ಮಂಗಳೂರು: ಕೊಲೆ ಪ್ರಕರಣ; ತಲೆಮರೆಸಿಕೊಂಡ ಆರೋಪಿ ಪತ್ತೆಗೆ ಲುಕ್ಔಟ್‌ ನೋಟಿಸ್
ಆರೋಪಿಗೆ ಲುಕ್ಔಟ್‌ ನೋಟಿಸ್

ಮಂಗಳೂರು: ಮುಲ್ಕಿಯಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಸಹಕರಿಸಲು ಪೊಲೀಸರು ಮನವಿ ಮಾಡಿದ್ದಾರೆ.

ಮುಲ್ಕಿ ಪೊಲೀಸ್ ಠಾಣೆ ಮೊಕದ್ದಮೆ ಸಂ. 38/2020 ಕಲಂ 143, 147, 148, 341, 307, 302, 395 23 149 ಐಪಿಸಿ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ 1ನೆ ಆರೋಪಿಯಾದ ದಾವೂದ್ ಹಕೀಮ್, ಬಪ್ಪನಾಡು ಮಂಗಳೂರು ಈತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಈಗಾಗಲೇ ನ್ಯಾಯಾಲಯವು ಹಲವು ಬಾರಿ ದಸ್ತಗಿರಿ ವಾರೆಂಟ್ ಹೊರಡಿಸಿದ್ದು ಹಾಗೂ ಪ್ರಸ್ತುತ ಈತನ ವಿರುದ್ಧ ನ್ಯಾಯಾಲಯವು ಪ್ರೋಕ್ಲಮೇಶನ್ ಕೂಡ ಹೊರಡಿಸಲಾಗಿದ್ದರೂ ಈತನು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ.

ಇನ್ನು ಆರೋಪಿ ಈವರೆಗೆ ಪತ್ತೆಯಾಗದೇ ಇರುವುದರಿಂದ ಈ ವ್ಯಕ್ತಿಯು ಕಂಡು ಬಂದರೆ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲು ಕೋರಲಾಗಿದೆ. ಪೊಲೀಸ್ ನಿರೀಕ್ಷಕರು, ಮುಲ್ಕಿ ಪೊಲೀಸ್ ಠಾಣೆ: 9480805332, ಪೊಲೀಸ್ ಉಪ ನಿರೀಕ್ಷಕರು ಮುಲ್ಕಿ ಪೊಲೀಸ್ ಠಾಣೆ 9480805359.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!