ಸುರತ್ಕಲ್: "ಗೂಳಿಯ ಪಾಲಿಗೆ ಆಪತ್ಭಾಂದವರಾದ ಬಜರಂಗದಳ  ಕಾರ್ಯಕರ್ತರು"
"ಗೂಳಿಯ ಪಾಲಿಗೆ ಆಪತ್ಭಾಂದವರಾದ ಬಜರಂಗದಳ ಕಾರ್ಯಕರ್ತರು"

ಸುರತ್ಕಲ್: ಕಷ್ಟದಲ್ಲಿದ್ದ ಗೂಳಿಗೆ ಸುರತ್ಕಲ್ ಬಜರಂಗದಳ ಕಾರ್ಯಕರ್ತರು ಆಸರೆಯಾದ ಘಟನೆ ನಡೆದಿದೆ.

ಉಷಾ ಸುವರ್ಣ ಎಂಬವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಗೂಳಿಯ ಸ್ಥಿತಿಯನ್ನು ಫೋಟೊ ಜೊತೆಗೆ ಒಂದು ಬರಹವನ್ನು ಹಂಚಿಕೊಂಡಿದ್ದರು ಫೇಸ್ ಬರಹವನ್ನು ನೋಡಿದ ಯುವವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಈ ವಿಷಯವನ್ನು ಬಜರಂಗದಳ ಕಾರ್ಯಕರ್ತರ ಗಮನಕ್ಕೆ ತಂದಿದ್ದು, ಇದಕ್ಕೆ ಸ್ಪದಿಂಸಿದ ಸುರತ್ಕಲ್ ಬಜರಂಗದಳ ಪ್ರಮುಖರಾದ, ಪ್ರೀತಂ ಕಾಟಿಪಳ್ಳ ಅವರ ಮುತುವರ್ಜಿಯಲ್ಲಿ ಬಜರಂಗದಳ ಕಾರ್ಯಕರ್ತರು ಗೂಳಿಯ ಪಾಲಿಗೆ ಆಪತ್ಭಾಂದವರಾಗಿದ್ದಾರೆ.

ಹಿಂದೆ ಕಣ್ಣಿನ ಭಾಗಕ್ಕೆ ಕೊಂಬು ತಗುತಿದ್ದ ಗೂಳಿಯನ್ನೂ ಇಂದು ಬಜರಂಗದಳ ಸುರತ್ಕಲ್ ಕಾರ್ಯಕರ್ತರು ಕಾರ್ಯಾಚರಣೆಗೆ ಇಳಿದು ಬೆಳ್ಳಿಗೆ 5 ಗಂಟೆಗೆ ಕಾರ್ಯಾಚರಣೆ ಆರಂಭಿಸಿ ಶ್ರಮ ಪಟ್ಟು ಯಾವುದೇ ಅರವಳಿಕೆ ನೀಡದೆ ಖಾಲಿ ಹಗ್ಗದ ಸಹಾಯದಿಂದ ಸುರತ್ಕಲ್ ಬಜರಂಗದಳ ದ 10 ಮಂದಿ ಕಾರ್ಯಕರ್ತರ ತಂಡ ಕಾರ್ಯಾಚರಣೆ ಮಾಡಿ ಗೂಳಿ ಹಿಡಿಯುವಲ್ಲಿ ಯಶಸ್ವಿಯಾಗಿದೆ ಹಾಗೇಯೇ ಮೂವರು ಪಶು ವೈದ್ಯಾಧಿಕಾರಿಯನ್ನು ಕರೆ ತಂದು ಚಿಕತ್ಸೆ ನೀಡಿ ಕಣ್ಣಿಗೆ ತಾಗುತಿದ್ದ ಗೂಳಿಯ ಕೊಂಬನ್ನು ಕತ್ತರಿಸಿ ಗೂಳಿಯ ಕಣ್ಣನು ರಕ್ಷಿಸಿದರು. ಆಯಾಸ ಗೊಂಡಿದ್ದ ಗೂಳಿಗೆ ನೀರು ಹಾಗೂ ಮೇವನ್ನು ತಿನಿಸಲಾಯಿತು.

ಫೇಸ್ ಬುಕ್ ಬರಹ

"ಈ ಗೂಳಿಯ ಬಗ್ಗೆ ಯಾರು ಕೂಡ ಅಷ್ಟೊಂದು ಆಸಕ್ತಿಯನ್ನು ತೆಗೆದುಕೊಳ್ಳುತ್ತಿಲ್ಲ. ಪಶು ವೈದ್ಯಾಧಿಕಾರಿ ಇಲಾಖೆಗೆ ಕರೆ ಮಾಡಿದರೆ ಅದನ್ನು ಕಟ್ಟಿ ಹಾಕಲು ನಮ್ಮಲ್ಲಿ ಜನಗಳ ವ್ಯವಸ್ಥೆ ಇಲ್ಲ ಆದ ಕಾರಣ ಅದನ್ನು ಯಾರಾದರೂ ಕಟ್ಟಿ ಹಾಕಿದರೆ ಮುಂದಿನ ಎಲ್ಲಾ ಚಿಕಿತ್ಸೆಯನ್ನು ನಾವು ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ ಇನ್ನು ಪಿಲಿಕುಲದವರಿಗೆ ಕರೆ ಮಾಡಿದರೆ ನೀವು ಫಾರೆಸ್ಟ್ ಡಿಪಾರ್ಟೆಂಟ್ ಅವರಿಗೆ ಕರೆ ಮಾಡಿ ಸಹಾಯ ಕೇಳಿ ಎಂದು ಹೇಳುತ್ತಾರೆ ಇನ್ನು ಫಾರೆಸ್ಟ್ ಡಿಪಾರ್ಟೆಂಟ್ ಗೆ ಕರೆ ಮಾಡಿದಾಗ ಅವರು ಹೇಳುತ್ತಾರೆ ನಾವು ಕೇವಲ ಕಾಡು ಪ್ರಾಣಿಗಳಿಗೆ ಮಾತ್ರ ಮಾಡುವುದು ಹೇಳಿದ್ದಾರೆ ಹಾಗೂ ನೀವು ಬೇಕಿದ್ದರೆ ಸುರತ್ಕಲ್ ನ ಡಿಪಾರ್ಟೆಂಟೆ ಒಮ್ಮೆ ಕರೆ ಮಾಡಿ ಎಂದು ಹೇಳುತ್ತಾರೆ, ನಂತರ ಸುರತ್ಕಲ್ ನ ಡಿಪಾರ್ಟೆಂಟ್ ಗೆ ಕರೆ ಮಾಡಿದಾಗ ಅವರು ನಾವು ನಿಮಗೆ ತಿಳಿಸುತ್ತೇವೆ ಎಂದು ಹೇಳಿ ಇಂದಿಗೆ ಎರಡು ದಿವಸವಾಗಿದೆ ಇನ್ನೂ ಕೂಡ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ,, ಇಲ್ಲಿ ಒಂದು ಮೂಕ ಪ್ರಾಣಿಯ ಬಗ್ಗೆ ಇವರೆಲ್ಲರೂ ಎಷ್ಟೊಂದು ಕಾಳಜಿ ವಹಿಸುತ್ತಿದ್ದಾರೆ ಎಂದು ಗಮನಿಸಬಹುದು,, ಇವರೆಲ್ಲ ಯಾತಕ್ಕಾದರೂ ಡಿಪಾರ್ಟೆಂಟ್ ಅಲ್ಲಿ ಕೆಲಸ ಮಾಡಬೇಕು ? ಇನ್ನು ಈ ಮೂಕ ಪ್ರಾಣಿಯು ಎಷ್ಟು ದಿನ ನೋವನ್ನು ತಿನ್ನಬೇಕು? ಇವರು ಸರಿಯಾಗಿ ಪ್ರತಿಕ್ರಿಯೆ ನೀಡದಿದ್ದರೆ ಇನ್ನು ಯಾರು ಇದನ್ನು ರಕ್ಷಿಸಲು ಸಾಧ್ಯ ? ಜನರಲ್ಲಿ ನನ್ನದೊಂದು ವಿನಂತಿ ದಯವಿಟ್ಟು ಯಾರಾದರೂ ಮುಂದೆ ಬಂದು ಇದನ್ನು ಕಟ್ಟಿ ಹಾಕಲು ಸಹಾಯವನ್ನು ಮಾಡಿ ." ಎಂಬುದಾಗಿತ್ತು.

ಇದನ್ನು ಗಮನಿಸಿದ ಯುವವಾಗ್ಮಿ  ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು, ಸುರತ್ಕಲ್ ಬಜರಂಗದಳ ಕಾರ್ಯಕರ್ತರ ಗಮನಕ್ಕೆ ತಂದ ಕಾರಣ ಗೂಳಿಯ ಕಷ್ಟವನ್ನು ದೂರವಾಗಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಬಜರಂಗದಳ ಕಾರ್ಯಕರ್ತರ ಹಾಗೂ‌ ಶ್ರೀ ಕಾಂತ್ ಶೆಟ್ಟಿಯವರ ಕಾರ್ಯಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!