿ ನಡೆಯುವ ಈ ಪ್ರತಿಭಟನೆಗೆ ಯಾರಾದರೂ ಅಡ್ಡಿಪಡಿಸಿದರೆ ಮುಂದಿನ ದಿನಗಳಲ್ಲಿ ಕಾರ್ಕಳದ ಪ್ರತಿ ಗ್ರಾಮ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎನ್ನುವುದು ಸೌಜನ್ಯ ಪರ ಹೋರಾಟ ಸಮಿತಿಯ ಬೇಡಿಕೆಯಾಗಿದೆ. 

ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಹೇಗೆ ಶಿಕ್ಷೆ ಆಗಿತ್ತೋ, ಅದೇ ರೀತಿ ಸೌಜನ್ಯಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದವರಿಗೂ ಶಿಕ್ಷೆ ಆಗಬೇಕು. ಅದಕ್ಕಾಗಿ ಸೌಜನ್ಯಳ ಪ್ರಕರಣದ ಮರು ತನಿಖೆ ಆಗಲೇಬೇಕು ಮತ್ತು ಷಡ್ಯಂತ್ರಕ್ಕೆ ಬಲಿಪಶು ಆಗಿ 11 ವರುಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ನಿರ್ದೋಷಿ ಸಂತೋಷ್ ರಾವ್ ಇವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ನ್ಯಾಯ ದೇವರು ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ಅಣ್ಣಪ್ಪ ಸ್ವಾಮಿಯವರನ್ನು ಮುಂದಿಟ್ಟುಕೊAಡು ನ್ಯಾಯ ಸಂಗ್ರಾಮದ ಆಧುನಿಕ ಭಗೀರಥ ಮಹೇಶ್ ಶೆಟ್ಟಿ ತಿಮರೋಡಿ ಇವರ ನೇತೃತ್ವದಲ್ಲಿ ಬೃಹತ್ ಜನಾಂದೋಲನ ಸಭೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ದಿನಾಂಕ 24ಸೆಪ್ಟೆಂಬರ್ 2023 ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ನಡೆಯಲಿದೆ ಎಂದು ಸೌಜನ್ಯ ಪರ ಹೋರಾಟ ಸಮಿತಿ ಕಾರ್ಕಳ ತಿಳಿಸಿದೆ. 

ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ಅಣ್ಣಪ್ಪ ಸ್ವಾಮಿಯ ಪವಿತ್ರ ಕ್ಷೇತ್ರ ಇರುವ ಹಾಗೂ ಹಿಂದೂಗಳು ಅತ್ಯಂತ ಶೃದ್ಧಾ ಭಕ್ತಿಯಿಂದ ಭೇಟಿ ಕೊಡುವ, ಅತ್ಯಂತ ಸುಭದ್ರ ರಕ್ಷಣಾ ವ್ಯವಸ್ಥೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಎಂಬ ಗ್ರಾಮದಲ್ಲಿ ಇರುವ ನೇತ್ರಾವತಿ ಸ್ನಾನಘಟ್ಟದ ಸಮೀಪ ತನು ಮನದಲ್ಲಿ ಕಾಮದ ನಂಜನ್ನೇ ತುಂಬಿಕೊAಡಿರುವ ಕೆಲವು ಕಾಮುಕ ದುರುಳರು ಸೌಜನ್ಯ ಎಂಬ ಮುಗ್ಧೆ ಅಪ್ರಾಪ್ತ ವಯಸ್ಸಿನ ಬಾಲೆಯನ್ನು ಮಟಮಟ ಮಧ್ಯಾಹ್ನವೇ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿ, ಆಕೆಯ ಗುಪ್ತಾಂಗಕ್ಕೆ ಮಣ್ಣು ತುಂಬಿಸಿ, ಆಕೆಯ ದೇಹದೊಡನೆ ಮೃಗಳಿಗಿಂತಲೂ ಕೀಳಾಗಿ ವರ್ತಿಸಿ ವಿಕೃತವಾಗಿ ಕೊಂದು ಹಾಕಿ ಇಂದಿಗೆ ಹನ್ನೊಂದು ವರುಷ ಕಳೆದಿವೆ.

ಆ ಅತ್ಯಾಚಾರ ಮಾಡಿ ಕೊಲೆಗೈದ ಕಾಮಪಿಶಾಚಿಗಳನ್ನು  ರಕ್ಷಿಸುವ ಏಕೈಕ ಉದ್ದೇಶದಿಂದ, ಆ ಅತ್ಯಾಚಾರವನ್ನು  ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರನ ಭಕ್ತ, ಕಾರ್ಕಳದ ಅಮಾಯಕ ಯುವಕ ಸಂತೋಷ್ ರಾವ್ ಎಂಬ ನಿರ್ದೋಷಿಯನ್ನು ಪ್ರಭಾವಿಗಳು ಬಲಾಡ್ಯರೂ ಆಗಿರುವ ಅತ್ಯಾಚಾರಿಗಳ ರಕ್ಷಕರು ಸಿಲುಕಿಸಿರುವ ವಿಷಯ ಜನಜನಿತ. ಇಡೀ ದೇಶ ಮತ್ತು ಸನಾತನ ಹಿಂದೂ ಧರ್ಮೀಯರು ತಲೆತಗ್ಗಿಸುವಂತೆ ನಡೆದ ಈ ಅತ್ಯಾಚಾರ ಕೊಲೆ ಪ್ರಕರಣವನ್ನು ಅಂದಿನ ತನಿಖಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಯಾರದ್ದೋ ಒತ್ತಡಕ್ಕೆ ಒಳಗಾಗಿ ವ್ಯವಸ್ಥಿತವಾಗಿ ಹಳ್ಳ ಹಿಡಿಸಿರುವ ವಿಷಯ ಈಗಾಗಲೇ ಸರ್ವವೇದ್ಯವಾಗಿದೆ. ಅತ್ಯಾಚಾರ ಮತ್ತು ಕೊಲೆ ಘಟನೆಯ ಎಲ್ಲಾ ಪ್ರತ್ಯಕ್ಷದರ್ಶಿ ಸಾಕ್ಷಿಗಳ ಅಸಹಜ ಸಾವು ಸುಸಂಸ್ಕೃತ ಕರುನಾಡಿನ ನ್ಯಾಯಪರ ನಾಗರೀಕರನ್ನು ಒಂದು ಸಲ ಚಿದಂಬರ ರಹಸ್ಯದೆಡೆಗೆ ಕೊಂಡೊಯ್ದಿರುವುದು ಮಾತ್ರ ಸುಳ್ಳಲ್ಲ.

ಭಾರತದ ಸಂವಿಧಾನ ಬದ್ಧವಾಗಿ ನಡೆಯುವ ಕಾನೂನು ರೀತ್ಯಾ ಪ್ರತಿಭಟನೆಗಳನ್ನು ಹಲವಾರು ಷಡ್ಯಂತ್ರ ರಚಿಸಿ, ವಾಮ ಮಾರ್ಗದಲ್ಲಿ ನಾನಾ ರೀತಿಯಲ್ಲಿ ನಿಲ್ಲಿಸಲು ಒಂದು ವರ್ಗ ಹತ್ತಾರು ಕೋಟಿ ವ್ಯಯಿಸುವುದನ್ನು ನೋಡುವಾಗ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮತ್ತು ಶ್ರೀ ಅಣ್ಣಪ್ಪ ಸ್ವಾಮಿಯ ಭಕ್ತರಿಗೆ ಹಲವಾರು ಅನುಮಾನಗಳು ಮೂಡುತ್ತಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ಒಂದು ಸ್ಪಷ್ಟ ಉತ್ತರವೇ ಸೌಜನ್ಯಳ ಪ್ರಕರಣದ ಮರು ತನಿಖೆ ಮತ್ತು ಆ ಮೂಲಕ ನೈಜ ಆರೋಪಿಗಳ ಪತ್ತೆ ಎಂದು ಎಲ್ಲರೂ ಭಾವಿಸಿದ್ದಾರೆ. ಇದಕ್ಕೆಲ್ಲಾ ಪುಷ್ಠಿ ಕೊಡುವಂತೆ ಮಾನ್ಯ ಘನ ಸಿಬಿಐ ನ್ಯಾಯಾಲಯವು ಸಂತೋಷ್ ರಾವ್ ಈ ಅತ್ಯಾಚಾರ ಪ್ರಕರಣದಲ್ಲಿ ನಿರ್ದೋಷಿ ಮಾತ್ರ ಅಲ್ಲದೆ, ಅವನಿಗೂ ಈ ಕೇಸಿಗೂ ಸಂಬ0ಧ ಇಲ್ಲ ಎಂದು ತೀರ್ಪು ನೀಡಿದೆ. ಕಳೆದ ಹನ್ನೊಂದು ವರ್ಷಗಳಿಂದ ಸೌಜನ್ಯಳ ಕುಟುಂಬ ಮತ್ತು ಕಳೆದ ಹನ್ನೊಂದು ವರ್ಷಗಳಿಂದ ಈ ಪ್ರಕರಣವನ್ನು ಜೀವಂತವಾಗಿ ಇಟ್ಟು ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಲು ಏಕಾಂಗಿಯಾಗಿ ಹೋರಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಯವರು ಹೇಳುತ್ತಲೇ ಬಂದಿರುವ " ಸಂತೋಷ್ ರಾವ್ ನಿರ್ದೋಷಿ, ಅಸಲಿ ಆರೋಪಿಗಳು ರಾಜಾರೋಷವಾಗಿ ನಿರ್ಭೀತಿಯಿಂದ ತಿರುಗಾಡುತ್ತಿದ್ದಾರೆ" ಎಂಬ ಮಾತಿಗೆ ಸಿಬಿಐ ನ್ಯಾಯಾಲಯದ ತೀರ್ಪು ಆನೆ ಬಲ ನೀಡಿದೆ ಮತ್ತು ಅಂದಿನಿAದ ಇಂದಿನವರೆಗಿನ ಎಲ್ಲಾ ಘಟನೆ, ವಾದ ಪ್ರತಿವಾದ, ಆರೋಪ ಪ್ರತ್ಯಾರೋಪ, ತಂತ್ರ ಷಡ್ಯಂತ್ರಗಳನ್ನು ಅವಲೋಕಿಸಿದಾಗ ಸೌಜನ್ಯ ಎಂಬ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿಯ ಮುಗ್ಧ ಭಕ್ತೆಯ ಅಪಹರಣ, ಅತ್ಯಾಚಾರ ಮತ್ತು ಕೊಲೆಯ ಆರೋಪಿಗಳನ್ನು ಪ್ರಭಾವಿಗಳು ರಕ್ಷಿಸಿ, ಅಮಾಯಕ ಸಂತೋಷ್ ರಾವ್ ಅವರನ್ನು ಬಲಿಪಶು ಮಾಡಿದ್ದಲ್ಲದೆ, ಆ ಎರಡು ಕುಟುಂಬಗಳಿಗೂ ಘೋರ ಅನ್ಯಾಯ ಮಾಡಲಾಗಿದೆ ಎಂಬುದು ನೂರಕ್ಕೆ ನೂರರಷ್ಟು ಸಾಬೀತಾಗಿದೆ.

ಸಂತೋಷ್ ರಾವ್ ನಿರ್ದೋಷಿ ಎಂದಾದರೆ, ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರ ಇರುವ ಊರು ಧರ್ಮಸ್ಥಳದ ಬಾಲೆ, ಮುಗ್ಧೆ ಅಬಲೆ ಅಪ್ರಾಪ್ತೆ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆಗೈದ ನೈಜ ಆರೋಪಿಗಳ ಬಂಧನ ಯಾವಾಗ ಎಂದು ಕಾರ್ಕಳದ ಸಹಸ್ರ ಸಹಸ್ರ ಸಂಖ್ಯೆಯ ನ್ಯಾಯ ಪರ ನಾಗರೀಕರ ಪ್ರಶ್ನೆಯಾಗಿದೆ.  ಸಾವಿರಾರು ನ್ಯಾಯ ಪರ ಹೋರಾಟಗಾರರು ಜಾತಿ ಮತ ಪಂಥ ಧರ್ಮ ಪಕ್ಷ ಬೇಧವಿಲ್ಲದೆ ಒಂದಾಗಿ ಬಂದು ಕು.ಸೌಜನ್ಯಳ ಪ್ರಕರಣವನ್ನು ಮಾನ್ಯ ಘನ ಸರ್ಕಾರವು ಮರು ತನಿಖೆಗೆ ಆದೇಶಿಸಬೇಕು, ನೈಜ ಆರೋಪಿಗಳಿಗೆ ಕಠಿಣ ಕಾನೂನು ಶಿಕ್ಷೆ ಆಗಬೇಕು ಮತ್ತು ನಿರ್ದೋಷಿ ಸಂತೋಷ್ ರಾವ್ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಇದೇ ಬರುವ 24 ಸೆಪ್ಟೆಂಬರ್ ಆದಿತ್ಯವಾರದಂದು ಕುಕ್ಕುಂದೂರು ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆಯಲಿರುವ "ಬೃಹತ್ ಜನಾಂದೋಲನ ಸಭೆ"ಯಲ್ಲಿ ಆಗ್ರಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಜನಾಂದೋಲನ ಸಭೆ ಯಾವುದೇ ಜಾತಿ ಮತ ಪಂಥ ಧರ್ಮ ಪಕ್ಷ ವ್ಯಕ್ತಿಯ ವಿರುದ್ಧ ಅಲ್ಲ, ಈ ಸಭೆ ವಿಶ್ವ ಗುರು ಭಾರತದ ಸನಾತನ ಹಿಂದೂ ಧರ್ಮದ ಹಿರಿಮೆಯನ್ನು ಎತ್ತಿ ಹಿಡಿದು ಭಾರತದಲ್ಲಿ ಸ್ತ್ರೀಯರ ಮೇಲಾದ ಅನ್ಯಾಯಕ್ಕೆ ನ್ಯಾಯ ತೆಗೆದುಕೊಡಲು ಮಾತ್ರ. ತ್ರೇತಾಯುಗದಲ್ಲಿ  ಪ್ರಖಾಂಡ ಪಂಡಿತ, ಶಿವತಾಂಡವ ಸ್ತೋತ್ರ ರಚಿಸಿದ ಮೇಧಾವಿ ವೀರಾಧಿವೀರ ರಾವಣನಂತಹ  ಅಪ್ರತಿಮ ಶಿವಭಕ್ತ ಮಾಡಿದ ತಪ್ಪಿಗೆ ಶಿಕ್ಷೆ ಕೊಟ್ಟ ನ್ಯಾಯ ಪುರುಷರು ಜನ್ಮವೆತ್ತಿರುವ ದೇಶ ನಮ್ಮದು. ಅನ್ಯಾಯ ಮಾಡಿದವರು ದೇವನೇ ಆಗಿರಲಿ, ಪ್ರಭಾವಿಯೇ ಆಗಿರಲಿ, ಪ್ರಧಾನಿಯೇ ಆಗಿರಲಿ ಮಾಡಿದ ಅನ್ಯಾಯಕ್ಕೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ವೇದ ಉಪನಿಷತ್ತು ತತ್ವ ಶಾಸ್ತ್ರ ಪುರಾಣಗಳು , ರಾಮಾಯಣ ಭಗವದ್ಗೀತೆ ಗಳು ಸಾರಿ ಸಾರಿ ಹೇಳುತ್ತದೆ. ಅದನ್ನೇ ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರಿಂದ ರಚಿತವಾದ ಭಾರತದ ಸಂವಿಧಾನವೂ ಆದೇಶಿಸುತ್ತದೆ ಎಂದರು.

ಭಾರತದ ಪ್ರಜೆಗಳಿಗೆ ಭಾರತದ ಸಂವಿಧಾನ ಕೊಟ್ಟಿರುವ ವಿಶೇಷ ಹಕ್ಕಿನ ಅಡಿಯಲ್ಲಿ ನ್ಯಾಯ ಸಮ್ಮತ ರೀತಿಯಲ್ಲಿ ನಡೆಯಲಿರುವ ಈ ಒಂದು ಶಾಂತಿಯುತ ನ್ಯಾಯ ಪರ ಹೋರಾಟಕ್ಕೆ ನ್ಯಾಯ ವಿರೋಧಿ  ಮನಸ್ಥಿತಿಗಳು ,ಅತ್ಯಾಚಾರಿಗಳ ಪರ ಇರುವ ದುಷ್ಟ ಶಕ್ತಿಗಳು ಅಡ್ಡಿಪಡಿಸಿದ್ದೇ ಆದಲ್ಲಿ, ಮುಂದಿನ ದಿನಗಳಲ್ಲಿ ಕಾರ್ಕಳದ ಪ್ರತಿ ಗ್ರಾಮ ಗ್ರಾಮಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ, ಬೂತು ಮಟ್ಟದಲ್ಲಿ ಸೌಜನ್ಯ ಪರ ಹೋರಾಟವನ್ನು ಸಂಘಟಿಸಲಾಗುತ್ತದೆ ಎಂದು ಈ ಮೂಲಕ ನಾವು ಸವಿನಯಪೂರ್ವಕವಾಗಿ ಎಚ್ಚರಿಸುತ್ತಿದ್ದೇವೆ ಎಂದು ಸೌಜನ್ಯ ಪರ ಹೋರಾಟ ಸಮಿತಿ ಪತ್ರಿಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!