ಆಧಾರ್ ಕಳೆದು ಹೋಗಿದ್ರೆ ನಿರ್ಲಕ್ಷ್ಯವಹಿಸದಿರಿ.! ಜನರಿಗೆ ಮಹತ್ವದ ಸಲಹೆ ಕೊಟ್ಟು ಎಚ್ಚರಿಸಿದ ಅಲೋಕ್​ ಕುಮಾರ್
ಮಹತ್ವದ ಸಲಹೆ ಕೊಟ್ಟ ಅಲೋಕ್​ ಕುಮಾರ್

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಶಂಕಿತ ಉಗ್ರ ಶಾರೀಕ್​, ಮೈಸೂರಲ್ಲಿ ಹಿಂದು ಯುವಕನೆಂದು ಹೇಳಿಕೊಂಡು ನಕಲಿ ಆಧಾರ್​ ಇಟ್ಟುಕೊಂಡು ಓಡಾಡುತ್ತಿದ್ದ. ಅಷ್ಟೇ ಅಲ್ಲ, ಟೆಕ್ಕಿಯೊಬ್ಬರ ಹೆಸರಲ್ಲಿ ಸಿಮ್​ ಕೂಡ ಪಡೆದಿದ್ದ.

ಫೋನ್​ ತರಬೇತಿಗೂ ನಕಲಿ ದಾಖಲೆ ಕೊಟ್ಟಿದ್ದ… ಇಂತಹ ಆಘಾತಕಾರಿ ಸಂಗತಿಗಳು ಒಂದೊಂದೇ ಬಯಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಸಾರ್ವಜನಿಕರಿಗೆ ಮಹತ್ವದ ಸಲಹೆ ಕೊಟ್ಟು ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

ಸಾರ್ವಜನಿಕರಿಗೆ ಅಲೋಕ್​ ಕುಮಾರ್​ ಅವರು ನೀಡಿರುವ ಸಲಹೆ ಇಲ್ಲಿದೆ

- ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಕಳೆದುಕೊಂಡರೆ ಜಾಗರೂಕರಾಗಿರಿ

- ಯುಐಡಿಎಐ ಸೈಟ್‌ನ ದುರುಪಯೋಗ ತಡೆಯಲು ಲಭ್ಯವಿರುವ ಲಾಕ್ ಮತ್ತು ಅನ್‌ಲಾಕ್ ಸೌಲಭ್ಯವನ್ನು ಬಳಸಿ

- ಅಪರಿಚಿತರಿಗೆ ಮನೆ ಬಾಡಿಗೆಗೆ ಕೊಡುವ ಮುನ್ನ ಅವರ ಪೂರ್ವಾಪರಗಳನ್ನು ಪರಿಶೀಲಿಸಿ. ಗುರತಿನ ಚೀಟಿಗಳ ಒಂದು ಪ್ರತಿ ಪಡೆದಿಟ್ಟುಕೊಳ್ಳಿ.

- ನಿಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಬಗ್ಗೆ ನಿಗಾ ಇಡಿ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!