ಮಂಗಳೂರಿಗೆ ಆಗಮಿಸಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ...
ಮಂಗಳೂರಿಗೆ ಆಗಮಿಸಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ...

ಮಂಗಳೂರು: ಮಂಗಳೂರಿಗೆ ಆಗಮಿಸಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿಯವರ ಕಾಂತಾರ ಕನ್ನಡ ಚಿತ್ರದ ತಂಡವು ಪತ್ರಕರ್ತರೊಂದಿಗೆ ತಮ್ಮ ಅನುಭವ ಕಥನವನ್ನು ಹಂಚಿಕೊಂಡಿತು. ಕಾಂತಾರ ಚಿತ್ರವು ಊರಿನ ದೈವಾರಾಧನೆ ಹಿನ್ನೆಲೆಯಲ್ಲಿ ಇದ್ದರೂ ಲೋಕದೆಲ್ಲೆಡೆ ಸದ್ದು ಮಾಡುತ್ತಿದೆ. ದೈವ ನರ್ತಕರಾದ ಮುಖೇಶ್ ಅವರು ದೈವ ಸನ್ನಿವೇಶಗಳೆಲ್ಲ ಸೊಗಸಾಗಿ ಬರಲು ಉಪಕರಿಸಿದ್ದಾರೆ ಎಂದು ರಿಷಬ್ ಶೆಟ್ಟಿ ಹೇಳಿದರು.

ಈ ಚಿತ್ರವನ್ನು ದಿವಂಗತ ಅಪ್ಪು ಪುನೀತ್ ರಾಜ್‍ಕುಮಾರ್ ಹಾಗೂ ಮುಖೇಶ್‌ರಿಗೆ ಈ ಕಾರಣಕ್ಕಾಗಿ ಅರ್ಪಿಸುತ್ತಿದ್ದೇನೆ. ಪ್ರಪಂಚದ ಎಲ್ಲ ಕಡೆ ಚಿತ್ರ ದಿನದಿಂದ ದಿನಕ್ಕೆ ಜನಪ್ರಿಯ ಆಗುತ್ತಿದೆ. ಪಂಜುರ್ಲಿ ಮತ್ತು ಗುಳಿಗ ದೈವದ ಭಕ್ತರು ಜಗತ್ತಿನೆಲ್ಲೆಡೆ ಇದ್ದಾರೆ. ಇತರ ಭಾಷೆಗೆ ಡಬ್ ಮಾಡುವಂತೆಯೂ ಬೇಡಿಕೆ ಬಂದಿದೆ ಎಂದು ರಿಷಬ್ ಶೆಟ್ಟಿ ತಿಳಿಸಿದರು.

ನಾಯಕಿ ಸಪ್ತಮಿ ಗೌಡ ಮಾತನಾಡಿ ಕಾಂತಾರಕ್ಕಾಗಿ ನಾನು ಇಲ್ಲಿನ ಕನ್ನಡ ಕಲಿತು ಮಾತನಾಡಿದೆ. ಅಲ್ಲದೆ ಕೋಲ ಅನುಭವ ನನಗೆ ಹೊಸ ಲೋಕ ತೋರಿಸಿದೆ ಎಂದು ಹೇಳಿದರು, ಇದು ನನ್ನ ಎರಡನೆಯ ಸಿನೆಮಾ ಎಂದರು.

ದೈವ ನರ್ತಕ ಮುಖೇಶ್ ಮಾತನಾಡಿ ದೈವಕ್ಕೆ ಅಪಚಾರ ಆಗದಂತೆ ಈ ಚಿತ್ರ ನಿರ್ಮಾಣ ಆಗಿದೆ, ಅದೇ ಈ ಕಾಂತಾರ ಕತೆಯ ಹೆಚ್ಚುಗಾರಿಕೆ ಎಂದು ಅವರು ತಿಳಿಸಿದರು.

ಖಳನಾಯಕ ಪಾತ್ರ ಮಾಡಿದ್ದ ಪ್ರಮೋದ್ ಶೆಟ್ಟಿ, ನಟರಾದ ಪ್ರಕಾಶ್ ತೂಮಿನಾಡು, ಸನಿಲ್ ಗುರು ಮೊದಲಾದವರು ಉಪಸ್ಥಿತರಿದ್ದರು. ಶಿವದೂತೆ ಗುಳಿಗ ನಾಟಕದಲ್ಲಿ ಹೆಸರು ಮಾಡಿದ್ದ ಸ್ವರಾಜ್ ಅವರು ಕೂಡ ಚಿತ್ರದಲ್ಲಿ ಒಂದು ಪಾತ್ರ ವಹಿಸಿದ್ದು ಅವರೂ ಭಾಗವಹಿಸಿ ಕೃತಜ್ಞತೆ ಸಲ್ಲಿಸಿದರು


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!