ಕೇರಳ ಲಾಟರಿ: ಕೋಟ್ಯಧೀಶೆಯಾದ್ರು 11 ಪೌರ ಕಾರ್ಮಿಕರು
ಪೌರ ಕಾರ್ಮಿಕ ಮಹಿಳೆಯರಿಗೆ 10 ಕೋಟಿ ಬಂಪರ್.!

ಇವರೆಲ್ಲಾ ಪೌರ ಕಾರ್ಮಿಕರು ಒಂದು ಹೊತ್ತಿನ ಊಟ ಮಾಡಬೇಕೆಂದರೆ ದುಡಿಯಲೇಬೇಕು. ಇಂತಹ 11 ಪೌರ ಕಾರ್ಮಿಕರ ಬಾಳಲ್ಲಿ ದಿಢೀರ್ ಅಂತ ಲಕ್ಷ್ಮಿಯ ಆಗಮನವಾಗಿದ್ದು, ಇದು ಕನಸೋ ನನಸೋ ಎಂದು ಅವರೆಲ್ಲಾ ಅಚ್ಚರಿಪಡುವಂತಾಗಿದೆ. ಇದಕ್ಕೆ ಕಾರಣವಾಗಿದ್ದು ಕೇರಳ ಲಾಟರಿ, ಕೇರಳದ 11 ಪೌರ ಕಾರ್ಮಿಕ ಮಹಿಳೆಯರ ಬಾಳಲ್ಲಿ ಲಾಟರಿ ಅದೃಷ್ಟದ ಬಾಗಿಲು ತೆರೆದಿದ್ದು, 10 ಕೋಟಿಯ ಲಾಟರಿ ಮಗುಚುವ ಮೂಲಕ ಲಕ್ಷ್ಮಿ ಮುಗ್ಗರಿಸಿದ್ದಾಳೆ. 

ಲಾಟರಿ ಗೆದ್ದ ಎಲ್ಲಾ 11 ಮಹಿಳೆಯರು ಮಲ್ಲಪ್ಪುರಂನ ಪರಪ್ಪನಂಗಡಿ ನಗರಸಭೆ ವ್ಯಾಪ್ತಿಯಲ್ಲಿ ಕೆಲಸ ಮಾಡುವವರಾಗಿದ್ದಾರೆ.  ಪ್ರತ್ಯೇಕವಾಗಿ ಒಂದೊಂದು ಟಿಕೆಟ್ ಖರೀದಿಸಲು ಸಾಧ್ಯವಿಲ್ಲದ ಕಾರಣ ಇವರೆಲ್ಲರೂ ಸೇರಿ 250 ರೂಪಾಯಿ ಮೌಲ್ಯದ ಒಂದು ಟಿಕೆಟ್‌ನ್ನು ಖರೀದಿಸಿದ್ದರು. ಬಿಆರ್92 ಎಂಬಿ200261 ಸಂಖ್ಯೆಯ ಟಿಕೆಟನ್ನು  ಇವರು ಖರೀದಿಸಿದ್ದು ಅದೃಷ್ಟ ಖುಲಾಯಿಸಿದೆ.  ತೆರಿಗೆ ಹಣ ಹಾಗೂ ಏಜೆಂಟ್ ಕಮೀಷನ್ ಕಳೆದು  ಉಳಿದ ಹಣವನ್ನು  ಎಲ್ಲಾ 11 ಮಹಿಳೆಯರ ಖಾತೆಗೆ ಸಮವಾಗಿ ಹಂಚಲಾಗುತ್ತದೆ.

ಪರಪ್ಪಂನಂಗಡಿ ನಗರಸಭೆಯ ‘ಹರಿತ ಕರ್ಮ ಸೇನೆ‘ಯ 11 ಮಹಿಳೆಯರು ತಲಾ ₹25 ಷೇರು ಹಾಕಿ ವಾರದ ಹಿಂದೆ ₹250ನ ಲಾಟರಿ ಟಿಕೇಟ್‌ ಖರೀದಿಸಿದ್ದರು. ಇದೀಗ ಅವರು ಕೋಟಿ ಕೋಟಿ ಹಣ ಗೆದ್ದಿದ್ದಾರೆ. ನಾವು ಮೊದಲು ಹಣವನ್ನು ಒಟ್ಟುಗೂಡಿಸಿ ಲಾಟರಿ ಟಿಕೇಟ್‌ ಖರೀದಿಸಿದ್ದೇವು, ಈಗ ಬಹುಮಾನ ಗೆದ್ದಿರುವುದು ಖುಷಿ ಹೆಚ್ಚಿಸಿದೆ’ ಎನ್ನುತ್ತಾರೆ ಲಾಟರಿ ಹಣ ವಿಜೇತೆ ರಾಧಾ ಎನ್ನುವ ಮಹಿಳೆ. ‘ಸಾಲಗಳ ಬಾಕಿ, ಮಕ್ಕಳ ಮದುವೆ, ಆಸ್ಪತ್ರೆ, ಚಿಕಿತ್ಸೆಯ ವೆಚ್ಚ ಸೇರಿ ನಾವೆಲ್ಲರೂ ಆರ್ಥಿಕವಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದೆವು. ಈಗ ಹಣ ಗೆದ್ದಿರುವುದು ಬದುಕಿನಲ್ಲಿ ಹಲವು ಸಮಸ್ಯೆಗಳ ನಿವಾರಣೆಗೆ ನೆರವಾಗಲಿದೆ’ ಎನ್ನುತ್ತಾರೆ ಇನ್ನೊಬ್ಬ ಮಹಿಳೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!