ಮಂಗಳೂರು: ನಿಫಾ ಆತಂಕ - ಜಿಲ್ಲೆಯಲ್ಲಿ ವಿಶೇಷ ನಿಗಾ.!
ನಿಫಾ ಆತಂಕ ; ಗಡಿಯಲ್ಲಿ ಮುಂದುವರಿದ ತಪಾಸಣೆ

ಮಂಗಳೂರು: ಕೇರಳದಲ್ಲಿ ನಿಫಾ ಆತಂಕದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ ಮುಂದುವರಿಸಲಾಗಿದೆ. ಕೇರಳದ ವಡಗರ, ಕೋಯಿಕ್ಕೋಡ್‌ನಿಂದ ಆಗಮಿಸಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುವ ವಾಹನಗಳನ್ನು ವಿಶೇಷವಾಗಿ ತಪಾಸಣೆ ನಡೆಸಲಾಗುತ್ತಿದೆ.

ಮಂಗಳೂರಿನ ತಲಪಾಡಿ, ಸುಳ್ಯ ತಾಲೂಕಿನ ಮೂರೂರು, ಜಾಲ್ಸೂರು, ಬಡ್ಡಡ್ಕ, ಕನ್ನಡಿತೋಡು, ಪುತ್ತೂರು ತಾಲೂಕಿನ ಗಡಿಭಾಗಗಳಾದ ಸ್ವರ್ಗ, ಮೆನಾಲ, ಸುಳ್ಯಪದವು, ಬಂಟ್ವಾಳ ತಾಲೂಕಿನ ಸಾರಡ್ಕ, ಸಾಲೆತ್ತೂರು, ಕನ್ಯಾನ, ಬೆರಿಪದವಿನಲ್ಲಿ ತಪಾಸಣೆ ಮಾಡಿ ಜ್ವರ ಸಮೀಕ್ಷೆ ನಡೆಸಲಾಗುತ್ತಿದೆ.

ಈವರೆಗೆ ಯಾವುದೇ ನಿಫಾ ಶಂಕಿತ ಪ್ರಕರಣ ಕಂಡುಬಂದಿಲ್ಲ. ಒಂದು ವೇಳೆ ಜಿಲ್ಲೆಯಲ್ಲಿ ಅಂತಹ ರೋಗ ಲಕ್ಷಣ ಪತ್ತೆಯಾದರೆ ಅವರ ಚಿಕಿತ್ಸೆಗಾಗಿ ವೆನಾÉಕ್‌ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾ ಕೊಠಡಿ (ಐಸೋಲೇಶನ್‌ ವಾರ್ಡ್‌)ಗಳನ್ನು ಸನ್ನದ್ಧವಾಗಿಡಲಾಗಿದೆ

ಕೇರಳಕ್ಕೆ ಹೊಂದಿಕೊಂಡಿರುವ ದ.ಕ. ಜಿಲ್ಲೆಯ ಗಡಿ ಭಾಗಗಳಲ್ಲಿ ಅ. 10ರ ವರೆಗೆ ನಿಗಾ ಇಡಲು ಆರೋಗ್ಯ ಸಚಿವ ದಿನೇಶ್‌ ಗುಂಡೂ ರಾವ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜ್ವರ ತಪಾಸಣೆಯನ್ನು ಮುಂದುವರಿಸಬೇಕು, ಗಡಿಯಲ್ಲಿ ನಿಗಾ ಇಡಬೇಕೆಂದು ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!